ಬೆಳ್ತಂಗಡಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದ ಮಾಜಿ ಅಧ್ಯಕ್ಷರು ಗೌರವ ಸಲಹೆಗಾರರಾದ ನಂದ ಸ್ಟುಡಿಯೋ ಉಜಿರೆ ಇದರ ಮಾಲಕರಾದ ನಂದಕುಮಾರ್ ಉಜಿರೆ ಇವರು ಮೇ 3 ರoದು ನಿಧನರಾಗಿದ್ದು ಇವರಿಗೆ ಬೆಳ್ತಂಗಡಿ ವಲಯದಿoದ ಶ್ರದ್ಧಾಂಜಲಿ ಸಭೆ ಮೇ 13 ರಂದು ಗುರುವಾಯನಕೆರೆ ಛಾಯಾಭವನದಲ್ಲಿ ನಡೆಯಿತು.


ಈ ವೇಳೆ ಅವರು ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಸದಸ್ಯರೊಂದಿಗೆ ಒಡನಾಟದಲ್ಲಿದ್ದ ಬಗ್ಗೆ ವಲಯದ ಸ್ಥಾಪಕ ಅಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ಗೌರವ್ಯಾಧ್ಯಕ್ಷ ಜಗದೀಶ್ ಜೈನ್, ಅಧ್ಯಕ್ಷೆ ಸಿಲ್ವಿಯಾ ಬೆಳ್ತಂಗಡಿ ಮಾತನಾಡಿ ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಭಾರದ್ವಾಜ್ ಉಜಿರೆ, ಜಿಲ್ಲಾ ಮಾಜಿ ಅಧ್ಯಕ್ಷ ವಿಲ್ಸನ್ ವೀಲ್ಸ್ ಸ್ಟುಡಿಯೋ ಬೆಳ್ತಂಗಡಿ, ವಲಯದ ಕೋಶಾಧಿಕಾರಿ ಹರೀಶ್ ಕೊಳ್ತಿಗೆ, ಸದಸ್ಯರಾದ ದಾಮೋದರ್ ಗುರುವಾಯನಕೆರೆ, ಗಣೇಶ್ ಹೆಗ್ಡೆ ನಾರಾವಿ, ಗಂಗಾಧರ್ ಉಜಿರೆ, ಸುರೇಶ್ ಗೌಡoಗೆ, ಸುಜಿತ್ ಕುಮಾರ್ ಕೊಯ್ಯೂರು, ರಾಮಕೃಷ್ಣ ರೈ ಉಜಿರೆ, ಪ್ರಶಾಂತ್ ಬಳ್ಳಮಂಜ, ಉಮೇಶ್ ಕುಮಾರ್ ಮದ್ದಡ್ಕ ಉಪಸ್ಥಿತರಿದ್ದರು.