May 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿಯಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜು ಕ್ಯಾಂಪಸ್ ಉದ್ಘಾಟನೆ

ಬೆಳ್ತಂಗಡಿ: ಪ್ರಸುತ್ತ ಕಾಲಘಟ್ಟದಲ್ಲಿ ಭಾರತ ದೇಶ ಬದಲಾಗುತ್ತಿದ್ದು, ಕೇವಲ ಶೈಕ್ಷಣಿಕ ಅರ್ಹತೆ ಸಾಕಾಗದೆ, ವೃತ್ತಿಪರ ಕೌಶಲ್ಯಗಳು ಕೂಡ ಅವಶ್ಯಕ. ಇಂತಹ ವೃತ್ತಿ ಪರ ಶಿಕ್ಷಣ ಸಂಸ್ಥೆಗಳು ಹೊಸ ತಲೆಮಾರಿಗೆ ನಿಖರವಾದ ಮಾರ್ಗದರ್ಶನ ಒದಗಿಸುತ್ತವೆ ಎಂದು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವಾರಮ್ ಅಭಿಪ್ರಾಯಪಟ್ಟರು.

ಅವರು ಮೇ ೫ ರಂದು ಬೆಳ್ತಂಗಡಿಯಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜು ಮತ್ತು ದೇಶದ ಪ್ರತಿಷ್ಠಿತ ಸಂಸ್ಥೆ ಮೈಫ್ಸ್ ಮಿನರ್ವ ಕಾಲೇಜಿನ ಐತಿಹಾಸಿಕ ಸಹಭಾಗಿತ್ವದಲ್ಲಿ ಭವ್ಯ ಕಾಲೇಜು ಕ್ಯಾಂಪಸ್ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಅಧಿಕೃತ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ನ ಸಂಸ್ಥಾಪಕ, ಅನುಗ್ರಹ ಟ್ರೈನಿಂಗ್ ಕಾಲೇಜಿನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಪ್ರಾಂಶುಪಾಲ ತಲ್ಹತ್ ಎಂ.ಜಿ ಸವಣಾಲು ಮಾತನಾಡಿ, ಅನುಗ್ರಹ ಟ್ರೈನಿಂಗ್ ಕಾಲೇಜು ಆರಂಭದಿಂದಲೂ ಪ್ರಾದೇಶಿಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ, ಉದ್ಯೋಗಕ್ಕೆ ತಯಾರಿ, ಮತ್ತು ವ್ಯಕ್ತಿತ್ವವಿಕಾಸದಲ್ಲಿ ನೆರವಾಗುತ್ತಿದೆ. ಈ ಸಹಭಾಗಿತ್ವ ನಮ್ಮ ಸೇವೆಗೆ ಹೊಸ ಆಯಾಮ ನೀಡುತ್ತದೆ ಎಂದು ಹೇಳಿದ ಅವರು ಸಂಸ್ಥೆಯ ಆಯಾಮಗಳ ಕುರಿತು ವಿವರಿಸಿದರು.

ಸಂಸ್ಥೆಯ ಹಿನ್ನಲೆ:
ಅನುಗ್ರಹ ಎಜುಕೇಶನ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ (ರಿ) ಸಂಸ್ಥೆಯು ಕಳೆದ ೧೫ ವರ್ಷಗಳಿಂದ ಶೈಕ್ಷಣಿಕವಾಗಿ ಮತ್ತು ಸೇವಾ ಕ್ಷೇತ್ರಗಳಲ್ಲಿ ಸೇವೆಗಳನ್ನು ಸಲ್ಲಿಸುತ್ತಿದ್ದು ಅದರ ಭಾಗವಾಗಿ ತಾಂತ್ರಿಕ ಮತ್ತು ವೃತ್ತಿಪರ ತರಬೇತಿಗಳ ಶಿಕ್ಷಣ ಸಂಸ್ಥೆಯಾಗಿ ಕಳೆದ ೧೨ ವರ್ಷಗಳಿಂದ ಯಶಸ್ವಿಯಾಗಿ ಶಿಕ್ಷಣವನ್ನು ನೀಡುತ್ತಿದ್ದು ಮಾತ್ರವಲ್ಲ ಮಂಗಳೂರಿನ ಮುಡಿಪು ಎಂಬಲ್ಲಿ ಸಂಸ್ಥೆಯ ಇನ್ನೊಂದು ಶಾಖೆಯನ್ನು ತೆರೆದು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಂಸ್ಥೆಯಾಗಿದೆ. ಅನುಗ್ರಹ ಟ್ರೈನಿಂಗ್ ಕಾಲೇಜು ಹಾಗೂ ಕಳೆದ 20 ವರ್ಷಗಳಿಂದ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಹಲವಾರು ಯುನಿವರ್ಸಿಟಿಗಳ ಮಾನ್ಯತೆ ಇರುವ ಹಾಗೂ ಕೇಂದ್ರ ಸರಕಾರದ NSDC ಯಿಂದ ಅಂಗೀಕೃತಗೊಂಡ ಮಾತ್ರವಲ್ಲ ದೇಶದಾದ್ಯಂತ ಹಲವಾರು ಶಾಖೆಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಬೆಳ್ತಂಗಡಿಯ ಸಂತೆಕಟ್ಟೆಯ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿರುವ ಅನುಗ್ರಹ ಟ್ರೈನಿಂಗ್ ಕಾಲೇಜು ಮತ್ತು ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ ಮೈಫ್ಸ್ ಮಿನರ್ವಾ ಕಾಲೇಜಿನ ಜಂಟಿ ಸಹಭಾಗಿತ್ವದಲ್ಲಿ ಹೊಸ ಕಾಲೇಜು ಕ್ಯಾಂಪಸ್ ಅನ್ನು ಸ್ಥಾಪಿಸಿದ್ದು , ಎಲ್ಲಾ ರೀತಿಯ ಆಧುನಿಕ ಅಗತ್ಯತೆ ಇರುವ ಉದ್ಯೋಗಾವಕಾಶಕ್ಕೆ ಬೇಡಿಕೆ ಇರುವ ಪ್ರಮುಖ ಕೋರ್ಸುಗಳನ್ನು ಬೆಳ್ತಂಗಡಿಯಲ್ಲಿ ಪರಿಚಯಿಸಿ ಬಿಡ್ತಂಗಡಿಯಲ್ಲೇ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ಉದ್ಯೋಗಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಸ್ಥೆ ಇದೀಗ ಪರಿಚಯಿಸುತ್ತಿದೆ.

ಧಾರ್ಮಿಕ ಮುಖಂಡ, ವಿದ್ವಾಂಸ ಸಬರಬೈಲ್ ತಂಗಲ್ ಎಂದು ಪ್ರಕ್ಯಾತಿ ಪಡೆದ ಸೈಯದ್ ಜಮಲುಲ್ಲೈಲ್ ತಂಗಳ್ ಪ್ರಾರ್ಥಿಸಿದರು. ಜಿ ಇಸುಬು, ಅಬ್ದುಲ್ ಹಮೀದ್ ಮುಸ್ಲಿಯಾರ್ ಸವಣಾಲು, ಸವಣಾಲು ಬದ್ರಿಯಾ ಜುಮಾ ಮಸೀದಿಯ ಖತೀಬ್ ಉಸ್ತಾದ್ ರಿಯಾಝ್ ಸಹದಿ, ಕನ್ನಡಿಕಟ್ಟೆ ಜುಮಾ ಮಸೀದಿಯ ಖತೀಬ್ ಉಸ್ತಾದ್ ಅಶ್ರಫ್ ಫೈಝಿ, ಹಾಗೂ ನೌಶಾದ್ ಅಝ್ಹರಿ ಕಕ್ಕಿಂಜೆ, ಉಸ್ಮಾನ್ ಉಸ್ತಾದ್ ಕನ್ನಡಿಕಟ್ಟೆ ಪ್ರಾರ್ಥನೆಯಲ್ಲಿ ಭಾಗಿಯಾದರು. ಅನುಗ್ರಹ ಟ್ರೈನಿಂಗ್ ಕಾಲೇಜಿನ ನಿರ್ದೇಶಕ ಮುಹಮ್ಮದ್ ತೌಸೀಪ್ ಇವರು ಸಂಸ್ಥೆಯ ವೆಬ್ಸೈಟ್ ಕುರಿತು ವಿವರಿಸಿದರು. ಬೆಳ್ತಂಗಡಿ ತಾಲೂಕು ಮುಸ್ಲಿಂ ಒಕ್ಕೂಟ ಇದರ ಅಧ್ಯಕ್ಷ ನಝೀರ್ ಬೆಳ್ತಂಗಡಿ, ಕೆಪಿಸಿಸಿ ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಹನೀಫ್ ಉಜಿರೆ, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಹಿರಿಯ ಅಧಿಕಾರಿ ಬಿ ಸೇಕುನ್ನಿ ಬೆಳ್ತಂಗಡಿ, ಬಳಂಜ ತಕ್ವ ಜುಮಾ ಮಸೀದಿಯ ಝಮೀರ್ ಸಹದಿ, ಮುಸ್ಲಿಂ ಯುವಜನ ಪರಿಷತ್ ಇದರ ತಾಲೂಕ್ ಅಧ್ಯಕ್ಷ, ವಕೀಲ ನವಾಝ್ ಕಕ್ಕಿಂಜೆ, ಮುಖ್ಯವಾಗಿ ಮೈಫ್ಸ್ ಮಿನರ್ವ ಕಾಲೇಜಿನ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್, ಉದ್ಯಮಿ ಐ ಜಿ ಸಂಶುದ್ದೀನ್ ತುಂಬೆ, ಸುಲೈಮಾನ್ ಕಕ್ಕಿಂಜೆ, ಕಳಿಯ ಗ್ರಾ.ಪಂ.ಸದಸ್ಯ ಕರೀಮ್ ಗೇರುಕಟ್ಟೆ, ಶ್ರೀರಾಮ ಕಾಂಪ್ಲೆಕ್ಸ್ ಕಟ್ಟಡದ ಮಾಲೀಕರಾದ ಮುಕೇಶ್ ಆರ್ ನಾಯಕ್, ಬೆಳ್ತಂಗಡಿ ಅನುಗ್ರಹ ಸ್ಕೂಲ್ ಬುಕ್ ಕಂಪನಿ ಮಾಲಕ ಮಹಮ್ಮದ್ ಅಶ್ರಫ್ ಫೈಜಿ, ಹಾರೀಶ್ ಮುರ, ಖಾಲಿದ್ ಗಂಡಿ, ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ, ಎಆರ್ ಗ್ರೂಪ್ ಮಾಲಕ ಅಬ್ದುಲ್ ಹಮೀದ್, ಮೊಹಮ್ಮದ್ ನಾಸಿಕ್ ಮಲೆಬೆಟ್ಟು, ಮಹಮ್ಮದ್ ಆಶೀರ್ ಸವಣಾಲು ಹಾಗೂ ಪೋಷಕರು ಮತ್ತು ಮೋದಲಾದವರು ಶುಭ ಹಾರೈಸಿದರು. ನಿರ್ದೇಶಕನ ಅಬ್ದುಲ್ ಖಾದರ್ ಕಾರ್ಯಕ್ರಮ ನಿರ್ವಹಿಸಿದರು.

Related posts

ಮೈಸೂರು ಚಲೋ ಪ್ರತಿಭಟನಾ ಪಾದಯಾತ್ರೆಯ ಕುರಿತು ಪಕ್ಷದ ಪದಾಧಿಕಾರಿಗಳೊಂದಿಗೆ ಶಾಸಕ ಹರೀಶ್ ಪೂಂಜರಿಂದ ಸಿದ್ಧತಾ ಸಭೆ

Suddi Udaya

ವೇಣೂರು; ಪಡ್ಡಂದಡ್ಕ ಮಸೀದಿಯಲ್ಲಿ ಸಂಭ್ರಮದ ಈದ್ ದಿನಾಚರಣೆ

Suddi Udaya

ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿ ರಕ್ಷಿತ್ ಶಿವರಾಂ ಕೈ ಬಲ ಪಡಿಸಿದ ಮಚ್ಚಿನ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ

Suddi Udaya

ಬೆಳ್ತಂಗಡಿ ವಿ.ಹಿಂ.ಪ ಬಜರಂಗದಳ ಪ್ರಖಂಡದ ವತಿಯಿಂದ ಬಕ್ರೀದ್ ಹಬ್ಬದ ಸಂದರ್ಭ ಗೋ ಹತ್ಯೆಯನ್ನು ಖಂಡಿಸಿ ಪೋಲಿಸ್ ಠಾಣೆ ಮತ್ತು ಗೋ ಆಸ್ಪತ್ರೆಯ ಅಧಿಕಾರಿಗಳಿಗೆ ಮನವಿ

Suddi Udaya

ಮುಗೇರಡ್ಕ -ಅಲೆಕ್ಕಿ ಶ್ರೀ ರಾಮ ಶಿಶು ಮಂದಿರಕ್ಕೆ ಲಕ್ಮಿ ಇಂಡಸ್ಟ್ರಿಸ್ ಮಾಲಕ ಮೋಹನ್ ಕುಮಾರ್ ಭೇಟಿ ; ಸಂಘದ ಕಾರ್ಯ ಚಟುವಟಿಕೆ ಬಗ್ಗೆ ಮೆಚ್ಚುಗೆ

Suddi Udaya

ಡಾ ರವೀಶ್ ಪಡುಮಲೆಗೆ ಅಕ್ಷಯ ಗುರು ಪುರಸ್ಕಾರ

Suddi Udaya
error: Content is protected !!