September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಜೆಸಿಐ ಬೆಳ್ತಂಗಡಿಯ ಉದ್ದೇಶಿತ ‘ಜೇಸಿ ಛೇಂಬರ್ ಆಫ್ ಕಾಮರ್ಸ್’ ಸ್ಥಾಪನೆ ಬಗ್ಗೆ ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ: ಜೇಸಿ ಭವನ ಮಂಜುಶ್ರೀಯಲ್ಲಿ ಜೆಸಿಐ ಬೆಳ್ತಂಗಡಿಯ ಉದ್ದೇಶಿತ ಯೋಜನೆ ‘ಜೇಸಿ ಛೇಂಬರ್ ಆಫ್ ಕಾಮರ್ಸ್’ ಸ್ಥಾಪನೆಯ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಿತು.

ಜೆಸಿಐ ಬೆಳ್ತಂಗಡಿಯ ಅಧ್ಯಕ್ಷೆ ಆಶಾಲತಾ ಪ್ರಶಾಂತ್ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಜೆಸಿಐ ವಲಯ 15 ರ ಜೆಕಾಂ ಚೇರ್ಮನ್ ಮಂಗಳೂರಿನ ರೆಸ್ಟೋರೆಂಟ್ ಉದ್ಯಮಿ ಜೇಸಿ ಧೀರಾಜ್ ಬಿ ಉದ್ಯಾವರ್, ಜೆಕಾಂ ವಲಯ ಸಂಯೋಜಕ ಅಭಿಜಿತ್ ನಾಯ್ಕ್ ಹಾಗೂ ಜೆಕಾಂ ಕೊಚ್ ಅರುಣ್ ಪೀಟರ್ ಪಿಂಟೊ ಕಾರ್ಯಾಗಾರ ನಡೆಸಿಕೊಟ್ಟು ಇದೊಂದು ಜೇಸಿ ಹಾಗೂ ಜೇಸಿಯೇತರ ಉದ್ಯಮಿಗಳು, ವರ್ತಕರು, ವೈದ್ಯರು, ವಕೀಲರು ಲೆಕ್ಕ ಪರಿಶೋಧಕರು ಮುಂತಾದ ವ್ಯವಹಾರಸ್ಥರ ಕೊಂಡಿಯಾಗಿ ಕೆಲಸ ಮಾಡುತ್ತಿದ್ದು ರಾಷ್ಟ್ರೀಯ ಅಂತರಾಷ್ಟ್ರೀಯ ಜಾಲವಾಗಿದೆ ಮತ್ತು ಜೆಕಾಂ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.


ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಜೆಸಿಐ ಬೆಳ್ತಂಗಡಿಯ ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಬೆಳ್ತಂಗಡಿಯಲ್ಲಿ ಜೆಕಾಂ ಘಟಕವನ್ನು ಸ್ಥಾಪಿಸುವ ಬಗ್ಗೆ ಇಚ್ಛೆ ಹೊಂದಿದ್ದು ಶೀಘ್ರವೇ ಉದ್ಘಾಟಿಸಿಸುವ ಬಗ್ಗೆ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪೂರ್ವಾಧ್ಯಕ್ಷರುಗಳಾದ ತುಕಾರಾಮ್ ಬಿ, ಚಿದಾನಂದ ಇಡ್ಯಾ, ವಸಂತ ಶೆಟ್ಟಿ ಶ್ರದ್ಧಾ, ಕಿರಣ್ ಕುಮಾರ್ ಶೆಟ್ಟಿ, ಪ್ರಶಾಂತ್ ಲಾೖಲ, ಅಭಿನಂದನ್ ಹರೀಶ್ ಹಾಗೂ ಜೆಸಿಐ ಬೆಳ್ತಂಗಡಿಯ ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜೇಸಿ ಪ್ರಶಾಂತ್ ಲಾೖಲ ಇವರು ವೇದಿಕೆ ಆಹ್ವಾನಿಸಿದರೆ ಜೆಸಿ ಹೇಮಾವತಿ ಕೆ ಇವರು ಸಂಪನ್ಮೂಲಗಳ ವ್ಯಕ್ತಿಗಳನ್ನು ಸಭೆಗೆ ಪರಿಚಯಿಸಿದರು. ಕಾರ್ಯದರ್ಶಿ ಜೇಸಿ ಪ್ರಮೋದ್ ಕೆ ಇವರು ಸಭೆಗೆ ಧನ್ಯವಾದ ಸಲ್ಲಿಸಿದರು. ಘಟಕಾಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಸಭೆಯನ್ನು ಉಪಹಾರಕ್ಕಾಗಿ ಮುಂದೂಡಿದರು.

Related posts

ಕಲ್ಮಂಜ : ಬಜಿಲ ರಸ್ತೆಯಲ್ಲಿ ನೀರು ನಿಂತಿರುವ ಬಗ್ಗೆ ದೂರು ಬಂದಿರುವ ಹಿನ್ನೆಲೆಯಲ್ಲಿ : ಸ್ಥಳಕ್ಕೆ ತಹಶೀಲ್ದಾರ್ ಭೇಟಿ; ವೀಕ್ಷಣೆ

Suddi Udaya

ಗೆಜ್ಜೆಗಿರಿ ಯಕ್ಷಗಾನ ಮೇಳದ ಪ್ರಧಾನ ಸಂಚಾಲಕರಾಗಿ ಪ್ರಮಲ್ ಕುಮಾರ್ ಕಾರ್ಕಳ

Suddi Udaya

ಓಡಿಲ್ನಾಳ ಸ. ಉ ಪ್ರಾ. ಶಾಲಾ ಸಂಸತ್ತು ಚುನಾವಣೆ

Suddi Udaya

ಉಜಿರೆ ಮೈಸೂರು ಗಾರ್ಮೆಂಟ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ರತಿ ರೂ 1 ಸಾವಿರ ಖರೀದಿಯೊಂದಿಗೆ ಆಕರ್ಷಕ ಗಿಪ್ಟ್

Suddi Udaya

ಶ್ರೀ ಕ್ಷೇತ್ರ ಓಡೀಲು ವತಿಯಿಂದ ಎಕ್ಸೆಲ್ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರಿಗೆ ಗೌರವಾರ್ಪಣೆ

Suddi Udaya

ಕೊಕ್ಕಡ: ಮಾಸ್ತಿಕಲ್ಲು ಮಜಲು ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya
error: Content is protected !!