ಬೆಳ್ತಂಗಡಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ಕೃತ್ಯಕ್ಕೆ ಪ್ರತಿರೋಧವಾಗಿ ಭಾರತದ ಸೈನಿಕರು ನಡೆಸಿರುವ ಆಪರೇಷನ್ ಸಿಂಧೂರ್ ನ ಯಶಸ್ವಿ ಕಾರ್ಯಾಚರಣೆಯ ಬಗ್ಗೆ, ಸೈಯದ್ ಉಮರ್ ಅಸ್ಸಖಾಫ್ ತಂಙಳ್ ನೇತೃತ್ವದ ಬೆಳ್ತಂಗಡಿ ಮನ್ ಶರ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಬಿಗ್ ಸೆಲ್ಯೂಟ್ ಕಾರ್ಯಕ್ರಮ ನಡೆಸಲಾಯಿತು.
ಸಂಸ್ಥೆಯ ಪ್ರಾಂಶುಪಾಲ ಹೈದರ್ ಮರ್ದಾಳ ಅಪರೇಷನ್ ಸಿಂದೂರ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ನೆರೆದಿದ್ದ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಆಪರೇಷನ್ ಸಿಂದೂರ್ ನ ಯಶಸ್ವಿಗೆ ಕಾರಣರಾದ ಹೆಮ್ಮೆಯ ಸೈನಿಕರಿಗೆ ಬಿಗ್ ಸೆಲ್ಯೂಟ್ ಮಾಡುವ ಮೂಲಕ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿ, ಪ್ಯಾರಾ ಮೆಡಿಕಲ್ ಉಪ ಪ್ರಾಂಶುಪಾಲೆ ಗೌತಮಿ ಶರಣ್, ಪಿಯು ಕಾಲೇಜಿನ ಉಪನ್ಯಾಸಕರಾದ ನಿರುಪಮಾ, ಪವಿತ್ರ ಎಚ್, ನಿಶಾ, ಸುಪ್ರಿಯಾ, ಅಕೌಂಟೆಂಟ್ ಶಬೀರ್ ಪಲ್ಲಾದೆ, ಶಿಕ್ಷಕಿರಾದ ರಝಿಯಾ, ಸೈಫುನ್ನಿಸಾ, ಕಚೇರಿ ಸಿಬ್ಬಂದಿಗಳಾದ ಪ್ರಜ್ಞಾ ಹಾಗೂ ಹಫೀಫಾ ಉಪಸ್ಥಿತರಿದ್ದರು.