May 13, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನಿಡಿಗಲ್ ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಭಾರತೀಯ ಸೈನ್ಯದ ಅಭ್ಯುದಯಕ್ಕಾಗಿ ಸೀಯಾಳಭಿಷೇಕದ ಮೂಲಕ ವಿಶೇಷ ಪ್ರಾರ್ಥನೆ

ಕಲ್ಮಂಜ: ಇತ್ತೀಚೆಗೆ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕ ಯುವಕರ ಕೊಲೆ ಮಾಡಿ ದೇಶದ ನಿದ್ದೆಗೆಡಿಸಿದ
ಪಾಪಿ ಪಾಕಿಸ್ಥಾನದ ವಿರುದ್ಧ ಭಾರತೀಯ ಸೇನೆಯು ಕೈಗೊಂಡ ಆಪರೇಷನ್ ಸಿಂಧೂರದಲ್ಲಿ ಭಾರತಾಂಬೆಯ ರಕ್ಷಣೆಗಾಗಿ ಎದೆಯೊಡ್ಡಿ ಹೋರಾಡಿ ಪಾಪಿ ಪಾಕಿಸ್ತಾನಿ ಸರಕಾರಕ್ಕೆ ತಕ್ಕ ಶಾಸ್ತಿಯನ್ನು ಮಾಡಿದ ಆ ಮೂಲಕ ಭಯೋತ್ಪಾದನೆಯನ್ನು ಈ ನೆಲದಿಂದಲೇ ನಿರ್ಮೂಲನೆ ಮಾಡುವ ಸಂಕಲ್ಪ ಮಾಡಿದ ಭಾರತೀಯ ಸೈನ್ಯಕ್ಕೆ ಇನ್ನಷ್ಟು ಶಕ್ತಿಯನ್ನು ಶ್ರೀ ದೇವರು ನೀಡಲಿ ಎಂಬ ಸದಾಶಯದಿಂದ ಮೇ 12 ರಂದು ಶ್ರೀ ಲೋಕನಾಥೇಶ್ವರ ದೇವಸ್ಥಾನ ನಿಡಿಗಲ್ ಇಲ್ಲಿ ಸಿಯಾಳಭಿಷೇಕ ಮಾಡುವ ಮೂಲಕ ದೇಶದ ಒಳಿತಿಗಾಗಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪಾಂಡುರಂಗ ಮರಾಠೆ, ಅರ್ಚಕರು, ಸಮಿತಿ ಸದಸ್ಯರುಗಳು ಹಾಗೂ ಊರವರು ಉಪಸ್ಥಿತರಿದ್ದರು.

Related posts

ಕೊಲ್ಲಿಯಲ್ಲಿ ಬೃಹತ್ ಸ್ವಚ್ಚತಾ ಅಭಿಯಾನ: ಸ್ವಚ್ಛತೆ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ: ಭವಾನಿ ಶಂಕರ್

Suddi Udaya

ಅರಸಿನಮಕ್ಕಿ: ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಗಿಡನಾಟಿ ಕಾರ್ಯಕ್ರಮ

Suddi Udaya

ವಿಷು ಕಣಿ ಆಚರಣಾ ಸಮಿತಿಯಿಂದ ಕೇರಳ ಸಂಪ್ರಾದಾಯಿಕ ವಿಷು ಕಣಿ ಆಚರಣೆ: ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಮನೋರಂಜನಾ ಕಾರ್ಯಕ್ರಮ, 30 ಬಗೆಯ ಉಟೋಪಚಾರ

Suddi Udaya

ವೇಣೂರು: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲಾ- ಕಾಲೇಜಿಗೆ ಶೇ.100 ಫಲಿತಾಂಶ

Suddi Udaya

ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ರಾಜ ಕೇಸರಿ ಸಂಘಟನೆ ವತಿಯಿಂದ ಬೆಳ್ತಂಗಡಿ ಆಸ್ಪತ್ರೆಯ ಹೊರಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!