ಬೆಳ್ತಂಗಡಿ :ಕುತ್ಯಾರು ಫ್ರೆಂಡ್ಸ್ ಬೆಳ್ತಂಗಡಿ ವತಿಯಿಂದ ಭಾರತ – ಪಾಕಿಸ್ತಾನ ನಡುವಿನ ಅಪರೇಶನ್ ಸಿಂದೂರ್ ಕಾರ್ಯಾಚರಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಭಾರತೀಯ ಸೇನೆಗೆ ಶಕ್ತಿ ತುಂಬಲು ಮೇ 9ರಂದು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ 108 ಸೀಯಾಳಭಿಷೇಕ ನಡೆಸಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಕುತ್ಯಾರು ಫ್ರೆಂಡ್ಸ್ ನ ಪ್ರಕಾಶ್ ಆಚಾರ್ಯ, ರವಿಕುಮಾರ್, ನಗರ ಪಂಚಾಯತ್ ಅಧ್ಯಕ್ಷರಾದ ಜಯಾನಂದ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶರತ್ ಕುಮಾರ್, ನಿವೃತ್ತ ಸೈನಿಕರಾದ ಶಿವಕುಮಾರ್, ವಕೀಲರಾದ ಅನಿಲ್ ಕುಮಾರ್, ಮೇಲಂತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರರಾಜ್, ಉದ್ಯಮಿ ವಿಶ್ವನಾಥ ಲಾಯಿಲ, ಶಶಿಧರ್ ಪೈ, ಪ್ರಮುಖರಾದ ಪದ್ಮಕುಮಾರ್, ಚಂದ್ರಶೇಖರ್, ಸದಸ್ಯರಾದ ಚೇತನ್, ಮಂಜುನಾಥ್ ವಿ, ಹರೀಶ್ ಉಪಸ್ಥಿತರಿದ್ದರು