ಮೊಗ್ರು : ಮೇ 09 ಭಾರತ ಮಾತೆಯ ರಕ್ಷಣೆಗಾಗಿ ನಡೆದ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಭಾರತೀಯ ಸೇನೆಯ ಧೈರ್ಯವರ್ಧಣೆಗಾಗಿ, ಮತ್ತಷ್ಟು ಶಕ್ತಿಯನ್ನು ಆ ದೇವರು ಅನುಗ್ರಹಿಸಿ ಆಶೀರ್ವದಿಶಲಿ, ದೇಶಕ್ಕೆ ಒಳಿತಾಗಲಿ ಎಂದು ಮೊಗ್ರು ಗ್ರಾಮದ ಮುಗೇರಡ್ಕ-ಎರ್ಮಲದಲ್ಲಿ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಸಂದರ್ಭದಲ್ಲಿ ಕೇರಳದ ಪ್ರಸಿದ್ಧ ಬ್ರಹ್ಮಶ್ರೀ ಕುಂಬಳೆ ಆರಿಕ್ಕಾಡಿ ಯೋಗೀಶ ಕಡಮಣ್ಣಾಯ ತಂತ್ರಿಗಳ ನೇತೃತ್ವದಲ್ಲಿ ದೇಶದ ಪ್ರಧಾನ ಸೇವಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರಾಣವನ್ನು ಪಣಕಿಟ್ಟು ಹೋರಾಡುತ್ತಿರುವ ಕೆಚ್ಚೆದೆಯ ವೀರ ಯೋಧರಿಗೆ ಅರೋಗ್ಯ ಮತ್ತು ಅಪಾರ ಶಕ್ತಿ ನೀಡುವಂತೆ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಬಾಲಪ್ಪ ಗೌಡ,ಭೋಜ ಗೌಡ, ರಾಮಣ್ಣ ಗೌಡ,ಕುಶಾಲಪ್ಪ ಗೌಡ,ಪುರಂದರ ಗೌಡ, ಮನೋಹರ್ ಗೌಡ ಅಂತರ,ಚಂದ್ರಹಾಸ ಗೌಡ ದೇವಸ್ಯ, ಬಾಲಕೃಷ್ಣ ಗೌಡ ಮುಗೇರಡ್ಕ, ನಳಿನಿ ಸುಂದರ ಗೌಡ, ರಾಜೀವಿ ದಿನೇಶ್ ಗೌಡ, ದಯಾನಂದ ಗೌಡ, ಜಿನ್ನಪ್ಪ ಗೌಡ, ದೀಕ್ಷಿತ್ ಎರ್ಮಲ,ಸೀತಾರಾಮ್ ಗೌಡ,ಪ್ರಶಾಂತ್ ಗೌಡ, ಹರೀಶ್ ಗೌಡ, ಚಂದ್ರ ಉಳಿಯ,ಮನೋಜ್ ಹಾಗೂ ಎರ್ಮಲ ಕುಟುಂಬಸ್ಥರು,ಗ್ರಾಮಸ್ಥರು ಉಪಸ್ಥಿತರಿದ್ದರು.