
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮನೆಮಾತಾಗಿರುವ ತಾಲೂಕಿನ ಅತೀ ದೊಡ್ಡ ಚಿನ್ನದ ಮಳಿಗೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಈಗ ಮತ್ತಷ್ಟು ಹೊಸತನದೊಂದಿಗೆ ಮುನ್ನಡೆಯುತ್ತಿದ್ದು, ಇದರ ವಿಸ್ತೃತ ಅತೀ ದೊಡ್ಡ ಹೊಸ ಶೋರೂಂ “ಮುಳಿಯ ಗೋಲ್ಡನ್ ಡೈಮಂಡ್”ನ ಉದ್ಘಾಟನಾ ಕಾರ್ಯಕ್ರಮ ಮೇ 17 ರಂದು 10.30ಕ್ಕೆ ಬೆಳ್ತಂಗಡಿ ಮುಖ್ಯ ರಸ್ತೆಯ ರಕ್ಷಾ ಆರ್ಕೇಡ್‌ನಲ್ಲಿ ಜರುಗಲಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ತಿಳಿಸಿದ್ದಾರೆ.
ಅವರು ಮೇ 13 ರಂದು ಬೆಳ್ತಂಗಡಿ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ ಅವರು ಈ ವಿಶಾಲ ಶೋ ರೂಂನ್ನು ಖ್ಯಾತ ಸಿನಿಮಾ ನಟ ಹಾಗೂ ಸ್ಫೂರ್ತಿಯ ಮಾತುಗಾರ ರಮೇಶ್ ಅರವಿಂದ್ ಲೋಕಾರ್ಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಎಂಟು ದಶಕಗಳ ಹಿಂದೆ ದಿವಂಗತ ಕೇಶವ ಭಟ್ಟರಿಂದ ಈ ಸಂಸ್ಥೆ ಆರಂಭಗೊಂಡಿದ್ದು, ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ. ಕಳೆದ ಮೂರು ತಲೆಮಾರುಗಳಿಂದ ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ ಬೆಳೆಯುತ್ತಿರುವ ಮುಳಿಯ ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ, ಸಂತೋಷ ನೀಡಿದ್ದೇವೆ ಬೆಳ್ತಂಗಡಿಯಲ್ಲಿ ಗ್ರಾಹಕರು ಮನಸಾರೆ ನಮ್ಮನ್ನು ಹರಸಿದ್ದಾರೆ. ನಮ್ಮ ಹೊಸತನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು ಹೊಸತನದೊಂದಿಗೆ ಬರುತ್ತಿದ್ದೇವೆ ಎಂದು ತಿಳಿಸಿದರು.
ರಮೇಶ್ ಅರವಿಂದ್ ಅವರು ಈಗಾಗಲೇ ಮುಳಿಯದ ಹೊಸ ಲೋಗೊ ಬಿಡುಗಡೆ ಮಾಡಿದ್ದು ಈ ಸಮಾರಂಭದಲ್ಲಿ ಮುಳಿಯ ಜೊತೆ ಮತ್ತು ಬೆಳ್ತಂಗಡಿ ಜನರೊಂದಿಗೆ ಹೊಸತನದೊಂದಿಗೆ ಸಂತೋಷದಿಂದ ಭಾಗವಹಿಸುತ್ತಿದ್ದೇನೆ ತಾವೆಲ್ಲರೂ “ಬನ್ನಿ ಮುಳಿಯಕ್ಕೆ’ ಎಂದು ಆಹ್ವಾನಿಸಿದ್ದಾರೆ. ನಮ್ಮ ನೂತನ ಬ್ರಾಂಡ್ ಅಂಬಾಸಿಡರ್ ಆದ ರಮೇಶ್ ಅರವಿಂದ್ ಬೆಳ್ತಂಗಡಿಗೆ ಬರುವುದು ತುಂಬಾ ಖುಷಿಯಾಗುತ್ತಿದೆ. ಗ್ರಾಹಕರು ರಮೇಶ್ ಅರವಿಂದ್ ಮುಳಿಯ ಅಂಬಾಸಿಡರ್ ಆಗಿರುವುದರ ಕುರಿತು ಈಗಾಗಲೇ ಸಂತೋಷ ವ್ಯಕ್ತಪಡಿಸಿದ್ದಾರೆ ಈ ಹೊಸ ಶೋರೂಮ್ ನಂಬಿಕೆ ಮತ್ತು ಪರಂಪರೆಯ ಜೊತೆಗೆ ಈ ವಿಶಾಲ ವಿಸ್ತ್ರತ ಶೋರೂಮ್ ಮೂಲಕ ಬೆಳ್ತಂಗಡಿ ಊರಿನ ಜನತೆಗೆ ಅರ್ಪಿಸುತ್ತಿದ್ದೇವೆ ಕೃಷ್ಣನಾರಾಯಣ ಮುಳಿಯ ಹೇಳಿದರು.
ಎರಡು ಅಂತಸ್ತಿನ ವಿಶಾಲ ಶೋರೂಮ್:
ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಎರಡು ಅಂತಸ್ತಿನ ವಿಶಾಲ ೫ ಸಾವಿರ ಚದರ ಅಡಿಯ ವಿಶೇಷ ಸೌಲಭ್ಯಗಳ ಶೋರೂಮ್ ಅತ್ಯಾಧುನಿಕ ಶೈಲಿಯಲ್ಲಿ ರೂಪಗೊಂಡಿದೆ. ಇಲ್ಲಿ ಚಿನ್ನ, ಬೆಳ್ಳಿ, ವಜ್ರ, ವಾಚುಗಳು, ಗಿಫ್ಟ್ ಐಟಂ ಹಾಗೂ ವಿವಿಧ ಬಗೆಯ ಚಿನ್ನಾಭರಣಗಳ ಕೌಂಟರ್‌ಗಳು, ವಜ್ರಾಭರಣ ಅಮೂಲ್ಯ ಕೌಂಟರ್‌ಗಳನ್ನು ತೆರೆಯಲಾಗಿದೆ. ಬೆಳ್ಳಿಯ ಆಭರಣಗಳು ವಿಶೇಷ ಕೌಂಟರ್‌ಗಳಿವೆ., ವಾಚ್ ಕೌಂಟರ್ ಇದೆ. ಇದಲ್ಲದೆ ಬಳೆ, ಆಂಟಿಕ್, ನೆಕ್ಲೆಸ್, ಪಾರಂಪರಿಕ ಆಭರಣಗಳು ಹಾಗೂ ಇನ್ನಿತರ ಕೌಂಟರ್‌ಗಳು, ವಿಶಾಲ ಪಾರ್ಕಿಂಗ್, ಗ್ರಾಹಕರಿಗೆ ತಿಂಡಿ ಊಟದ ವ್ಯವಸ್ಥೆ, ಮಕ್ಕಳ ಆಟಕ್ಕೆ ಮತ್ತು ಆರೈಕೆಗೆ ವಿಶೇಷ ಕೊಠಡಿ, ವ್ಯಾಲೆಟ್ ಪಾರ್ಕಿಂಗ್ ಸೌಲಭ್ಯಗಳನ್ನು ಅಳವಡಿಸಲಾಗಿದ್ದು, ಗ್ರಾಹಕರ ಸಂತೃಪ್ತಿ ಮತ್ತು ಸಂತೋಷ ನೀಡುತ್ತಾ ಮುಳಿಯ ಈಗ ಹಿಂದಿಗಿಂತ ದುಪ್ಪಟ ರೀತಿಯಲ್ಲಿ ಸದಾ ಸಂತೋಷ ನೀಡುವಲ್ಲಿ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲಿದೆ. ಇದು ನಮ್ಮ ಮುಂದಿನ ಐದು ವರ್ಷಗಳ ವ್ಯವಹಾರ ವಿಸ್ತರಣೆಗೆ ನಾಂದಿಯಾಗಲಿದೆ ಎಂದು ಅವರು ವಿವರಿಸಿದರು.
ಡೈಮಂಡ್‌ನ ವಿವಿಧ ವಿನ್ಯಾಸದ ಆಭರಣ:
ಮಾರುಕಟ್ಟೆಗಳಲ್ಲಿ ಲ್ಯಾಬ್ರೋ ಡೈಮಂಡ್ ಮತ್ತು ನ್ಯಾಚುರಲ್ ಡೈಮಂಡ್ ಎಂಬ ಎರಡು ವಿಧ ಇದೆ. ನಮ್ಮಲ್ಲಿ ನ್ಯಾಚುರಲ್ ಡೈಮಂಡ್ ವಿವಿಧ ವಿನ್ಯಾಸದ ಆಭರಣಗಳಿವೆ. ನಮ್ಮಲ್ಲಿ ಟೆಸ್ಟ್ಂಗ್ ಮೆಶಿನ್ ಅಳವಡಿಸಲಾಗಿದೆ. ಗ್ರಾಹಕರು ಈಗಾಗಲೇ ಡೈಮಂಡ್ ಆಭರಣ ಇದ್ದರೆ ಅದನ್ನು ಇಲ್ಲಿ ಬಂದು ಟೆಸ್ಟ್ ಮಾಡಿ ಯಾವ ಡೈಮಂಡ್ ಎಂದು ನೋಡಬಹುದು. ಗ್ರಾಹಕರೇ ಬಂದು ತಮ್ಮ ಅಭರಣಗಳನ್ನು ಉಚಿತವಾಗಿ ಟೆಸ್ಟ್ ಮಾಡಿಕೊಳ್ಳುವ ಅವಕಾಶವನ್ನು ಸಂಸ್ಥೆ ನೀಡಿದೆ ಎಂದು ಕೃಷ್ಣಪ್ರಸಾದ್ ಮುಳಿಯ ತಿಳಿಸಿದರು.
ಬೆಳ್ತಂಗಡಿಯ ವಿವಿಧಗ್ರಾಮಗಳಿಂದ ಗ್ರಾಹಕರು ನಮ್ಮಲ್ಲಿ ಬರುತ್ತಾರೆ. ಮದುವೆ ಮತ್ತು ಸಮಾರಂಭಗಳ ಸಂದರ್ಭದಲ್ಲಿ ಅವರಿಗೆ ಹೆಚ್ಚಿನ ಆಯ್ಕೆ ಬೇಕಾಗುತ್ತದೆ. ಹಾಗೆಯೇ ಅವರು ಸಂತೋಷದ, ಆರಾಮದ ವಾತಾವರಣ ಬಯಸುತ್ತಾರೆ. ಅದಕ್ಕಾಗಿ ಗ್ರಾಹಕರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಇಲ್ಲಿದೆ. ಇಷ್ಟು ದೊಡ್ಡ ಹೊಸ ಶೋರೂಮ್ ಬೆಳ್ತಂಗಡಿಗೆ ಹೊಸತಾಗಿದೆ. ಹಾಗಾಗಿ ಗ್ರಾಮಾಂತರದ ಜನತೆ ಈ ಹೊಸ ಶೋರೂಮ್ ಹಾಗೂ ಹೆಚ್ಚಿನ ಆಯ್ಕೆಯ ಮುಳಿಯವನ್ನು ಇಷ್ಟಪಡುವುದು ಖಂಡಿತ ಎಂದು ಕೃಷ್ಣ
ಪ್ರಸಾದ್ ಮುಳಿಯ ವಿಶ್ವಾಸ ವ್ಯಕ್ತಪಡಿಸಿದರು.
ವಜ್ರಭಾರಣಗಳ ಟೆಸ್ಟಿಂಗ್ ಮಿಷನ್:
ಶೋ ರೂಮ್‌ನಲ್ಲಿ ದೇಶದಲ್ಲಿಯೇ ಪ್ರಪ್ರಥಮ ಬಾರಿ ಎನ್ನಬಹುದಾದ ಗ್ರಾಹಕರ ಸಮ್ಮುಖದಲ್ಲಿ ಗೋಲ್ಡ್ ಪ್ಯೂರಿಟಿ ಆನಲೈಸರ್ ಹಾಗೂ ಲ್ಯಾಬ್ ಗ್ರೋನ್ ಡೈಮಂಡ್ ಡಿಟೆಕ್ಟರ್ ಟೆಸ್ಟಿಂಗ್ ಮಿಷನ್ ಅಳಡಿಸಲಾಗಿದೆ. ಗ್ರಾಹಕರು ತಮ್ಮಲ್ಲಿರುವ ಡೈಮಂಡ್ ಆಭರಣಗಳನ್ನು ಇಲ್ಲಿ ಟೆಸ್ಟ್ ಮಾಡಬಹುದು. ಮುಳಿಯ ಶೋರೂಮಿನಲ್ಲಿ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸಹಾಯಕ ಕಾರ್ಯನಿರ್ವಹಕರಾದ ಶಿವಕೃಷ್ಣ ಮೂರ್ತಿ ಹೇಳಿದರು.
81 ಗ್ರಾಮಗಳ ದೇಗುಲಗಳಿಂದ ದೀಪ:
ಆರು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ 81 ಗ್ರಾಮದ ದೇಗುಲಗಳಿಂದ ಬೆಳಕನ್ನು ತಂದು ಬೆಳ್ತಂಗಡಿ ಶೋರೂಮ್‌ನ್ನು ಉದ್ಘಾಟನೆ ಮಾಡಲಾಗಿತ್ತು. ಈ ಬಾರಿಯೂ ಅದೇ ರೀತಿಯಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳ ದೇಗುಲಗಳಿಂದ ಬೆಳಗ್ಗೆ ದೀಪ ತಂದು ನೂತನ ಶೋ ರೂಮ್‌ನ್ನು ದೀಪ ಬೆಳಗಿಸಿ ಉದ್ಘಾಟಿಸುವ ಕಾರ್ಯಕ್ರಮ ನಡೆಯಲಿದೆ. ಶೋಂ ರೂಮಿನ ಹಿಂದುಗಡೆ ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಮರುದಿನ ಮೇ 18ರಂದು ಸಂಜೆ 7ಕ್ಕೆ ಖ್ಯಾತ ತುಳು ಚಿತ್ರ ನಟ ಅರವಿಂದ ಬೋಳಾರ್ ಅವರ ನಾಟಕ ತಂಡದಿಂದ ತುಳು ‘ಹಾಸ್ಯಮರ ನಾಟಕ’ ಪ್ರದರ್ಶನಗೊಳ್ಳಲಿದೆ ಎಂದು ಮಾರ್ಕೆಟಿಂಗ್ ಸಲಹೆಗಾರ ವೇಣು ಶರ್ಮ ತಿಳಿಸಿದರು.
ಹೊಸ ಹೊಸ ವಿನ್ಯಾಸದ ಆಭರಣ:
ಬೆಳ್ತಂಗಡಿ ಶೋ ರೂಮಿನಲ್ಲಿ ಚಿನ್ನ, ಬೆಳ್ಳಿ ಹಾಗೂ ವಜ್ರದ ಹೊಸ, ಹೊಸ ವಿನ್ಯಾಸದ ಆರಂಭಣಗಳು ಇವೆ. ವಜ್ರಭಾರಣ ಎಂದರೆ ದರ ಜಾಸ್ತಿ ಎಂಬ ಭಯ ಗ್ರಾಹಕರಲ್ಲಿದೆ. ಆದರೆ ಹಾಗೆನಿಲ್ಲ, ಮುಳಿಯದಲ್ಲಿ ಕಡಿಮೆ ಬೆಲೆಯ ವಜ್ರಭಾರಣಗಳು ಇವೆ. ಗಿಳಿಯೊಲೆಯಲ್ಲಿ ಇನ್ನಷ್ಟು ವೆರೈಟಿ ಇದೆ. ರೂಬಿ ಎಂಬ್ರಾಲ್ಡ್ ಇದೆ. ಹೊಸ, ಹೊಸ ವಿನ್ಯಾಸದ ಆಭರಣಗಳು ಇವೆ, ಬೆಳ್ತಂಗಡಿ ತಾಲೂಕಿನ ಗ್ರಾಹಕರು ನಮ್ಮ ಮುಳಿಯ ಶೋರೂಮಿಗೆ ಬಂದು ತಮಗಿಷ್ಟವಾದ ಚಿನ್ನಾಭರಣಗಳನ್ನು ಖರೀದಿಸಬಹುದು ಎಂದು ಬೆಳ್ತಂಗಡಿ ಸಂಸ್ಥೆಯ ಮೆನೇಜರ್ ಲೋಹಿತ್ ಹೇಳಿದರು. ಸಂಸ್ಥೆಯ ಮಾರ್ಕೆಂಟಿಂಗ್ ಮ್ಯಾನೇಜರ್ ಸಂಜೀವ್ ಸ್ವಾಗತಿಸಿ, ವಂದಿಸಿದರು.