ತಣ್ಣೀರುಪಂತ: ತಣ್ಣೀರುಪಂತ ಗ್ರಾಮದ ಪಾಲೇದು ಸಮೀಪದ ಕಟ್ಟದಮುದೇಲು ಎಂಬಲ್ಲಿ ಹಿಟಾಚಿ ತುಂಬಿದ್ದ ಲಾರಿಯೊಂದು ಬ್ರೇಕ್ ಫೈಲ್ ಆಗಿ ತೋಟಕ್ಕೆ ಪಲ್ವಿಯಾದ ಘಟನೆ ಮೇ12 ರಂದು ನಡೆದಿದೆ.

ಪಾಂಡವರಕಲ್ಲಿನಿಂದ ಪಾಲೇದು ಮಾರ್ಗವಾಗಿ ಕಕ್ಕೆಪದವಿಗೆ ಹೋಗುತ್ತಿದ್ದ ಹಿಟಾಚಿ ತುಂಬಿದ್ದ ಲಾರಿ ಕಟ್ಟಮುದೇಲುವಿನ ತಿರುವುವಿನಲ್ಲಿ ಬ್ರೇಕ್ ಫೈಲ್ ಆಗಿ ಅಲ್ ಮಾದಿ ಎಂಬುವರ ತೋಟಕ್ಕೆ ಟಿಪ್ಪರ್ ಪಲ್ಟಿಯಾಗಿದ್ದು, ಅಡಿಕೆ ಗಿಡಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್ ಟಿಪ್ಪರ್ ಚಾಲಕನಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

ಅಪಾಯಕಾರಿ ತಿರುವಿನ ವಿರುದ್ಧ ಸಾರ್ವಜನಿಕರ ಆಕ್ರೋಶ: ಬೆಳ್ತಂಗಡಿ ತಾಲೂಕಿನ ಪಾಲೇದು ಹಾಗೂ ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಊರನ್ನು ಬೆಸೆಯುವ ಪ್ರಮುಖ ರಸ್ತೆ ಇದಾಗಿದೆ. ಪಾಲೇದು ಪರಿಸರದ ಜನತೆಗೆ ಮಡಂತ್ಯಾರು ಊರನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದೆ. ಪ್ರತಿನಿತ್ಯ ಹಲವಾರು ವಾಹನಗಳು ಈ ರಸ್ತೆ ಮೂಲಕ ಸಂಚಾರಿಸುತ್ತದೆ ಆದರೆ ಕಟ್ಟಮುದೇಲುವಿನಲ್ಲಿ ಅಪಾಯಕಾರಿ ತಿರುವುವಿದ್ದು ಈ ಹಿಂದೆ ಹಲವಾರು ಅಪಘಾತ ಸಂಭವಿಸಿ ಮೃತಪಟ್ಟ ಘಟನೆಯು ನಡೆದಿದೆ. ಅವೈಜ್ಞಾನಿಕವಾಗಿ ಇರುವ ತಿರುವಿನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ತಿರುವು ಮೃತ್ಯು ಕೂಪಕ್ಕೆ ಎಡೆಮಾಡಿಕೊಟ್ಟಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.