ಉಜಿರೆ : ಉಜಿರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನೂತನ ಅಧ್ಯಕ್ಷರಾಗಿ, ಕೇರಿಮಾರ್ ಬಾಲಕೃಷ್ಣ ಗೌಡ ಹಾಗೂ ಉಪಾಧ್ಯಕ್ಷರಾಗಿ ಶ್ರೀಧರ್ ಪೂಜಾರಿ ಅವರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇ 7ರಂದು ಸಂಘದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆಮಾಡಲಾಯಿತು.
ಅರವಿಂದ ಕಾರಂತ, ಅನಿಲ್ ಪ್ರಕಾಶ್ ಡಿ ಸೋಜ, ರಜತ ಗೌಡ, ಗುರುರಾಜ ಗೌಡ, ಪುಷ್ಪವತಿ ಆರ್. ಶೆಟ್ಟಿ, ವಾರಿಜ ಎಸ್. ಗೌಡ, ಸಾಧು ಎಂ. ಅಣ್ಣು ನಾಯ್ಕ, ಅರುಣ ಕುಮಾರ, ಬಾಲಕೃಷ್ಣ ಇವರು ನಿರ್ದೇಶಕರಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಸಹಕಾರಿ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಕಾರ್ಯನಿರ್ವಹಿಸಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಸ್ವತಿ ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.