
ಬೆಳ್ತಂಗಡಿ: ಮರೋಡಿ ಹರಂಬೆಟ್ಟು ಗುತ್ತು ಮನೆಯಲ್ಲಿ ಎ.೪ ರಂದು ಧರ್ಮನೋಮೋತ್ಸವ ಮತ್ತು ದೈವಗಳಿಗೆ ಗಗ್ಗರ ಸೇವೆಯು ನಡೆಯಿತು.
ಕುಂಭಕಂಠಿನೀ, ಮರೋಡಿ ದೈವಗಳ ಚಾವಡಿ ಪ್ರವೇಶ,ಮಂಚ ಪುನರ್ ಪ್ರತಿಷ್ಠೆ,ಪರಿವಾರ ದೈವಗಳ ಕಲಶಾಭಿಷೇಕ, ಪರ್ವ ಸಂಕ್ರಾಂತಿ ನೇರವೇರಿತು. ಶ್ರೀ ದೈವ ಕೊಡಮಣಿತ್ತಾಯ, ರಕ್ತೇಶ್ವರಿ, ಪಂಜುರ್ಲಿ ಹಾಗೂ ಕಲ್ಲುರ್ಟಿ-ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್,ಪಡ್ಯಾರಬೆಟ್ಟ ಕ್ಷೇತ್ರದ ಆಡಳಿತ ಮೊಕ್ತೇಸರ ಜೀವಂಧರ್ ಜೈನ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವ, ಕುಲದೀಪ್ ಚೌಟ ಮೂಡಬಿದ್ರೆ ಅರಮನೆ, ಪ್ರಮುಖರಾದ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ವಿವೇಕ್ ಆಳ್ವ, ಪ್ರಮುಖರಾದ ಜಯಂತ್ ಕೋಟ್ಯಾನ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು,ಬಂಧು ಮಿತ್ರರು ಉಪಸ್ಥಿತರಿದ್ದು ದೈವದ ಗಂಧ ಪ್ರಸಾದ ಸ್ವೀಕರಿಸಿದರು.

ಪಾರ್ಶ್ವನಾಥ ಜೈನ್,ಜಿನೇಂದ್ರ ಜೈನ್,ಪ್ರಪುಲ್ಲ ಯುವರಾಜ್ ಬೆಳ್ತಂಗಡಿ, ಶೀತಲ್ ಜೈನ್ ಶಿರ್ಲಾಲು ಹಾಗೂ ಹರಂಬೆಟ್ಟು ಗುತ್ತು ಮನೆಯವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ,ಸತ್ಕರಿಸಿದರು.