ಬಳಂಜ: ಬಳಂಜ ಯುವ ಬಿಲ್ಲವ ವೇದಿಕೆ ಸಹಕಾರದೊಂದಿಗೆ,ಲತೇಶ್ ಪೆರಾಜೆ,ಹರೀಶ್ ಮಜ್ಜೇನಿ ಇವರ ನೇತೃತ್ವದಲ್ಲಿ ನಡೆದ ಬಿಲ್ಲವ ಸಮಾಜ ಬಾಂಧವರ ಬಿಡ್ಡಿಂಗ್ ಮಾದರಿಯ ಪುರುಷರ ವಾಲಿಬಾಲ್ ಪಂದ್ಯಾವಳಿ ಬಳಂಜ ಶ್ರೀ ದೈವ ಕೊಡಮಣಿತ್ತಾಯ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಯುವ ಉದ್ಯಮಿ ಅಭಿನಂದನ್ ಹರೀಶ್ ಕುಮಾರ್ ಉದ್ಘಾಟಿಸಿ ಮಾತನಾಡಿ ನಿರಂತರ ಕಾರ್ಯಚಟುವಟಿಕೆಗಳಿಂದ ಸಮಾಜಕ್ಕೆ ಶಕ್ತಿಯಾಗಿ ಕೆಲಸ ಮಾಡುತ್ತಿರುವ ಬಳಂಜ ಬಿಲ್ಲವ ಸಂಘ ಮಾದರಿ ಸಂಘ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ವಹಿಸಿದ್ದರು.
ಸನ್ಮಾನ: ತಾಲೂಕಿನ ಶ್ರೇಷ್ಠ ವಾಲಿಬಾಲ್ ಆಟಗಾರ ಗಗನ್ ಪೂಜಾರಿ ಮೈರೋಳ್ತಡ್ಕ ಅವರನ್ನು ಕಾರ್ಯಕ್ರಮದಲ್ಲಿ ಯುವ ಬಿಲ್ಲವ ವೇದಿಕೆಯಿಂದ ಸನ್ಮಾನಿಸಲಾಯಿತು.

ಕ್ರೀಡಾಂಗಣದ ಉದ್ಘಾಟನೆಯನ್ನು ಹಿರಿಯರು, ಉದ್ಯಮಿ ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು ಅವರು ಉದ್ಘಾಟಿಸಿ ಶುಭ ಕೋರಿದರು.
ವೇದಿಕೆಯಲ್ಲಿ ಬೆಳ್ತಂಗಡಿ ಬೆಸ್ಟ್ ಪೌಂಢೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್,ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ,ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು,ಯುವ ಸಂಘಟಕ ಸುರೇಶ್ ಪೂಜಾರಿ ಜೈಮಾತಾ ನಾಲ್ಕೂರು, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ದೇಜಪ್ಪ ಪೂಜಾರಿ,ಯುವ ಬಿಲ್ಲವ ವೇದಿಕೆ ಬೆಳ್ತಂಗಡಿ ಮಾಜಿ ಅಧ್ಯಕ್ಷ ರಂಜಿತ್ ಹೆಚ್.ಡಿ,ಅಳದಂಗಡಿ ಸಿಎ ಬ್ಯಾಂಕ್ ಮಾಜಿ ನಿರ್ದೇಶಕ ಜಿನ್ನಪ್ಪ ಪೂಜಾರಿ,ಬಳಂಜ ಸಂಘದ ಮಾಜಿ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ನಿಟ್ಟಡ್ಕ,ಬಾಲಕೃಷ್ಣ ಪೂಜಾರಿ ಯೈಕುರಿ, ಪ್ರವೀಣ್ ಕುಮಾರ್ ಹೆಚ್.ಎಸ್ ,ಬಳಂಜ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಸದಾನಂದ ಸಾಲಿಯಾನ್,ಯುವ ಉದ್ಯಮಿ ಪ್ರದೀಪ್ ಕೆಂಪುಂರ್ಜ, ಉದ್ಯೋಗಿ ವಿಜಯ್ ಪೂಜಾರಿ ಯೈಕುರಿ, ಎಕ್ಸೆಲ್ ಕಾಲೇಜಿನ ಎಸ್.ಡ್ಲ್ಯೂ.ಓ ಸಂದೀಪ್ ಪೂಜಾರಿ,ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸಂಚಾಲಕ ಹರೀಶ್ ವೈ,ಯುವ ಉದ್ಯಮಿ ದೀಪಕ್ ಹೆಚ್.ಡಿ ಪುರಂದರ ಪೆರಾಜೆ,ಸಂಘದ ಕಾರ್ಯದರ್ಶಿ ಜಗದೀಶ್ ಪೂಜಾರಿ ಬಳ್ಳಿದಡ್ಡ, ಬಳಂಜ ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ದುಗ್ಗಯ ಪೂಜಾರಿ ಹುಂಬೆಜೆ,ಯೋಗೀಶ್ ಕೊಂಗುಲ,ಸತೀಶ್ ಪೂಜಾರಿ ಹೇವ,ಜಯಾನಂದ ನಂದ್ರಟ್ಟ, ಹರೀಶ್ ಡೆಪ್ಪುಣಿ, ಯುವ ಉದ್ಯಮಿ ಜಗದೀಶ್ ಪೂಜಾರಿ ಪೆರಾಜೆ,ಜನಾರ್ಧನ ಪೂಜಾರಿ ಜೈಮಾತ, ಸುಭಾಶ್ ಹೇವ, ಉಪಸ್ಥಿತರಿದ್ದರು.

ಸಂಘದ ನಿರ್ದೇಶಕರಾದ ಸಂತೋಷ್ ಕುಮಾರ್ ಕಾಪಿನಡ್ಕ,ಯೋಗೀಶ್ ಯೈಕುರಿ, ರಂಜಿತ್ ಮಜಲಡ್ಡ,ಯತೀಶ್ ವೈ.ಎಲ್,ದಿನೇಶ್ ಪೂಜಾರಿ ಅಂತರ,ದಿನೇಶ್ ಕೋಟ್ಯಾನ್ ಕುದ್ರೋಟ್ಟು,ಜಗದೀಶ್ ಕೋಟ್ಯಾನ್ ತಾರಿಪಡ್ಪು, ಪ್ರವೀಣ್ ಪೂಜಾರಿ ಲಾಂತ್ಯಾರು,ಪ್ರದೀಪ್ ಪೂಜಾರಿ ಕಾಪಿನಡ್ಕ, ಸದಾನಂದ ಪೂಜಾರಿ ಬೊಂಟ್ರೋಟ್ಟು, ಪ್ರವೀಣ್ ಡಿ ಕೋಟ್ಯಾನ್ ದರ್ಖಾಸು,ರಕ್ಷಿತ್ ಬಗ್ಯೋಟ್ಟು,ಮಹಿಳಾ ಬಿಲ್ಲವ ವೇದಿಕೆ ಅಧ್ಯಕ್ಷೆ ಭಾರತೀ ಸಂತೋಷ್ ಸಹಕರಿಸಿದರು.
ಯುವ ಸಾಹಿತಿ ಚಂದ್ರಹಾಸ ಬಳಂಜ ಸ್ವಾಗತಿಸಿ,ಲತೇಶ್ ಪೆರಾಜೆ,ಹರೀಶ್ ಮಜ್ಜೇನಿ ವಂದಿಸಿದರು.ಯುವ ಬಿಲ್ಲವ ವೇದಿಕೆ ಸದಸ್ಯರು ಸಹಕರಿಸಿದರು.
