ಬೆಳ್ತಂಗಡಿ : ಲಾಯಿಲ ಸೈಂಟ್ ಮೇರಿಸ್ ವಿದ್ಯಾಸಂಸ್ಥೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 614 ಮಾರ್ಕ್ಸ್ ಪಡೆದು ಮೂರನೇ ರ್‍ಯಾಂಕ್ ಪಡೆದ ವಿದ್ಯಾರ್ಥಿನಿ ಕುಮಾರಿ ಎಂ ಎಸ್ ದೇವಿಯನ್ನು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಮೇ 12 ರಂದು ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ಪೂಜೆಯ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಎಂಎಸ್ ದೇವಿಯ ಮಾತಾ ಪಿತೃಗಳು, ರಾಯರ ಮಠದಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದು ಕುಮಾರಿ ದೇವಿ ರಾಯರ ಮಠದಲ್ಲಿ ವಿದ್ಯುತ್ ಬೆಳಕಿನಲ್ಲಿ ನಿರಂತರ ಅಭ್ಯಾಸವನ್ನು ಮಾಡುತ್ತಿದ್ದು ಯಾವುದೇ ಟ್ಯೂಷನ್ ಇಲ್ಲದೆ ಓದಿ ಈ ಮಟ್ಟಕ್ಕೆ ಏರಿದ್ದು ಇಲ್ಲಿಯ ಪ್ರತಿಷ್ಠಿತ ಎಕ್ಸೆಲ್ ಕಾಲೇಜಿನ ಆಡಳಿತ ವರ್ಗ ಕುಮಾರಿ ದೇವಿ ಯನ್ನು ಮನೆಗೆ ಬಂದು ಅಭಿನಂದಿಸಿದ್ದು, ತಮ್ಮ ಕಾಲೇಜಿನಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸೀಟನ್ನು ಕಾದಿರಿಸಿದ್ದಾರೆ. ಆಕೆಯ ಭವಿಷ್ಯ ಉಜ್ವಲವಾಗಿರಲಿ, ಎಂದು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೇ ಯವರು ಅಭಿನಂದಿಸಿ ಶುಭ ಹಾರೈಸಿದರು.
ವಿಶೇಷವಾಗಿ ಭಾರತದ ಸೈನಿಕರ ಕ್ಷೇಮದ ಬಗ್ಗೆ ಮುಖ್ಯ ಅರ್ಚಕ ರಾಘವೇಂದ್ರ ಬಾಂಗ್ಯಣ್ಣಾಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು . ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ , ಉಪಾಧ್ಯಕ್ಷ ಮಹಾಬಲ ಶೆಟ್ಟಿ , ಕೋಶಾಧಿಕಾರಿ ಶ್ರವಣ್ ರಾಜ್, ಟ್ರಸ್ಟಿಗಳಾದ ಜಯರಾಮ ಬಂಗೇರ, ಶ್ರೀಮತಿ ಉಮಾ ರಾವ್, ಶ್ರೀಮತಿ ತಾರಾ ಜಗನ್ನಾಥ್, ಪದ್ಮ ಕುಮಾರ್, ,ಉದಯ ಲಾಯಿಲ, ಭಾಸ್ಕರ್ ರೆಂಕೆದಗುತ್ತು, ಸುರೇಂದ್ರ ಬಂಗೇರ, ಕೃಷ್ಣ ಶೆಟ್ಟಿ, ಬಂಗಾರು, ವಿದ್ಯಾರ್ಥಿನಿಯ ತಂದೆ ರಾಮಸ್ವಾಮಿ ತಾಯಿ ರಾಧಾಮಣಿ, ಹಾಗೂ ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. .