

ಬೆಳ್ತಂಗಡಿ; ತಾಲೂಕಿನ ಗೇರುಕಟ್ಟೆ ರೇಷ್ಮೆ ರೋಡ್ ಸಮೀಪ ಬೈಕಿಗೆ ಪಿಕಪ್ ಡಿಕ್ಕಿಹೊಡೆದು ಬೈಕ್ ಸವಾರ ಮೃತಪಟ್ಟ ಘಟನೆ ಮೇ 10 ರಂದು ನಡೆದಿದೆ.ಮೃತ ವ್ಯಕ್ತಿ ಖಾಸಗಿ ಬಸ್ ನಲ್ಲಿ ಚಾಲಕನಾಗಿರುವ ಸುಕೇಶ್ ಶೆಟ್ಟಿ ರೇಷ್ಮೆ ರೋಡ್ ಎಂದು ತಿಳಿದು ಬಂದಿದೆ.

ಅಪಘಾತ ನಡೆಸಿದ ಪಿಕಪ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ, ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.