ನಡ: ವಿಶ್ವಹಿಂದೂ ಪರಿಷದ್ ಬಜರಂಗದಳ ನರಸಿಂಹಗಡ ಬೆಳ್ತಂಗಡಿ ಪ್ರಖಂಡ, ಶ್ರೀ ಲಕ್ಷ್ಮೀನರಸಿಂಹ ಉತ್ಸವ ಸಮಿತಿ ನರಸಿಂಹಗಡ, ನರಸಿಂಹಗಡ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ಶ್ರೀ ನರಸಿಂಹ ಜಯಂತಿ ಪ್ರಯುಕ್ತ ನರಸಿಂಹಗಡ (ಗಡಾಯಿಕಲ್ಲು)ದಲ್ಲಿ ಶ್ರೀ ಲಕ್ಷೀ ನರಸಿಂಹ ಉತ್ಸವ-ಧರ್ಮ ದೈವಗಳ ಪರ್ವಸೇವೆಯು ಮೇ 11ರಂದು ನಡೆಯಿತು.

ಈ ಪ್ರಯುಕ್ತ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಶ್ರೀ ಕ್ಷೇತ್ರದ ತೀರ್ಥ ಪ್ರಸಾದವನ್ನು ಬೈಕ್ ರ್‍ಯಾಲಿ ಮೂಲಕ ನರಸಿಂಹಗಡ ಶ್ರೀ ಲಕ್ಷ್ಮೀ ನರಸಿಂಹ ದೇವರ ಉತ್ಸವಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ತಂತ್ರಿಗಳಾದ ನಂದಕುಮಾರ್ ಕೊಯ್ಯೂರು, ಬೆಳ್ತಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ಆರಿಗ ನಡ, ಕರುಣಾಕರ ಗೌಡ ಬೋಜಾರ, ಪುರುಷೋತ್ತಮ ಶೆಣೈ, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡದ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ, ನಡ ವಿ.ಹಿಂ.ಪ.ಅಧ್ಯಕ್ಷ ಸುಭಾಶ್ಚಂದ್ರ ಎನ್.ಬಿ., ಗ್ರಾ.ಪಂ. ಸದಸ್ಯ ಹರೀಶ್ಚಂದ್ರ ಎನ್.ಬಿ., ವಿಶ್ವಹಿಂದೂ ಪರಿಷದ್ ಬಜರಂಗದಳ ನರಸಿಂಹಗಡ ಬೆಳ್ತಂಗಡಿ ಪ್ರಖಂಡ, ಶ್ರೀ ಲಕ್ಷ್ಮೀನರಸಿಂಹ ಉತ್ಸವ ಸಮಿತಿ ನರಸಿಂಹಗಡ, ನರಸಿಂಹಗಡ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಸದಸ್ಯರುಗಳು ಉಪಸ್ಥಿತರಿದ್ದರು.