September 6, 2026
ಚಿತ್ರ ವರದಿಧಾರ್ಮಿಕವರದಿ

ಇಳಂತಿಲ: ಶ್ರೀ ಮಹಾಭಾರತ ಸರಣಿಯ 75ನೇ ತಾಳಮದ್ದಳೆ ಮತ್ತು ಸನ್ಮಾನ

ಇಳಂತಿಲ: ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಸುವರ್ಣ ಮಹೋತ್ಸವದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯ 75ನೇ ಕಾರ್ಯಕ್ರಮವಾಗಿ ಗಾಂಡಿವ ನಿಂದನೆ ತಾಳಮದ್ದಳೆ ಇಳಂತಿಲ ಗ್ರಾಮದ ಇಚೂರು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಜರಗಿತು.

ಶ್ರೀ ನರಸಿಂಹ ಜಯಂತಿಯ ಪ್ರಯುಕ್ತ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವತರಾಗಿ ಸುರೇಶ್ ರಾವ್ ಬಿ, ನಿತೀಶ್ ಕುಮಾರ್ ವೈ, ಪದ್ಮನಾಭ ಕುಲಾಲ್ ಇಳಂತಿಲ ಹೀಮ್ಮೆಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿ ಭಟ್ ಉಪ್ಪಿನಂಗಡಿ ಹಾಗೂ ಅರ್ಥಧಾರಿಗಳಾಗಿ ಜಬ್ಬಾರ್ ಸಮೊ (ಅರ್ಜುನ ) ದಿವಾಕರ ಆಚಾರ್ಯ ಗೇರುಕಟ್ಟೆ( ಶ್ರೀ ಕೃಷ್ಣ ) ಶ್ರೀಧರ ಎಸ್ಪಿ ಸುರತ್ಕಲ್ ಮತ್ತು ಜಿನೇಂದ್ರ ಜೈನ್ ಬಳ್ಳಮಂಜ (ಧರ್ಮರಾಯ ) ಗೀತಾ ಕುದ್ದಣ್ಣಾಯ ಕರಾಯ(ಕರ್ಣ) ಪ್ರದೀಪ ಹೆಬ್ಬಾರ್ ಚಾರ (ಶಲ್ಯ ) ಪೂರ್ಣಿಮಾ ಪುತ್ತೂರಾಯ (ದ್ರೌಪದಿ ) ಭಾಗವಹಿಸಿದ್ದರು. ಹಿರಿಯ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯ ಮತ್ತು ಅರ್ಥದಾರಿ ಜಬ್ಬಾರ್ ಸಮೋ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಬಾಲಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಧ್ಯಕ್ಷರಾದ ಸುರೇಶ್ ಪುತ್ತುರಾಯ, ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಶ್ರೀಧರ್ ಎಸ್ಪಿ,ಪದ್ಮುಂಜ ಸಿಎ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕರಾದ ರಘುಪತಿ ಭಟ್ ಅನಾಬೆ, ತಿಲಕ್ ಉರುವಾಲು ಕಲಾವಿದರನ್ನು ಗೌರವಿಸಿದರು. ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಅಭಿನಂದನ ನುಡಿಗಳನ್ನಾಡಿದರು. ಸುಂದರ ಶೆಟ್ಟಿ ಇಳಂತಿಲ ಸ್ವಾಗತಿಸಿ ಪೂರ್ಣಿಮಾ ಪುತ್ತುರಾಯ ವಂದಿಸಿದರು.

Related posts

ಪಡ್ಡಂದಡ್ಕ ನಿವೃತ್ತ ಮುಖ್ಯೋಪಾಧ್ಯಾಯ ತಿರುಮಲೇಶ್ವರ ಭಟ್ಟರಿಗೆ ‘ಹವ್ಯಕ ಶಿಕ್ಷಕ ರತ್ನ’ ಪ್ರಶಸ್ತಿ

Suddi Udaya

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ಕಾರ್ಮಿಕರ ಮಹಾಸಭೆ

Suddi Udaya

ಗರ್ಡಾಡಿ: ಮುಗೇರಡ್ಕ ಶ್ರೀ ಕೊಡಮಣಿತ್ತಾಯ, ಪಡ್ತ್ರಾವಂಡಿ ಕ್ಷೇತ್ರ ಬದಿನಡೆಯಲ್ಲಿ ಪ್ರತಿಷ್ಠಾ ಮಹೋತ್ಸವ ಮತ್ತು ಸಿರಿ ಸಿಂಗಾರದ ನೇಮೋತ್ಸವ

Suddi Udaya

ಡೆನ್ನಾನ ಡೆನ್ನನ ಅಂತರ್ ಘಟಕ ಸಾಂಸ್ಕೃತಿಕ ಸ್ಪರ್ಧೆ: ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಚತುರ್ಥ ಸ್ಥಾನ

Suddi Udaya

ಕೆಮ್ಮಿನ ಸಿರಪ್‌ ಗೆ ವೈದ್ಯರ ಚೀಟಿ ಕಡ್ಡಾಯ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

Suddi Udaya

ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ್ದೇ ರಸ್ತೆಯಲ್ಲೇ ಹರಿದ ನೀರು: ಬಂಗಾಡಿ ಸಿಎ ಬ್ಯಾಂಕ್ ಹಾಗೂ ಜೈನ ಬಸದಿ ವತಿಯಿಂದ ಪೈಪ್ ಅಳವಡಿಕೆ: “ಸುದ್ದಿ ಉದಯ ಜನಧ್ವನಿ Effect”

Suddi Udaya
error: Content is protected !!