29.6 C
ಪುತ್ತೂರು, ಬೆಳ್ತಂಗಡಿ
May 17, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬೆಳ್ತಂಗಡಿ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಮೇ.14ರಂದು ದಸ್ತಗಿರಿ ಮಾಡಿದ್ದಾರೆ.

ಅಜರುದ್ದೀನ್ @ ಅಜರ್ @ ಅಜ್ಜು (29), ತಂದೆ: ಅಬೂಬಕ್ಕರ್, ವಾಸ: ಕಳವಾರು ಆಶ್ರಯ ಕಾಲೊನಿ, ಕಳವಾರು ಗ್ರಾಮ, ಮಂಗಳೂರು, ಅಬ್ದುಲ್ ಖಾದರ್ @ ನೌಫಲ್(24), ತಂದೆ: ಕೆ ಎಂ ನಜೀರ್, ವಾಸ: ಬದ್ರಿಯ ನಗರ, ಬೆಳಪು, ಕಾಪು, ಉಡುಪಿ ಜಿಲ್ಲೆ, ಹಾಲಿ ವಾಸ: ಜೈನಾಬಿ ಫ್ಲಾಟ್, ಭಟ್ರಕೆರೆ, ಉಸ್ಮಾನಿಯಾ ಮಸೀದಿ ಬಳಿ, ಬಟ್ಟೆ, ಮಂಗಳೂರು ಮತ್ತು ನೌಷಾದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್ (39), ತಂದೆ: ದಿ.ನಸ್ರುದ್ದೀನ್, ವಿಳಾಸ: ಟಿ.ಕೆ.ಬಶೀರ್ ಅಪಾರ್ಟಮೆಂಟ್ 1ನೇ ಮಹಡಿ, ಸಿಟಿ ಲೈಟ್ ಹೊಟೇಲ್ ಹಿಂಭಾಗ, ಕುಂಪನಮಜಲು ರಸ್ತೆ, ಫರಂಗಿಪೇಟೆ, ಬಂಟ್ವಾಳ ತಾಲೂಕು, ಹಾಲಿ ವಾಸ: ಸೈಯದ್ ರವರ ಬಾಡಿಗೆ ಮನೆ, 1ನೇ ಮಹಡಿ, ಕೆ.ಆ‌ರ್.ಪುರಂ, ಹಾಸನ ಜಿಲ್ಲೆ ಇವರು ಬಂಧಿತರು. ಆರೋಪಿಗಳ ಪೈಕಿ ಅಜರುದ್ದೀನ್ @ ಅಜರ್ @ ಅಜ್ಜು ಎಂಬಾತನ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ಠಾಣೆಗಳಲ್ಲಿ 3 ಕಳವು ಪ್ರಕರಣ ದಾಖಲಾಗಿರುತ್ತದೆ. ಈತನು ಪ್ರಕರಣದ ಆರೋಪಿಗಳಿಗೆ ಕೊಲೆಯಾದ ಸುಹಾಸ್ ಶೆಟ್ಟಿಯ ಚಲನವಲನದ ಬಗ್ಗೆ ಮಾಹಿತಿಯನ್ನು ನೀಡಿ ಕೊಲೆಗೆ ಸಹಕರಿಸಿರುತ್ತಾನೆ. ಆರೋಪಿ ಅಬ್ದುಲ್ ಖಾದರ್ @ ನೌಫಲ್ ಎಂಬಾತನು ಆರೋಪಿಗಳು ಕೊಲೆ ಕೃತ್ಯ ನಡೆಸಿದ ನಂತರ ಕಾರಿನಲ್ಲಿ ಪರಾರಿಯಾಗುವ ಸಮಯದಲ್ಲಿ ಆರೋಪಿಗಳಿಗೆ ಸಹಕರಿಸಿದ್ದನು. ಇನ್ನೋರ್ವ ಆರೋಪಿ ನೌಷದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್ ಎಂಬಾತನು ಸುಹಾಸ್ ಶೆಟ್ಟಿಯ ಕೊಲೆಗೆ ಉಳಿದ ಆರೋಪಿಗಳ ಜೊತೆ ಸಂಚು ರೂಪಿಸಿ ಕೊಲೆ ಕೃತ್ಯದಲ್ಲಿ ಭಾಗಿಯಾಗಿರುವುದಾಗಿದೆ.

ಈತನು ಈ ಹಿಂದೆ ಸುರತ್ಕಲ್, ಬಟ್ಟೆ, ಮೂಡಬಿದ್ರಿ, ಮಂಗಳೂರು ಉತ್ತರ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆಗೆ ಸಂಚು ಸೇರಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅಜರುದ್ದೀನ್ @ ಅಜರ್ @ ಅಜ್ಜು ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿರುತ್ತದೆ. ಆರೋಪಿಗಳಾದ ಅಬ್ದುಲ್ ಖಾದರ್ @ ನೌಫಲ್ ಮತ್ತು ನೌಷದ್ @ ವಾಮಂಜೂರು ನೌಷದ್ @ ಚೊಟ್ಟೆ ನೌಷದ್‌ ಎಂಬವರನ್ನು ಹೆಚ್ಚಿನ ತನಿಖೆ ಕುರಿತು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ. ಈ ಕೊಲೆ ಪ್ರಕರಣದ ತನಿಖೆಯು ಮುಂದುವರಿದಿದ್ದು, ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ

Related posts

ಧರ್ಮಸ್ಥಳ ಡಾ. ವಿಘ್ನರಾಜ್ ಎಸ್.ಆರ್. ರವರಿಗೆ ಶಂಕರ ಸಾಹಿತ್ಯ ಪ್ರಶಸ್ತಿ

Suddi Udaya

ಪಿಲ್ಯ ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಮುಂಡೂರು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ನಗರಗಳಲ್ಲಿ ಬಿ -ಖಾತಾ ಆಂದೋಲನ: ಜನರ ಕಣ್ಣೊರೆಸುವ ತಂತ್ರ, ಖಜಾನೆ ತುಂಬಿಸುವ ಒಳತಂತ್ರ: ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ ಟೀಕೆ

Suddi Udaya

ಬೆಳ್ತಂಗಡಿ ತಾಲೂಕು ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಮ್ಯಾನ್ಯುವಲ್ ದಾಖಲಾತಿ ಪ್ರಕ್ರಿಯೆ ಆರಂಭ

Suddi Udaya

ಬದನಾಜೆ ಸರಕಾರಿ ಶಾಲೆಯಲ್ಲಿ ಸುಜ್ಞಾನ ನಿಧಿ ಯೋಜನೆಗೆ ಚಾಲನೆ

Suddi Udaya
error: Content is protected !!