
ಗುರುವಾಯನಕೆರೆ: ಗ್ರಾಮ ಪಂಚಾಯತ್ ಕುವೆಟ್ಟು ಗ್ರಾಮ ಪಂಚಾಯತ್ ಅರಿವು ಕೇಂದ್ರ ಹಾಗೂ ಗ್ರಂಥಾಲಯ ಕುವೆಟ್ಟು ಇವುಗಳ ಸಂಯೋಗದೊಂದಿಗೆ ಮೇ5ರಿಂದ ಮೇ 9ರವರೆಗೆ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿಯವರು ಮಕ್ಕಳ ಭವಿಷ್ಯ ಕ್ಕೆ ಹಿತನುಡಿ ಹೇಳಿದರು.
ಐದು ದಿನಗಳ ಕಾಲ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ದಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೂ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ್ ರೈ ಶಿಬಿರದ ಪ್ರಯೋಜನಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಜಲಜಾಕ್ಷಿ ಆಶಾ ಕಾರ್ಯಕರ್ತೆ ಇವರು ಮಕ್ಕಳ ಅರೋಗ್ಯ ದ ಬಗ್ಗೆ , ಎ. ಡಿ ಸುರೇಶ್ ಇವರು ಸಂಗೀತ ದ ಮೌಲ್ಯ ಗಳ ಬಗ್ಗೆ , ಶ್ರೀಮತಿ ಪ್ರೇಮಲತಾ ಗಣೇಶ್ ಇವರು ಯೋಗದ ಪ್ರಯೋಜನ ಗಳ ಬಗ್ಗೆ , ಗೌರಿಪ್ರಸಾದ್ ಕ್ರಾಪ್ಟ್ ಕಲೆ ಹಾಗೂ ಕೊನೆ ದಿನ ಶ್ರೀಮತಿ ನಾಗವೇಣಿ ಎ ಕೋಟ್ಯಾನ್ ಇವರು ಮಕ್ಕಳ ಬೌದ್ಧಿಕ ವಿಕಸನ ಹಾಗೂ ಇತರ ಚಟುವಟಿಕೆ ಯನ್ನು ನಡೆಸಿ ಕೊಟ್ಟರು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಗಣೇಶ್ ಕೆ. ಸದಸ್ಯ ಹೇಮಂತ್ ಶೆಟ್ಟಿ , ಆಶಾ ಕಾರ್ಯಕರ್ತೆ ಶ್ರೀಮತಿ ಜಲಜಾಕ್ಷಿ, ಪಂಚಾಯತ್ ಕಾರ್ಯದರ್ಶಿ ಶ್ರೀಮತಿ ಸೇವಂತಿ ಎ ಹಾಗೂ ಸಿಬ್ಬಂದಿಗಳು ಹಾಜರಿದ್ದರು
ಅರಿವು ಕೇಂದ್ರದ ಮೇಲ್ವಿಚಾರಕಿ ಶ್ರೀಮತಿ ವಸಂತಿ ಸ್ವಾಗತಿಸಿ, ಸಿಬ್ಬಂದಿ ಗಳಾದ ಆನಂದ ಕೋಟ್ಯಾನ್,ಶ್ರೀಮತಿ ಯಶೋಧ ಶ್ರೀಮತಿ ಸೌಮ್ಯ, ದಿಲೀಪ್. ವಿ ಆರ್ ಡಬ್ಲ್ಯೂ ಸುಲೋಚನಾ ವಿ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು ಗಳು ಸಹಕರಿಸಿದರು ಶ್ರೀಮತಿ ಸೌಮ್ಯ ಧನ್ಯವಾದವಿತ್ತರು.