ಬೆಳ್ತಂಗಡಿ: ವಿಶ್ವದ ಕೋಟ್ಯಾಂತರ ಭಕ್ತರ ಶ್ರದ್ದಾಕೇಂದ್ರ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಅತಿ ಸುಂದರವಾದ ದೇಗುಲ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿರುವುದು ಇಡೀ ಜಗತ್ತಿಗೆ ಸಂತೋಷವನ್ನುಂಟುಮಾಡಿದೆ.
ಇಂತಹ ಪುಣ್ಯಕ್ಷೇತ್ರದ ಪಕ್ಕದಲ್ಲಿ ದಕ್ಷಿಣದ ಅಯೋಧ್ಯೆಯೆಂದು ಖ್ಯಾತಿ ಹೊಂದಿದ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಶಾಖಾ ಮಠಕ್ಕೆ ಜಾಗವನ್ನು ಖರೀದಿ ಮಾಡಿದೆ. ಈ ಜಾಗದಲ್ಲಿ ಮೇ 19 ರಂದು ಬೆಳಗ್ಗಿನ 10.00 ಗಂಟೆಯ ಸುಮೂಹೂರ್ತದಲ್ಲಿ ಶಾಖಾ ಮಠದ ಶಿಲಾನ್ಯಾಸ, ಭೂಮಿ ಪೂಜೆಯನ್ನು ಅಯೋಧ್ಯೆ ಭರತ್ ಕುಂಡ ರಸ್ತೆ, ಅಂಕಾರದಲ್ಲಿ ನೆರವೇರಿಸಲಿದ್ದೇವೆ ಎಂದು
ನಿತ್ಯಾನಂದ ನಗರ, ಧಮಸ್ಥಳ, ಶ್ರೀ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರು ತಿಳಿಸಿದರು.

ಅವರು ಇಂದು(ಮೇ 9) ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಭೂಮಿ ಪೂಜೆಯಲ್ಲಿ ಅನೇಕ ವಿಭೂತಿ ಪುರುಷರು, ರಾಷ್ಟ್ರ ಮಟ್ಟದ, ರಾಜ್ಯಮಟ್ಟದ ನೇತಾರರು ಭಾಗವಹಿಸಲಿದ್ದಾರೆ. ಭಾಗವಹಿಸುವ ಪ್ರಧಾನ ವಿಭೂತಿ ಪುರುಷರಾದ ಆಚಾರ್ಯ ಮಾಹಾಮಂಡಲೇಶ್ವರ 1008 ಅವದೇಶಾನಂದ ಗಿರಿಜೀ ಮಹಾರಾಜ್ ಪಂಚದಶನಾಮ್ ಜುಣಾ ಅಖಾಡ, ಮಹಂತ್ ವಿದ್ಯಾನಂದ ಸರಸ್ವತಿಜೀ ಮಹಾರಾಜ್ ಅಂತರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಪಂಚದಶನಾಮ್ ಜುನಾ ಅಖಾಡ., ಮಹಂತ್ ಡಾ| ಸ್ವಾಮಿ ಭರತ್ ದಾಸ್‌ಜೀ ಮಹಾರಾಜ್ ಉದಾಸೀನ್ ಸಂಘತ್ ಋಷಿ ಆಶ್ರಮ್ ರಾಣೋಪಾಲಿ ಅಯೋಧ್ಯೆ, ಮಹಂತ್ ದೇವಾನಂದ್ ಸರಸ್ವತಿಜೀ ಮಹಾರಾಜ್ ಸಚಿವ ಶ್ರೀ ಪಂಚದಶನಾಮ್ ಜುನಾ ಅಖಾಡ ಹರಿದ್ವಾರ, ಮಹಂತ್ ಸುರೇಶ್ ದಾಸ್‌ಜೀ ಮಹಾರಾಜ್ ದಿಗಂಬರ ಅಖಾಡ ಅಯೋಧ್ಯೆ., ಮಹಂತ್ ಕಮಲನಯನ್ ದಾಸ್‌ಜೀ ಮಹಾರಾಜ್ ಚೋಟಿ ಚಾವಣಿ ಅಯೋಧ್ಯೆ, ಮಹಂತ್ ಅವದೇಶ್ ದಾಸ್‌ಜೀ ಮಹಾರಾಜ್ ಬಡಾಭಕ್ತಮಹಲ್ ಅಯೋಧ್ಯಾಧಾಮ್, ಮಹಂತ್ ರಾಜ್‌ಕುಮಾರ್ ದಾಸ್‌ಜೀ ಮಹಾರಾಜ್ ರಾಮವಲ್ಲಭ ಕುಂಜ ಅಯೋಧ್ಯಾಧಾಮ್, ಮಹಂತ್ ಸಂಜಯ್ ದಾಸ್‌ಜೀ ಮಹಾರಾಜ್ ಹನುಮಾನ್‌ಗಡಿ ಅಯೋಧ್ಯಾಧಾಮ್, ಮಹಂತ್ ರಾಜೂದಾಸ್‌ಜೀ ಮಹಾರಾಜ್ ಹನುಮಾನ್‌ಗಡಿ ಅಯೋಧ್ಯಾಧಾಮ್ ಭಾಗವಹಿಸಲಿದ್ದಾರೆ ಎಂದರು.
ಮುಖ್ಯ ಅಥಿತಿಗಳಾಗಿ ಬಿ.ಎಲ್. ಸಂತೋಷ್‌ಜೀ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭಾರತೀಯ ಜನತಾ ಪಾರ್ಟಿ ದಿಲ್ಲಿ, ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿ ಕರ್ನಾಟಕ ಸರ್ಕಾರ., ಮುಕುಂದ್‌ಜೀ ಸಂಯುಕ್ತ ಮಹಾಸಚಿವ ರಾಷ್ಟ್ರೀಯ ಸ್ವಯಂ ಸೇವಾ ಸಂಘ ಬೆಂಗಳೂರು, ವಿಜಯೇಂದ್ರ ಪ್ರದೇಶ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ, ಅಯೋಧ್ಯೆ ರಾನ ಜನ್ಮಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಮಂಕಾಲ ಎಸ್. ವೈದ್ಯ ಕ್ಯಾಬಿನೆಟ್ ಸಚಿವ , ಮಧು ಬಂಗಾರಪ್ಪ ಶಿಕ್ಷಣ ಸಚಿವರು , ವೇದ ಪ್ರಕಾಶ ಗುಪ್ತ, ಶಾಸಕರು ಅಯೋಧ್ಯಾ ನಗರ, ಅವದೇಶ್ ಪ್ರಸಾದ್, ಸಂಸದರು ಅಯೋಧ್ಯೆ, ಲಲ್ಲೂ ಸಿಂಹ ಪೂರ್ವ ಸಂಸದರು ಅಯೋಧ್ಯಾಧಾಮ್, ಅಭಯ್ ಸಿಂಹ ಶಾಸಕರು ಗೋಸಾಹಿ ಗಂಜಿ, ಅಯೋಧ್ಯೆ, ಸುನೀಲ್ ಕುಮಾರ್ ಶಾಸಕರು ಮಾಜಿ ಮಂತ್ರಿಗಳು, ಬ್ರಿಜೇಶ್ ಚೌಟ ಸಂಸದರು ಮಂಗಳೂರು, ಹರೀಶ್ ಪೂಂಜ, ಶಾಸಕರು ಬೆಳ್ತಂಗಡಿ, ಮದನ್ ಕೌಶಿಕ್ ಶಾಸಕರು ಹರಿದ್ವಾರ ಪೂರ್ವ ಕ್ಯಾಬಿನೇಟ್ ಮಂತ್ರಿಗಳು ಹರಿದ್ವಾರ, ನಳಿನ್ ಕುಮಾರ್ ಕಟೀಲ್ ಪೂರ್ವ ಸಂಸದರು ಪೂರ್ವ ಪ್ರದೇಶ ಅಧ್ಯಕ್ಷರು ಭಾರತೀಯ ಜನತಾ ಪಾರ್ಟಿ, ಭಿಮಣ್ಣ ಸಿರ್ಸಿ ಶಾಸಕರು ಸಿರ್ಸಿ ಕ್ಷೇತ್ರ, ಶ್ರೀಮತಿ ರೋಲಿ ಸಿಂಹ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅಯೋಧ್ಯೆ., ಮಹಂತ್ ಗಿರೀಶ್‌ಪತಿ ತ್ರಿಪಾಠಿ ಮೇಯರ್ ಅಯೋಧ್ಯಾಧಾಮ್, ಸಂಜೀವ ಸಿಂಹ ಜಿಲ್ಲಾಧ್ಯಕ್ಷ ಭಾರತೀಯ ಜನತಾ ಪಾರ್ಟಿ ಅಯೋಧ್ಯೆ, ಪದ್ಮರಾಜ್ ಕುದ್ರೋಳಿ ಕೆಪಿಸಿಸಿ ಜನರಲ್ ಸೆಕ್ರೆಟರಿ, ರಕ್ಷಿತ್ ಶಿವರಾಮ್ ಕೆಪಿಸಿಸಿ ಜನರಲ್ ಸೆಕ್ರೆಟರಿ, ದೇವತಾ ಪ್ರಸಾದ್ ಪಟೇಲ್ ಜಿಲ್ಲಾ ಪಂಚಾಯತ್ ಸದಸ್ಯ, ಅಯೋಧ್ಯೆ, ಶಿವೇಂದ್ರ ಸಿಂಹ ಬ್ಲಾಕ್ ಪ್ರಮುಖ್ ಪೂರಬಜಾರ್ ಅಯೋಧ್ಯೆ, ರಾಜೇಶ್ ಮೌರ್ಯ, ಪಂಚಾಯತ್ ಪ್ರಧಾನ್ ಅಂಕ್ವಾರ ಅಯೋಧ್ಯೆ, ರಾಮಜನಮ್ ವರ್ಮ ವರಿಷ್ಠ ಬಾ.ಜ.ಪ, ನೇತಾರರು ಅಯೋಧ್ಯೆ, ಅಮೀತ್ ಕುಮಾರ ಸಿಂಹ ಮಾಲಕರು, ಅವದೇಶ್ ಪ್ಯಾಲೇಸ್ ಮೋಹಸಿಂಪುರ್, ದ್ವಾರಿಕಾ ಪ್ರಸಾದ್ ದುಬೆ ಮೋಹಸಿಂಪುರ್ ಅಯೋಧ್ಯೆ ಈ ಎಲ್ಲಾ ಪ್ರಮುಖರು ಈ ಪುಣ್ಯತಮವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.