May 12, 2025
ರಾಷ್ಟ್ರೀಯ ಸುದ್ದಿ

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸಂಘರ್ಷಕ್ಕೆ ಕದನ ವಿರಾಮ ಘೋಷಣೆ

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಇದ್ದ ಸಂಘರ್ಷಕ್ಕೆ ಕದನ ವಿರಾಮ ಘೋಷಿಲಾಗಿದೆ. ಈ ಬಗ್ಗೆ ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಕದನ ವಿರಾಮದ ಬಗ್ಗೆ ಭಾರತ ಮತ್ತು ಪಾಕ್ ಒಪ್ಪಂದಕ್ಕೆ ಬಂದಿವೆ, ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟ ದೃಢವಾಗಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಟ್ವಿಟ್ ಮಾಡಿ ಹೇಳಿದ್ದಾರೆ.

‘. ‘ಭಾರತ ಮತ್ತು ಪಾಕಿಸ್ತಾನ ಇಂದು ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ ಒಪ್ಪಂದ ಮಾಡಿಕೊಂಡಿವೆ. ಭಾರತವು ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳ ವಿರುದ್ಧ ದೃಢ ಮತ್ತು ಸಂಧಾನವಾಗದ ನಿಲುವನ್ನು ನಿರಂತರವಾಗಿ ಕಾಯ್ದುಕೊಂಡಿದೆ. ಅದು ಹಾಗೆಯೇ ಮುಂದುವರಿಯುತ್ತದೆ.” ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕ‌ರ್ ಹೇಳಿದರು.
ಅಂದರೆ ಎರಡೂ ದೇಶಗಳ ಮಧ್ಯೆ ಇದ್ದ ಗುಂಡಿನ ದಾಳಿಗಳು ನಿಲ್ಲುತ್ತವೆ. ಆದರೆ ಉಗ್ರವಾದದ ವಿರುದ್ಧ ಭಾರತದ ಹೋರಾಟ ಮುಂದುವರೆಯುತ್ತದೆ ಎಂಬುದನ್ನು ಸ್ಪಷ್ಟವಾಗಿ ಜೈಶಂಕರ್ ಹೇಳಿದ್ದಾರೆ. ಇಂದು ಪ್ರಧಾನಿ ನೇತೃತ್ವದಲ್ಲಿ ಅವರ ನಿವಾಸದಲ್ಲಿ ನಡೆದ ಮೂರು ಸೇನೆಗಳ ಮುಖ್ಯಸ್ಥರ ನಡುವಿನ ಮತ್ತು ಉನ್ನತ ಮಟ್ಟದ ಸಭೆಯಲ್ಲಿ ಕೂಡ ಉಗ್ರ ರೀತಿಯಲ್ಲಿ ದಾಳಿ ನಡೆದರೆ ಭಾರತ ಅದನ್ನು ಯುದ್ಧವೆಂದೇ ಪರಿಗಣಿಸಲಿದೆ ಎಂಬ ನೀತಿಯನ್ನು ಹೊಂದಿರಲಿದ್ದೇವೆ ಎಂದು ಹೇಳಿತ್ತು. ಭಾರತದ ಮೇಲೆ ಉಗ್ರ ದಾಳಿಗೆ ತನ್ನ ನೆಲೆಗಳನ್ನು ಪಾಕಿಸ್ತಾನ ನೀಡಿದರೆ. ಭಾರತದ ಉತ್ತರ ಯುದ್ಧವೇ ಆಗಿರಲಿದೆ ಎಂಬುದು ಸ್ಪಷ್ಟ.
ಕದನ ವಿರಾಮಕ್ಕೆ ಮೊದಲು ಮಾತುಕತೆಗೆ ಒಪ್ಪಿಕೊಂಡಿದ್ದು ಪಾಕಿಸ್ತಾನದ್ದೇ ಆಗಿದೆ. ಮಧ್ಯಾಹ್ನ ಭಾರತದ ಡಿಜಿಒಎಂ ಗೆ ಮೊದಲ ಕರೆ ಪಾಕಿಸ್ತಾದಿಂದ ಬಂತು. ಈ ನಡುವೆ ಮೊದಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ನಡೆದಿದೆ ಎಂದು ಸಂಜೆ ಘೋಷಿಸಿದ್ದರು. ಹೀಗಾಗಿ ಅಮೆರಿಕದ ಮಧ್ಯಸ್ಥಿಕೆ ಯಾಕೆ ಎಂಬ ಪ್ರಶ್ನೆ ಈಗ ಮೂಡಿದೆ. ಯಾಕೆಂದರೆ ಭಾರತ ನಮ್ಮ ಸಮಸ್ಯೆಯನ್ನು ನಾವೇ ನಿವಾರಿಸಿಕೊಳ್ಳುತ್ತೇವೆ ಎಂದು ಮೊದಲಿನಿಂದಲೂ ಹೇಳಿಕೊಂಡು w໐໖໖.

ಸಂಜೆ 5 ಗಂಟೆಯಿಂದಲೇ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, ಮೇ.12ರಂದು ಭಾರತದ ಡಿಜಿಒಎಂ ಮತ್ತು ಪಾಕಿಸ್ತಾನದ ಡಿಜಿಒಎಂ ನಡುವೆ ಮಾತುಕತೆ ನಡೆಯಲಿದೆ. ಹೀಗಾಗಿ ಸದ್ಯಕ್ಕಂತೂ ಭಾರತ-ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಮೇ.12ರಂದು ಉಭಯ ದೇಶಗಳ ನಡುವೆ ಯಾವ ರೀತಿಯಲ್ಲಿ ಮಾತುಕತೆ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ಇಂದು ಮಧ್ಯಾಹ್ನ 3:35 ಗಂಟೆಗೆ ಭಾರತೀಯ ಡಿಜಿಎಂಒ ಅವರಿಗೆ ಮಾತುಕತೆಗೆ ಕರೆದರು. ಭಾರತೀಯ ಸಮಯ 5.00 ಗಂಟೆಯಿಂದ ಜಾರಿಗೆ ಬರುವಂತೆ ಭೂಮಿ, ಗಾಳಿ ಮತ್ತು ಸಮುದ್ರದಲ್ಲಿ ಎಲ್ಲಾ ರೀತಿಯ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಅವರ ನಡುವೆ ಒಪ್ಪಂದ ಮಾಡಿಕೊಳ್ಳಲಾಯಿತು.

Related posts

ಇಸ್ರೇಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಭಜರಂಗದಳ ನಿಷೇಧ ನಿರ್ಧಾರಕ್ಕೆ ಮತದಾನದ ದಿನ ಹಿಂದೂ ಸಮಾಜ ಉತ್ತರ ನೀಡಲಿದೆ: ಹರೀಶ್ ಪೂಂಜ

Suddi Udaya

ಡಾ. ಮನಮೋಹನ್ ಸಿಂಗ್ ಅವರ ಸಾಧನೆ, ಕೊಡುಗೆಗಳು ದೇಶಕ್ಕೆ ಎಂದಿಗೂ ಅಜರಾಮರ: ರಕ್ಷಿತ್ ಶಿವರಾಂ

Suddi Udaya

ಸಿದ್ದೇಶ್ವರ ಶ್ರೀ ಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ: ಬೊಮ್ಮಾಯಿ ಮನವಿ

Suddi Udaya

ಬೀಜಾಡಿಯ ಯೋಧ ಅನೂಪ್ ಪೂಜಾರಿಯವರ ಶವ ಪೆಟ್ಟಿಗೆಗೆ ಹೆಗಲು ಕೊಟ್ಟ ಸಂಸದ ಕ್ಯಾ| ಬ್ರಿಜೇಶ್ ಚೌಟ

Suddi Udaya

ಎಕ್ಸೆಲ್ ವಿದ್ಯಾ ಸಂಸ್ಥೆಗಳ ಸುಮಂತ್ ಕುಮಾರ್ ಜೈನ್‌ರವರಿಗೆಮಲೇಷಿಯಾ-ಇಂಡಿಯಾ ಅಂತರಾಷ್ಟ್ರೀಯ ಪ್ರಶಸ್ತಿ

Suddi Udaya
error: Content is protected !!