ಬೆಳ್ತಂಗಡಿ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇ-ಖಾತಾ ನೀಡಲು ಮೇ 10 ರವರೆಗೆ ಅಭಿಯಾನ ನಡೆಸಲಾಗಿದ್ದು, ಸದರಿ ದಿನಾಂಕದವರೆಗೆ ನಿರೀಕ್ಷಿತ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗದ ಕಾರಣ ಇ-ಖಾತಾ ನೀಡಲು ಬಾಕಿಯಿರುವುದರಿಂದ ಅಭಿಯಾನದ ಅವಧಿಯನ್ನು ಆಗಷ್ಟ್ 10 ರವರೆಗೆ ವಿಸ್ತರಿಸಲಾಗಿದೆ. ಆದ್ದರಿಂದ ಈಗಾಗಲೇ ಸರ್ಕಾರ ಮತ್ತು ನಿರ್ದೇಶಕ
ನಾಲೆಯದಿಂದ ನೀಡಿರುವ ಮಾರ್ಗಸೂಚಿಗಳನ್ನು ವಿಸ್ತರಿಸಿರುವಂತೆ ಅನುಸರಿಸಿ ಇ-ಖಾತಾ ನೀಡಲು ಬಾಕಿಯಿರುವ ಸ್ವತ್ತುಗಳಿಗೆ ತ್ವರಿತವಾಗಿ ಇ-ಖಾತಾ ನೀಡಲು ಕ್ರಮವಹಿಸಲು ನಿರ್ದೇಶಿಸಿದೆ.