May 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಬೆಂಗಳೂರಿನ ಖ್ಯಾತ ಎಸ್.ವ್ಯಾಸ ಸಂಸ್ಥಾನದ ಉಪಕುಲಪತಿ ಭೇಟಿ

ಉಜಿರೆ: ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಯೋಗ ಮತ್ತು ಅದಕ್ಕೆ ಸಂಬಂಧಿಸಿದ ಅಧ್ಯಯನಕ್ಕೆ ಮೀಸಲಾಗಿರುವ ಬೆಂಗಳೂರಿನ ಖ್ಯಾತ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ಖಾಸಗಿ ಡೀಮ್ಡ್ ವಿಶ್ವವಿದ್ಯಾನಿಲಯ ಇದರ ಸಂಸ್ಥಾಪಕರು ಹಾಗೂ ಇದರ ಉಪಕುಲಪತಿ ಹೆಚ್. ಆರ್ ನಾಗೇಂದ್ರ ಭೇಟಿ ನೀಡಿದರು.


ಉಪಕುಲಪತಿ ಹೆಚ್. ಆರ್ ನಾಗೇಂದ್ರ ಅವರು ಆಸ್ಪತ್ರೆಯ ವೈದ್ಯರನ್ನು ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡುತ್ತಾ, ಉಜಿರೆ ಎಸ್.ಡಿ.ಎಂ ಆಸ್ಪತ್ರೆಯು ಮಂಜುನಾಥ ಸ್ವಾಮಿಯ ಕೃಪೆ, ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಡಾ| ಹೇಮಾವತಿ ಹೆಗ್ಗಡೆಯವರ ಪ್ರೇರಣೆ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಅದ್ಭುತ ಸಂಸ್ಥೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಪೂಜ್ಯರು ಒಂದು ಗ್ರಾಮೀಣ ಭಾಗದಲ್ಲಿ ಈ ಆಸ್ಪತ್ರೆ ನಿರ್ಮಿಸಿರುವ ಉದ್ದೇಶ ಲಾಭಕ್ಕಲ್ಲ ಅನ್ನುವುದು ಗೊತ್ತಾಗುತ್ತದೆ. ಇಲ್ಲಿನ ವೈದ್ಯಕೀಯ ಸೇವೆ ಅಮೋಘವಾದದ್ದು. ಡಯಾಲಿಸಿಸ್ ವಿಭಾಗದಲ್ಲಿ ನೀಡುತ್ತಿರುವ ಉಚಿತ ಡಯಾಲಿಸಿಸ್ ಸೇವೆ ಹಾಗೂ ಅಲ್ಲಿ ಅಳವಡಿಸಿರುವ ವ್ಯವಸ್ಥೆಯು ಅತ್ಯುತ್ತಮವಾಗಿದೆ ಎಂದರು. ವೈದ್ಯರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡುತ್ತಾ, ಯೋಗ, ಪ್ರಾಣಾಯಾಮ ಮತ್ತು ಜೀವನಶೈಲಿಯ ಬದಲಾವಣೆಯಿಂದ ರೋಗ ನಿವಾರಣೆ ಸಾಧ್ಯ ಎಂದರು.


ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಫೈನಾನ್ಸ್ ಡೈರೆಕ್ಟರ್ ಡಾ| ದಯಾನಂದ, ಯೋಗ ತರಬೇತುದಾರ ಡಾ| ಅಮಿತ್, ಕ್ಷೇಮವನದ ಮುಖ್ಯ ಕ್ಷೇಮಾಧಿಕಾರಿ ಡಾ| ನರೇಂದ್ರ, ಹಾಗೂ ಶಾಂತಿವನದ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ ಹಾಗೂ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ವಿಭಾಗ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ನಿಡ್ಲೆ ಬೂತ್ ಗೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಭೇಟಿ

Suddi Udaya

ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ

Suddi Udaya

ಬಂಗೇರ ನಿಧನಕ್ಕೆ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಹರೀಶ್ ಪೂಜಾರಿ ಸಂತಾಪ

Suddi Udaya

ಕಣಿಯೂರು ಮಹಾಶಕ್ತಿ ಕೇಂದ್ರದ ವ್ಯಾಪ್ತಿಯಲ್ಲಿ ಶಾಸಕ ಹರೀಶ್ ಪೂಂಜರಿಂದ ಚುನಾವಣಾ ಪ್ರಚಾರ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್‌ನಲ್ಲಿ ಆಟಿಡೊಂಜಿ ದಿನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು: ಯಕ್ಷಗಾನ, ದೈವರಾಧನೆ, ನಾಟಕ, ನಾಟಿ ವ್ಯೆದ್ಯಕೀಯ, ಕಂಬಳ ಕ್ಷೇತ್ರದ ಸಾಧಕರಿಗೆ ಸನ್ಮಾನ

Suddi Udaya

ಕಲ್ಮಂಜ: ಆಟೋ ಚಾಲಕ ಪ್ರಮೋದ್ ಗೌಡ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!