ಬಂದಾರು: ಭಾರತ ಮಾತೆಯ ರಕ್ಷಣೆಗಾಗಿ ನಡೆದ ಆಪರೇಷನ್ ಸಿಂಧೂರ ಯಶಸ್ವಿ ಕಾರ್ಯಾಚರಣೆ ಪ್ರಯುಕ್ತ ಭಾರತೀಯ ಸೇನೆಯ ಧೈರ್ಯವರ್ಧಣೆಗಾಗಿ, ಮತ್ತಷ್ಟು ಶಕ್ತಿಯನ್ನು ಆ ದೇವರು ಅನುಗ್ರಹಿಸಿ ಆಶೀರ್ವದಿಸಲಿ, ದೇಶಕ್ಕೆ ಒಳಿತಾಗಲಿ ಎಂದು ಮೇ ೯ರಂದು ಪೆರ್ಲ-ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸೈನಿಕ ಲಿಂಗಪ್ಪ ಗೌಡ ಪಯ್ಯೋಡಿ ಹಾಗೂ ಪೆರ್ಲ-ಬೈಪಾಡಿ ವಾರ್ಡ್‌ನ ಭಾರತೀಯ ಜನತಾ ಪಾರ್ಟಿ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.