ಪಡಂಗಡಿ: ಶ್ರೀ ಕ್ಷೇತ್ರ. ಓಡೀಲು ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧoತ್ಯುತ್ಸವವು ತಂತ್ರಿಗಳಾದ ವೇದಮೂರ್ತಿ ಉದಯ ಪಾಂಗಣ್ಣಾಯರವರ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ರಘುರಾಮ್ ಭಟ್ ಮಠ ಅವರ ಉಪಸ್ಥಿತಿಯಲ್ಲಿ ಮೆ 9 ರoದು ಜರಗಿತು

ಬೆಳಿಗ್ಗೆ ದೇವತಾ ಪ್ರಾರ್ಥನೆ. ಪುಣ್ಯಹ ವಾಚನ. ನವಕ ಪ್ರಧಾನ. ಏಕಾದಶ ರುದ್ರಾಭಿಷೇಕ ಮಹಾಕಲಶಭಿಷೇಕ. ಸಿಯಳಾಭಿಷೇಕ ಮಹಾಪೂಜೆ ಪ್ರಸಾದ ವಿತರಣೆ ಅನ್ನ ಸಂತರ್ಪಣೆ ಜರಗಿತು ವಿಶೇಷವಾಗಿ ಆಪರೇಶನ್ ಸಿಂಧೂರ ಹೆಸರಿನಲ್ಲಿ ಸೇನಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿರುವ ಭಾರತೀಯ ಸೇನೆಯ ಹೆಸರಿನಲ್ಲಿ ಮಾತೃಭೂಮಿಗೆ ಹೋರಾಡುವ ಎಲ್ಲಾ ಸೈನಿಕರಿಗೆ ಒಳಿತಾಗಲಿ ಎಂದು ವಿಶೇಷ ಸಂಕಲ್ಪ ದೊಂದಿಗೆ ಮಾಜಿ ಸೈನಿಕರ ಉಪಸ್ಥಿತಿಯಲ್ಲಿ ಹಾಗೂ ಭಕ್ತವ್ರoದದಿoದ ವಿಶೇಷ ಪ್ರಾರ್ಥನೆ ಮಾಡಲಾಯಿತು

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು ಹಾಗೂ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು ರಾತ್ರಿ ಪಶುಪತಿ ಯಕ್ಷಗಾನ ಬಯಲಾಟ ಸಮಿತಿ ಓಡಿಲ್ನಾಳ. ಕುವೆಟ್ಟು. ಪಡಂಗಡಿ. ಸೊಣಂದೂರು . ನಾಳ ಶ್ರೀ ದುರ್ಗಾಪರಮೇಶ್ವರಿ ಕ್ರಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ದಿವಂಗತ ಶ್ರೀ ಕೆ ವಸಂತ ಬಂಗೇರ ಇವರ ಸ್ಮರಣಾರ್ಥ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ಜರಗಿತು
