
ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಸಿರಿಬೈಲು ಸಮೀಪದ ಮುತ್ತಲಕೋಡಿ ಎಂಬಲ್ಲಿ ಭಾನುವಾರ ಸಂಜೆ 6ಗಂಟೆ ಹೊತ್ತಿಗೆ ಕಾಡಾನೆ ಕಂಡು ಬಂದಿದೆ.
ಇಲ್ಲಿನ ಮನೆಗಳ ಸಮೀಪದಲ್ಲೇ ಕಾಡಾನೆ ಕಂಡು ಬಂದಿದ್ದು ಬಳಿಕ ಸಮೀಪದ ಅರಣ್ಯದತ್ತ ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕಳೆದ ಸುಮಾರು ಒಂದು ತಿಂಗಳಿನಿಂದ ಈ ಪ್ರದೇಶದಲ್ಲಿ ಕಾಡಾನೆಗಳ ಕಾಟ ಇರಲಿಲ್ಲ.ಆದರೆ ಭಾನುವಾರ ಸಂಜೆ ಹೊತ್ತಿಗೆ ಕಾಡಾನೆ ಜನ ವಾಸ್ತವ್ಯ ಇರುವ ಪ್ರದೇಶದ ಹತ್ತಿರವೇ ಬಂದಿದೆ.
