May 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಅಗ್ರಿಲೀಫ್ ಮುಕುಟಕ್ಕೆ ಮತ್ತೊಂದು ಗರಿ : ರಾಷ್ಟ್ರ ಮಟ್ಟದ ಸ್ಪರ್ಧೆ -10ಲಕ್ಷ ನಗದು ಪ್ರಶಸ್ತಿ

ಝೊಮ್ಯಾಟೊ (Zomato) ಸಂಸ್ಥೆ ಮೇ 7ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪ್ಲಾಸ್ಟಿಕ್ ಮುಕ್ತ ಫ್ಯೂಚರ್ ಪ್ಯಾಕಥಾನ್ ಸ್ಪರ್ಧೆಯ ಪ್ಯಾಕಿಂಗ್ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ನಿಡ್ಲೆಯ ಅಗ್ರಿಲೀಫ್ ಎಕ್ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಪ್ರಥಮ ಸ್ಥಾನದೊಂದಿಗೆ ೧೦ ಲಕ್ಷ ರೂ. ನಗದು ಪುರಸ್ಕಾರವನ್ನು ಪಡೆದುಕೊಂಡಿದೆ.

ಆಹಾರ ವಿತರಣಾ ಉದ್ಯಮದಲ್ಲಿ ಸುಸ್ಥಿರ ಪಾರ್ಸೆಲ್ ವ್ಯವಸ್ಥೆಗಳನ್ನು ಉತ್ತೇಜಿಸುವ ಉದ್ದೇಶ ಹೊಂದಿರುವ ಸ್ಟಾರ್ಟ್‌ಅಪ್ ಇಂಡಿಯಾ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ (DPIIT) ಸಹಯೋಗದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಪ್ಯಾಕಥಾನ್ ಸ್ಪರ್ಧೆ ಗೆದ್ದಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ಅಗ್ರಿಲೀಫ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ರಾವ್, ಬೆಳೆಯುತ್ತಿರುವ ನಮ್ಮ ಸ್ಟಾರ್ಟ್‌ಅಪ್‌ ಸಂಸ್ಥೆಯ ಆತ್ಮವಿಶ್ವಾಸವನ್ನು ಇದು ಮತ್ತಷ್ಟು ಬಲಪಡಿಸಿದೆ. ಉತ್ಪನ್ನದ ಅಭಿವೃದ್ಧಿಗೆ ಬೇಕಾಗಿರುವ ಉದ್ಯಮಗಳ ಅಗತ್ಯತೆಗಳ ಬಗ್ಗೆ ಈ ಸ್ಪರ್ಧಾ ವೇದಿಕೆ ಅಮೂಲ್ಯವಾದ ಮಾರ್ಗದರ್ಶನವನ್ನು ನಮಗೆ ನೀಡಿದೆ. ಪ್ಲಾಸ್ಟಿಕ್-ಮುಕ್ತ ಮತ್ತು ಆಹಾರ ವಿತರಣೆಗೆ ಸೂಕ್ತವಾದ ಪ್ಯಾಕೇಜಿಂಗ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿರುವ ಇತರೆ ಸ್ಟಾರ್ಟ್‌ಅಪ್‌ಗಳಿಂದಲೂ ಕಲಿಯಲು ಈ ವೇದಿಕೆ ಅನುಕೂಲ ಮಾಡಿಕೊಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ಯಾಕಥಾನ್ ನಲ್ಲಿ 21 ರಾಜ್ಯಗಳ 128 ಸಂಸ್ಥೆಗಳ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದರಲ್ಲಿ 47 ಸ್ಟಾರ್ಟ್‌ಅಪ್‌ಗಳು ಮಹಿಳಾ ಉದ್ಯಮಿಗಳ ನೇತೃತ್ವದಲ್ಲಿದ್ದವು ಎನ್ನುವುದು ಉಲ್ಲೇಖಾರ್ಹ. ಆಹಾರ ತಯಾರಿಕಾ ಮತ್ತು ವಿತರಣಾ ಉದ್ಯಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿ, ಸಂಸ್ಥೆಗಳಿಗೆ ತಮ್ಮ ವೈಜ್ಞಾನಿಕ ನಾವೀನ್ಯತೆಗಳನ್ನು ಪ್ರದರ್ಶಿಸಲು 40 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಇದು ಉತ್ತಮ ವೇದಿಕೆಯಾಗಿ ಮಾರ್ಪಟ್ಟಿತ್ತು. ಟಾಪ್ ೧೦ ಸ್ಟಾರ್ಟ್ ಅಪ್ ಗಳಲ್ಲಿ ಅಗ್ರಿಲೀಫ್ ಸಂಸ್ಥೆಯ ವಿಶಿಷ್ಟವಾದ ಪ್ಲಾಸ್ಟಿಕ್ ಮುಕ್ತ ಉತ್ಪನ್ನವನ್ನು ಪ್ರಥಮ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು.

ಪ್ಯಾಕಥಾನ್‌ ಸ್ಪರ್ಧೆಯಲ್ಲಿ ಅಗ್ರಿಲೀಫ್‌ ಸಂಸ್ಥೆಗೆ ಸಿಕ್ಕಿರುವ ಮಾನ್ಯತೆ ಹಾಗೂ ಪ್ರಶಸ್ತಿಯು ಆಹಾರ ವಿತರಣಾ ಉದ್ಯಮದಲ್ಲಿ ಸುಸ್ಥಿರ ಪ್ಯಾಕೇಜಿಂಗ್ ವ್ಯವಸ್ಥೆ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿರುವುದು ಮಾತ್ರವಲ್ಲದೆ, ಈ ಕ್ಷೇತ್ರದಲ್ಲಿ ಗಮನಾರ್ಹ ಪರಿಣಾಮ ಬೀರುವ ನವೀನ ವೈಜ್ಞಾನಿಕ ಸ್ಟಾರ್ಟ್‌ಅಪ್‌ಗಳ ಸಾಮರ್ಥ್ಯವನ್ನು ಕೂಡ ಸಾರಿ ಹೇಳಿದೆ.

Related posts

ನಿಡಿಗಲ್ ನಲ್ಲಿ ಪಿಕಪ್ ವಾಹನ ಟಿಪ್ಪರ್ ಗೆ ಬಡಿದು ಬಳಿಕ ನೇತ್ರಾವತಿ ಸೇತುವೆಯ ತಡೆಗೋಡೆಗೆ ಡಿಕ್ಕಿ

Suddi Udaya

ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ವತಿಯಿಂದ ತಹಶೀಲ್ದಾರ್ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ

Suddi Udaya

ನೈರುತ್ಯ ಪದವೀಧರ ಮತ್ತು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ‌ ಮತ್ತು ಜೆಡಿಎಸ್ ಜಂಟಿ ಅಭ್ಯರ್ಥಿಗಳ ಜಯ

Suddi Udaya

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಧರ್ಮಸ್ಥಳ ಸಿಎ ಬ್ಯಾಂಕಿಗೆ ಸತತ 3 ನೇ ಬಾರಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಡಿ.27: ಗುರುವಾಯನಕೆರೆ 37 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

Suddi Udaya

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಕಂಬಳ: ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯರ ಕೋಣಗಳು, ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ, ಒಂದು ಲಕ್ಷ ನಗದು, 16 ಗ್ರಾಂ ಚಿನ್ನ ಮತ್ತು ಟ್ರೋಫಿ

Suddi Udaya
error: Content is protected !!