
ಬೆಳ್ತಂಗಡಿ: ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2005-08 ನೇ ಸಾಲಿನ ಬಿಎ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ‘ಜತೆಗೂಡಿ ಬಾಳೋಣ’ ಕಾರ್ಯಕ್ರಮ,ಗುರುವಂದನೆ,ರಕ್ತದಾನ ಶಿಬಿರ,ಬಡ ಮಕ್ಕಳಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಮೇ 10 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಮಾತನಾಡಿ ಬದುಕು ರೂಪಿಸಿದ ಗುರುಗಳ ನೆನೆಯುವುದು ಶ್ರೇಷ್ಠ ಕಾರ್ಯ ಎಂದರು.ವೇದಿಕೆಯಲ್ಲಿ ವಿ.ಪ.ಸದಸ್ಯ ಕೆ.ಪ್ರತಾಪಸಿಂಹ ನಾಯಕ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಸುರೇಶ್ ವಿಟ್ಲ ,ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ,ಮೇಲಂತಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸವಿತಾ ಉದ್ಘಾಟಿಸಿದರು. ಜೀವ ಸಾರ್ಥಕತೆ SOTTO ಕರ್ನಾಟಕದ ಸಂಚಾಲಕಿ ಪದ್ಮಾವತಿ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಅಧ್ಯಕ್ಷ ಹರಿದಾಸ ಎಸ್.ಎಂ., ಬೆಳ್ತಂಗಡಿ ಸ.ಪ್ರ.ದ.ಕಾ. ರಾ.ಸೇ.ಯೋಜನಾಧಿಕಾರಿ ರೊನಾಲ್ಡ್ ಪ್ರವೀಣ್ ಕೊರೆಯ, ಸ.ಪ್ರ.ದ.ಕಾ. ಸಂಚಾಲಕ ಯೂತ್ ರೆಡ್ ಕ್ರಾಸ್ ಸಂಚಾಲಕ ಡಾ.ರವಿ ಎಂ.ಎಸ್. ಸ.ಪ್ರ.ದ.ಕಾ. IQAC ಸಂಚಾಲಕ ಡಾ.ಕುಶಾಲಪ್ಪ ಎಸ್., ಸ.ಪ್ರ.ದ.ಕಾ. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪದ್ಮನಾಭ ಕೆ., ಮೇಲಂತಬೆಟ್ಟು ಗ್ರಾ.ಪಂ. ಸದಸ್ಯ ಚಂದ್ರರಾಜ್,ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ಕನ್ನಾಜೆ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಿಸಿದ ಸುಭಾಶ್ ಸುವರ್ಣ, ಸಂದೀಪ್ ಅಡ್ಯಂತಾಯ, ಪ್ರವೀಣ್, ಮಂಜಿತ್ ಶೆಟ್ಟಿ ಹಾಗೂ 2005-08 ನೇ ಸಾಲಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿರಿಯ ಉಪನ್ಯಾಸಕರಾದ ಅಶೋಕ್ ಭಂಡಾರಿ, ರೇಖಾ, ದಿನೇಶ್ ಬಿ.ಕೆ., ವಸಂತ್ ಬಿ.ಶೆಟ್ಟಿ, ಜಯಶ್ರೀ, ಡಾ.ಸುರೇಶ್ ರೈ, ಯಶೋಧಾ, ಸುರೇಶ್ ವಿಟ್ಲ ಅವರಿಗೆ ಗರುವಂದನಾ ಕಾರ್ಯಕ್ರಮ ನಡೆಯಿತು.ಇದೇ ವೇಳೆ ನೇತ್ರದಾನ ಶಿಬಿರದಲ್ಲಿ 95 ಮಂದಿ ನೇತ್ರದಾನ ಮಾಡಿದರು.ಒಟ್ಟು 75 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಹಳೇ ವಿದ್ಯಾರ್ಥಿ ಶ್ವೇತಾ ರೈ ಸ್ವಾಗತಿಸಿದರು. ಸಮೀಕ್ಷಾ ಪೂಜಾರಿ ಶಿರ್ಲಾಲು ನಿರೂಪಿಸಿದರು. ಮಂಗಳೂರು ವಿ.ವಿ. ಉಪನ್ಯಾಸಕ ಡಾ.ಶರತ್ ವಂದಿಸಿದರು.