May 10, 2025
Uncategorized

ಬೆಳ್ತಂಗಡಿ: ಸಮಾಜ ಸೇವಕ ಡಾ. ರವಿ ಪೂಜಾರಿ ಕಕ್ಕೆಪದವುರವರಿಗೆ ಕಾಯಕ ಯೋಗಿ ಪ್ರಶಸ್ತಿ ರಾಜ್ಯ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ:ಸಾಮಾಜಿಕ,ಧಾರ್ಮಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಮಾಡಿ,ಅರ್ಪಣಾ ಭಾವದಿಂದ ಸಮಾಜ ಸೇವೆ ಮಾಡುತ್ತಿರುವ ಡಾ. ರವಿ ಪೂಜಾರಿ ಕಕ್ಕೆಪದವು ಅವರಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಇವರ ಸಮಾಜ ಸೇವೆಯನ್ನು ಪರಿಗಣಿಸಿ ರಾಜ್ಯಮಟ್ಟದ ಕಾಯಕ ಯೋಗಿ- 2025 ಪ್ರಶಸ್ತಿ ನೀಡಿ ಗೌರವಿಸಿದೆ‌.

ಮೇ 1 ರಂದು ಬಾಗಲಕೋಟೆಯ ಶ್ರೀ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ರವಿ ಪೂಜಾರಿ ಕಕ್ಯಪದವು ಪ್ರಶಸ್ತಿ ಸ್ವೀಕರಿಸಿದರು.

ಡಾ. ರವಿ ಪೂಜಾರಿ ಕಕ್ಯಪದವು ಅವರು ಸುಬ್ರಹ್ಮಣ್ಯದಲ್ಲಿ ಸಮಾಜ ಸೇವಾ ಸಂಘಟನೆಯನ್ನು ಕಟ್ಟಿಕೊಂಡು ಬಡವರಿಗೆ,ನಿರ್ಗತಿಕರಿಗೆ,ಸಮಸ್ಯೆಗೊಳಗಾದವರನ್ನು ಸಂತೈಸುವ ಕೆಲಸ ಮಾಡುತ್ತಿದ್ದಾರೆ. ಮನೆ ಕಳೆದುಕೊಂಡ ಹಲವಾರು ಮಂದಿಗೆ ಸ್ವಂತ ಜಾಗ ನೀಡಿ, ಅವರಿಗೆ ಮನೆ ನಿರ್ಮಿಸಿ ಕೊಟ್ಟು ಒರ್ವ ನಿಜವಾದ ಸಮಾಜಸೇವಕರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೆ.

ತಾನು ವಿದ್ಯೆ ಕಲಿಯದಿದ್ದರು,ಶಿಕ್ಷಣ ಪಡೆಯಲು ಆರ್ಥಿಕ ಸಮಸ್ಯೆವಿದ್ದ ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಕೆಲಸವನ್ನು ರವಿ ಪೂಜಾರಿಯವರು ಮಾಡುತ್ತಿರುವುದು ಶ್ಲಾಘನೀಯವಾದುದು.

ಇವರ ಸಮಾಜ ಸೇವೆಗೆ ಜೆಸಿಐ,ರೋಟರಿ,ಲಯನ್ಸ್ ಕ್ಲಬ್, ಸಂಘ ಸಂಸ್ಥೆಗಳು ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ಸಮ್ಮಾನ ನೀಡಿ ಗೌರವಿಸಿದೆ.

Related posts

ಶಿಶಿಲ: ತೀರಾ ವಯೋಸಹಜದ ನೊಣಮ್ಮ ರವರಿಂದ ಮತದಾನ

Suddi Udaya

ದ.ಕ‌ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಗೌರವಾನ್ವಿತ ರಾಜ್ಯಪಾಲರ ಭೇಟಿ: ಕು.ಸೌಜನ್ಯಳ ಹತ್ಯೆ ಪ್ರಕರಣದ ಮರುತನಿಖೆಗೆ ಮನವಿ ಸಲ್ಲಿಕೆ

Suddi Udaya

ತಣ್ಣೀರುಪಂತ ಗ್ರಾ.ಪಂ. ವ್ಯಾಪ್ತಿಯಲ್ಲಿ ಕೂಸಿನ ಮನೆ ಶಿಶು ಪಾಲನಾ ಕೇಂದ್ರ ಉದ್ಘಾಟನೆ

Suddi Udaya

ಅಳದಂಗಡಿ: ಕಾಂಗ್ರೆಸ್ ಪಕ್ಷದ ಕಾರ್ಯಾಲಯ ಹಾಗೂ ಸೇವಾ ಸಿಂಧು ಕೇಂದ್ರದ ಉದ್ಘಾಟನೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದದಲ್ಲಿ ಜುಬಿಲಿ ವರ್ಷ ಉದ್ಘಾಟನೆ

Suddi Udaya

ಕಾಂಗ್ರೆಸ್ ಕಾರ್ಯಕರ್ತ ಯೋಗೀಶ್ ಗೌಡ ನೂಜಿಲ ಬಿಜೆಪಿಗೆ ಸೇರ್ಪಡೆ

Suddi Udaya
error: Content is protected !!