21.9 C
ಪುತ್ತೂರು, ಬೆಳ್ತಂಗಡಿ
May 15, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪುದುವೆಟ್ಟು ಪಂಚಾಯತ್ ಉಪಚುನಾವಣೆ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಿಂಧೂ ಕೆ.ಎಸ್ ಯವರಿಂದ ನಾಮಪತ್ರ ಸಲ್ಲಿಕೆ


ಪುದುವೆಟ್ಟು ಪಂಚಾಯತ್ ೧ನೇವಾರ್ಡ್ ತೆರವಾದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು ಮೇ14 ರಂದು ಪುದುವೆಟ್ಟು ನಿವಾಸಿ, ಶ್ರೀಮತಿ ಸಿಂಧೂ ಕೆ.ಎಸ್ ರವರು ಚುನಾವಣಾಧಿಕಾರಿ ಗಣೇಶ್ ರವರಿಗೆ ನಾಮಪತ್ರ ಸಲ್ಲಿಸಿದರು.


ಈ ಸಂದರ್ಭದಲ್ಲಿ ಪುದುವೆಟ್ಟು ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕೆ.ಸಿ, ಪಂಚಾಯತ್ ರಾಜ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ರಾಯ್ ಜೋಸೆಫ್, ಭೂ ನ್ಯಾಯ ಮಂಡಳಿ ಸದಸ್ಯರಾದ ಬೊಮ್ಮಣ್ಣ ಗೌಡ ಮಠ, ಮಾಜಿ ಎಪಿಎಂಸಿ ಉಪಾಧ್ಯಕ್ಷ ಅಬ್ದುಲ್ ಗಪೂರ್, ವಾರ್ಡಿನ ಉಪಾಧ್ಯಕ್ಷ ಸಿಪಿ ಉಮ್ಮರ್, ಗ್ರಾಮ ಸಮಿತಿ ಉಪಾಧ್ಯಕ್ಷ ಅಪ್ಪಚ್ಚನ್ , ಸದಸ್ಯರಾದ ಸುರೇಶ್ ದರ್ಕಾಸ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನಾರಾಯಣ ಪಿಲಿಕಲ, ಗೋಪಾಲ ಪೂಜಾರಿ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ ಎಂ.ಬಿ. ಸಹಕರಿಸಿದರು.

Related posts

ಬಂದಾರು ಗ್ರಾ.ಪಂ. ನಲ್ಲಿ ಸಾಮಾಜಿಕ ಭದ್ರತಾ ಯೋಜನೆಗಳ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮ

Suddi Udaya

ಚಾರ್ಮಾಡಿ: ಅರೆ ಪ್ರಜ್ಞಾ ಸ್ಥಿತಿಯಲ್ಲಿ ಪತ್ತೆಯಾದ ಕಾಡಾನೆ

Suddi Udaya

ಪಡಂಗಡಿ: ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಆರೋಗ್ಯ ಮಾಹಿತಿ ಹಾಗೂ ತಪಾಸಣೆ

Suddi Udaya

ಎಸ್ ಡಿ ಎಂ ಪದವಿಪೂರ್ವ ಕಾಲೇಜಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಚರ್ಚೆ ಹಾಗೂ ವಿಶೇಷ ಮಾಹಿತಿ ಶಿಬಿರ

Suddi Udaya

ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಚಲನಚಿತ್ರ ನಿರ್ದೇಶಕ ವಿನು ಬಳಂಜ

Suddi Udaya

ಮಹಿಳೆಯ ಮೊಬೈಲನ್ನು ಕದ್ದು, ಫೋನ್ ಪೇ ಮೂಲಕ ಹಣ ವಂಚನೆ: ತನ್ನ ಸ್ನೇಹಿತರಿಗೆ ಹಣ ಕಳುಸಿದ್ದ ಆರೋಪಿ ವಿರುದ್ಧ ಕೇಸ್ ದಾಖಲು

Suddi Udaya
error: Content is protected !!