
ಸೊಣಂದೂರು: ಪಣಕಜೆ ಬಸ್ ನಿಲ್ದಾಣದ ಬಲಿ ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಪ್ಲೈವುಡ್ ಲೋಡ್ ತುಂಬಿದ ಲಾರಿ ಚಾಲಕನ ನಿಯಂತ್ರಣ ತಪ್ಪಿ, ಪಲ್ಟಿಯಾದ ಘಟನೆ ಮೇ 9 ರಂದು ಮಧ್ಯಾಹ್ನ ನಡೆಯಿತು ಲಾರಿಯ ಚಾಲಕನಿಗೆ ಗಂಭೀರ ಗಾಯವಾಗಿದ್ದು ಸ್ಥಳೀಯರ ಸಹಕಾರದಿಂದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸುತ್ತಿದಿದ್ದಾರೆ. ಲಾರಿ ಪಲ್ಟಿಯಾದ ಸಮೀಪದಲ್ಲಿ ರಿಕ್ಷಾ ನಿಲ್ದಾಣವಿದ್ದು ಆ ಸಮಯದಲ್ಲಿ ಯಾವುದೇ ಆಟೋ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿ ಹೋಗಿದೆ.