ಮೇಲಂತಬೆಟ್ಟು: ಗ್ರಾಮ ಪಂಚಾಯತ್ ಮೇಲಂತಬೆಟ್ಟು, ಗ್ರಾಮ ಪಂಚಾಯತ್ ಅರಿವು ಕೇಂದ್ರ ಹಾಗೂ ಗ್ರಂಥಾಲಯ ಮೇಲಂತಬೆಟ್ಟು ಇವುಗಳ ಸಂಯೋಗದೊಂದಿಗೆ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ವು ಮೇ05 ರಂದು ಪ್ರಾರಂಭಗೊಂಡು ಮೇ 09 ರಂದು ಮುಕ್ತಾಯಗೊಂಡಿತು.

5 ದಿನದ ಬೇಸಿಗೆ ಶಿಬಿರದ ಸಂಪನ್ಮೂಲ ವ್ಯಕ್ತಿ ಯಾಗಿ ಶ್ರೀಮತಿ ಹೇಮಾವತಿ ವಲಯ ತರಬೇತುದಾರರು ಜೆಸಿಐ ಇಂಡಿಯಾ ಇವರು ಆಗಮಿಸಿ ಮಕ್ಕಳ ಬೌದ್ಧಿಕ ಹಾಗೂ ವ್ಯಕ್ತಿತ್ವ ವಿಕಸನ ಹಾಗೂ ಇತರ ಚಟುವಟಿಕೆಯನ್ನು ನಡೆಸಿಕೊಟ್ಟರು.ಮೇ 09 ರಂದು ಶಿಬಿರದ ಸಮಾರೋಪ ಸಮಾರಂಭವು ಗ್ರಾಮ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು. ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ಸವಿತಾ ಇವರು ಮಕ್ಕಳ ಭವಿಷ್ಯ ಕ್ಕೆ ಒಳ್ಳೆಯ ಹಿತನುಡಿ ಹೇಳಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿರ್ಮಲ್ ಕುಮಾರ್ ಶಿಬಿರದ ಪ್ರಯೋಜನ ಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಲೋಕನಾಥ ಶೆಟ್ಟಿ ಹಾಗೂ ಸದಸ್ಯರಾದ ಚಂದ್ರರಾಜ್ ಎಂ, ಶ್ರೀಮತಿ ಸುಮಲತಾ, ಶ್ರೀಮತಿ ದೀಪಿಕಾ ಹಾಗೂ ಸಿಬ್ಬಂದಿಗಳು ಹಾಜರಿದ್ದರು.
ಕಾರ್ಯಕ್ರಮಕ್ಕೆ ಅರಿವು ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ಚಂದ್ರಾವತಿ ಸಿಬ್ಬಂದಿಗಳು ಹಾಗೂ ವಿ ಆರ್ ಡಬ್ಲ್ಯೂ ಗಣೇಶ್ ಸಹಕರಿಸಿದರು. ಶ್ರೀಮತಿ ಚಂದ್ರಾವತಿ ಗ್ರಂಥಪಾಲಕಿ ಧನ್ಯವಾದವಿತ್ತರು.