September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮರೋಡಿ:ಹರಂಬೆಟ್ಟು ಗುತ್ತು ಮನೆಯಲ್ಲಿ “ಧರ್ಮ ನೇಮೋತ್ಸವ”

ಬೆಳ್ತಂಗಡಿ: ಮರೋಡಿ ಹರಂಬೆಟ್ಟು ಗುತ್ತು ಮನೆಯಲ್ಲಿ ಎ.೪ ರಂದು ಧರ್ಮನೋಮೋತ್ಸವ ಮತ್ತು ದೈವಗಳಿಗೆ ಗಗ್ಗರ ಸೇವೆಯು ನಡೆಯಿತು.

ಕುಂಭಕಂಠಿನೀ, ಮರೋಡಿ ದೈವಗಳ ಚಾವಡಿ ಪ್ರವೇಶ,ಮಂಚ ಪುನರ್‌ ಪ್ರತಿಷ್ಠೆ,ಪರಿವಾರ ದೈವಗಳ ಕಲಶಾಭಿಷೇಕ, ಪರ್ವ ಸಂಕ್ರಾಂತಿ ನೇರವೇರಿತು. ಶ್ರೀ ದೈವ ಕೊಡಮಣಿತ್ತಾಯ, ರಕ್ತೇಶ್ವರಿ, ಪಂಜುರ್ಲಿ ಹಾಗೂ ಕಲ್ಲುರ್ಟಿ-ಪಂಜುರ್ಲಿ ದೈವಗಳ ನೇಮೋತ್ಸವ ನಡೆಯಿತು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರು, ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್,ಪಡ್ಯಾರಬೆಟ್ಟ ಕ್ಷೇತ್ರದ ಆಡಳಿತ ಮೊಕ್ತೇಸರ ಜೀವಂಧರ್ ಜೈನ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ‌ ಅಧ್ಯಕ್ಷ ಡಾ.ಮೋಹನ್ ಆಳ್ವ, ಕುಲದೀಪ್ ಚೌಟ ಮೂಡಬಿದ್ರೆ ಅರಮನೆ, ಪ್ರಮುಖರಾದ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರಾದ ವಿವೇಕ್ ಆಳ್ವ, ಪ್ರಮುಖರಾದ ಜಯಂತ್ ಕೋಟ್ಯಾನ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು,ಬಂಧು ಮಿತ್ರರು ಉಪಸ್ಥಿತರಿದ್ದು ದೈವದ ಗಂಧ ಪ್ರಸಾದ ಸ್ವೀಕರಿಸಿದರು.

ಪಾರ್ಶ್ವನಾಥ ಜೈನ್,ಜಿನೇಂದ್ರ ಜೈನ್,ಪ್ರಪುಲ್ಲ ಯುವರಾಜ್ ಬೆಳ್ತಂಗಡಿ, ಶೀತಲ್ ಜೈನ್ ಶಿರ್ಲಾಲು ಹಾಗೂ ಹರಂಬೆಟ್ಟು ಗುತ್ತು ಮನೆಯವರು ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ,ಸತ್ಕರಿಸಿದರು.

Related posts

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ 48ನೇ ವರ್ಷದ ಭಜನಾ ಸಪ್ತಾಹ : ಧಾರ್ಮಿಕ ಸಭೆ

Suddi Udaya

ಲಾಯಿಲ ಕರ್ನೋಡಿ ಸ.ಹಿ.ಪ್ರಾ. ಶಾಲೆಯಲ್ಲಿ ಸಂವಿಧಾನ ಆಚರಣೆ

Suddi Udaya

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಯೂಟ್ಯೂಬರ್‌ಗಳ ಆರೋಗ್ಯ ವಿಚಾರಿಸಿದ ಬೆಳ್ತಂಗಡಿ ಡಿ.ಎಸ್.ಎಸ್(ಅಂಬೇಡ್ಕರ್‌ವಾದ) ನಿಯೋಗ

Suddi Udaya

ಕಸ್ತೂರಿ ರಂಗನ್ ವರದಿ ವಿರುದ್ಧದ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆ

Suddi Udaya

ಮಾಲಾಡಿ : ಗ್ರಾಮ ಪಂಚಾಯತಿನ ದ್ವಿತೀಯ ಸುತ್ತಿನ ಗ್ರಾಮ ಸಭೆ

Suddi Udaya

ಕಾಶಿಪಟ್ಣ: ರಿಕ್ಷಾ ಪಲ್ಟಿ, ಶೀಘ್ರವಾಗಿ ರಸ್ತೆ ದುರಸ್ತಿಗೆ ಪಂಚಾಯತ್ ಗೆ ಮನವಿ

Suddi Udaya
error: Content is protected !!