September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿ

ಕೋಳಿ ತ್ಯಾಜ್ಯದಿಂದ ಅಶುದ್ಧಿಯಾಗುತ್ತಿರುವ ಶಿಶಿಲದ‌ ” ಕಪಿಲೆ”

ಬೆಳ್ತಂಗಡಿ ತಾಲೂಕಿನ ಶಿಶಿಲ ಅತ್ಯಂತ ಪರಿಸರ ಸೂಕ್ಷ್ಮ ಪ್ರದೇಶ. ಇಲ್ಲಿರುವ ಕಪಿಲಾ ನದಿ ನಿತ್ಯ ಹರಿದ್ವರ್ಣ ಪ್ರದೇಶದಿಂದ ಹರಿಯುತ್ತಿದ್ದಾಳೆ, ಸಾವಿರಾರು ಮತ್ಸ್ಯ ದೇವರ ಮೀನುಗಳಿಗೆ ಆಶ್ರಯ ನೀಡುತ್ತಿದ್ದಾಳೆ.
ಕಪಿಲಾ ನದಿಯ ತಟದಲ್ಲಿ ಪ್ರಖ್ಯಾತ ಶಿಶಿಲೇಶ್ವರ ದೇವಾಲಯ ಇದೆ. ಇಲ್ಲಿಯ ಜಲದಿಂದಲೆ ದೇವರಿಗೆ ‌ನಿತ್ಯ ಅಭಿಷೇಕ ನಡೆಯುತ್ತಿದೆ. ಸಾವಿರಾರು ಭಕ್ತರು ಈ ನೀರನ್ನು ತೀರ್ಥವೆಂದು ಕುಡಿಯುತ್ತಿದ್ದಾರೆ.

ಅಲ್ಲದೆ ಶಿಶಿಲ ಪಕ್ಕದ ಗ್ರಾಮದ ಗ್ರಾಮಸ್ಥರು ಈ ನದಿಯನೆ ಅವಲಂಬಿಸಿರುತ್ತಾರೆ. (ಕುಡಿಯಲು ಉಪಯೋಗಿಸುತ್ತಾರೆ) ಈ ನೀರು ಕೃಷಿ, ಕುಡಿಯಲು ನಿತ್ಯ ಬಳಸುತ್ತಿದ್ದಾರೆ.

ಇಂತಹ ಪ್ರದೇಶದಲ್ಲಿ ಈ ನದಿಗೆ ದಿನ ನಿತ್ಯ ಕೋಳಿ ತ್ಯಾಜ್ಯವನ್ನು ಸುರಿಯುತ್ತಿರುವುದು ಪರಿಸರ ಪ್ರಿಯರಿಗೆ ಆತಂಕವಾಗಿದೆ. ಇದರಿಂದ ಸುತ್ತ ಮುತ್ತಲಿನ‌ ಪ್ರದೇಶದಲ್ಲಿ ದುರ್ಗಂಧದ ವಾಸನೆ ಹೊರಹೊಮ್ಮಿ ವಾತಾವರಣ ಹಾಳಾಗುತ್ತಿದೆ.

ಆದುದರಿಂದ ಸಂಭವಿಸಿದ ಅಧಿಕಾರಿಗಳು, ಗ್ರಾಮ ಪಂಚಾಯತ್ , ತಾಲೂಕು ಆಡಳಿತ ಕೂಡಲೆ ಮದ್ಯ ಪ್ರವೇಶಿಸಿ ಅಂತಹ ವ್ಯಕ್ತಿಗಳ ಸೂಕ್ತ‌ ಕಾನೂನು ಕ್ರಮ ಜರಗಿಸುವಂತೆ ಶಿಶಿಲದ ಪ್ರಜ್ನಾವಂತ ಪರಿಸರ ಪ್ರೇಮಿಗಳು ನಾಗರಿಕರು ಒತ್ತಾಯಿಸಿದ್ದಾರೆ.

Related posts

ಸ್ಪಂದನ ಬಂಟರ ಸೇವಾ ತಂಡದ 50ನೇ ಯೋಜನೆಯಾಗಿ ಮನೆ ನಿರ್ಮಾಣ

Suddi Udaya

ನೆರಿಯದಲ್ಲಿ ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ಪ್ರದೇಶಕ್ಕೆ ಗಣಿ ಇಲಾಖೆ ದಾಳಿ : ಹಿಟಾಚಿ, ಟಿಪ್ಪರ್, ಟಾಕ್ಟರ್ ವಶಕ್ಕೆ

Suddi Udaya

ಮಲೆಂಗಲ್ಲು ನಿವಾಸಿ, ನಿವೃತ್ತ ಟೆಲಿಫೋನ್ ಎಕ್ಸ್‌ಚೆಂಜರ್‌ ವೈ ಹಾಲೊಜಿ ರಾವ್ ನಿಧನ

Suddi Udaya

ಬೆಳ್ತಂಗಡಿ ವಕೀಲರ ಭವನದಲ್ಲಿ ಹುಲಿ ವೇಷ ಪ್ರದರ್ಶನ

Suddi Udaya

ಬೆಳ್ತಂಗಡಿ: ಯಮತೋ ಶೋಟೋಕಾನ್ ಕರಾಟೆ ಹಾಗೂ ಡ್ರೀಮ್ ಜೋನ್ ನೃತ್ಯ ತರಬೇತಿ ಕೇಂದ್ರ ಉದ್ಘಾಟನೆ

Suddi Udaya

ಬಂದಾರು ಚಂದ್ರಹಾಸ ಕುಂಬಾರರವರಿಗೆ ಸಾಹಿತ್ಯ ಸಾಮ್ರಾಟ್ ಪ್ರಶಸ್ತಿ

Suddi Udaya
error: Content is protected !!