ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಕ್ಷೇತ್ರದ ಧಾರ್ಮಿಕ ಭಾವನೆಗಳಿಗೆ ಘಾಸಿಗೋಳಿಸಿ ಪುಂಡಾಟ ಮೆರೆಯಲು ಯತ್ನಿಸಿದ ವಿಘ್ನಸಂತೋಷಿಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದು ,ಶಾಸಕರ ಪ್ರತಿಕ್ರಿಯೆಗೆ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಹೆಚ್ಚಿನ ಟ್ರಸ್ಟಿಗಳು, ದೇವಸ್ಥಾನದ ಆಡಳಿತ ಮಂಡಳಿ ಬೆಂಬಲಿಸುವುದಾಗಿ ಮೇ.12 ರಂದು ನಡೆದ ಸಭೆಯಲ್ಲಿ ಒಕ್ಕೊರಲಿನಿಂದ ತಿರ್ಮಾನಿಸಲಾಗಿದೆ.
ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ನೇತೃತ್ವದಲ್ಲಿ ಗ್ರಾಮದ ಭಕ್ತರ ಸಭೆಯನ್ನು ಕರೆದು ಚರ್ಚಿಸಲಾಯಿತು.
ಈ ಕುರಿತಂತೆ ಆಡಳಿತ ಮಂಡಳಿಯಿಂದ ಸೌಹಾರ್ದ ಸಭೆ ನಡೆದಿದೆ ವಿಷಾದ ವ್ಯಕ್ತಪಡಿಸಲಾಗಿದೆ ಎಂಬ ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ಆಡಳಿತ ಮಂಡಳಿಯಿಂದ ಯಾವುದೇ ಟ್ರಸ್ಟ್ ಸಭೆ ನಡೆಸಿಲ್ಲ ಎಂದು ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ, ಕಾರ್ಯದರ್ಶಿ ಮಂಜುನಾಥ್ ಸಾಲ್ಯಾನ್ ಹಾಗೂ ಇತರ ಟ್ರಸ್ಟಿಗಳು ಸ್ವಷ್ಟ ಪಡಿಸಿದ್ದಾರೆ. ಯಾರಾದರೂ ವೈಯಕ್ತಿಕವಾಗಿ ವ್ಯವಹರಿಸಿದ್ದರೆ ಅದಕ್ಕೆ ಆಡಳಿತ ಮಂಡಳಿ ಜವಾಬ್ದಾರಿಯಲ್ಲ ಎಂದು ಟ್ರಸ್ಟಿಗಳು ಅಭಿಪ್ರಾಯ ಪಟ್ಟಿದ್ದು ದೇವಸ್ಥಾನದ ಪ್ರಾರಂಭದ ಕಾರ್ಯಗಳಿಂದ ಬ್ರಹ್ಮಕಲಶೋತ್ಸವದವರೆಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳ ತೆಕ್ಕಾರಿನಲ್ಲಿ ಜೊತೆಯಾಗಿ ಆಡಳಿತ ಮಂಡಳಿಯೊಂದಿಗಿದ್ದು, ಧರ್ಮಕಾರ್ಯದ ಶಾಸಕರ ಕೊಡುಗೆಯನ್ನು ಬೆಂಬಲಿಸಿ ಗೌರವಿಸಿದೆ ಈ ನಿಟ್ಟಿನಲ್ಲಿ ಯಾರೊಂದಿಗೂ ವಿಷಾದ ವ್ಯಕ್ತಪಡಿಸುವ ಪ್ರಮೇಯವೇ ಇಲ್ಲ.ಶಾಸಕರ ಹೇಳಿಕೆಗೆ ಬದ್ಧವಾಗಿದೆ ಎಂದು ಆಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ. ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಟ್ಯೂಬ್ ಲೈಟ್ ಹಾಗೂ ಡೀಸೆಲ್ ಕದ್ದವರ ಬಗ್ಗೆ ಕೂಡಲೆ ಪೋಲೀಸ್ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಈ ಸಭೆಯಲ್ಲಿ ದೇವಸ್ಥಾನದ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ತಿಮ್ಮಪ್ಪ ಪೂಜಾರಿ, ಕಾರ್ಯದರ್ಶಿ ಮಂಜುನಾಥ ಸಾಲ್ಯಾನ್ ಹಾಗೂ ಟ್ರಸ್ಟಿಗಳು , ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ ವಿ.ಹಿಂ.ಪ ಪ್ರಮುಖರಾದ ಸುಧೀರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.