23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ: ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಅನಧಿಕೃತ ಗೂಡಂಗಡಿಗಳನ್ನು ಧರ್ಮಸ್ಥಳ ಗ್ರಾ. ಪಂ. ನಿಂದ ತೆರವು

ಧರ್ಮಸ್ಥಳದಿಂದ ಬೆಂಗಳೂರಿಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಲ್ಲೇರಿಯಿಂದ ಕುದ್ರಾಯ ಸೇತುವೆ ತನಕ ರಸ್ತೆ ಬದಿ ಹಾಗೂ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಹಾಕಿರುವ 19 ಅಂಗಡಿಗಳನ್ನು ಧರ್ಮಸ್ಥಳ ಗ್ರಾಮ ಪಂಚಾಯಿತಿಯಿಂದ ತೆರೆವುಗೊಳಿಸಲಾಯಿತು.

ಅಂಗಡಿಗಳನ್ನು ತೆರವುಗೊಳಿಸುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದ್ದು. ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿತ್ತು. ಸದ್ರಿ ಅಂಗಡಿಗಳಿಂದಾಗಿ ಈ ಮೊದಲು ವಾಹನಗಳು ಅಪಘಾತವಾಗಿ ಸಾವು ಸಂಭವಿಸಿದ್ದವು. ಈ ಬಗ್ಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿ ಜಾಗೃತರಾಗಿ ಸಂಬಂಧಪಟ್ಟ ಅಂಗಡಿ ಮಳಿಗೆಗೆ ಧ್ವನಿವರ್ಧಕಗಳ ಮೂಲಕ ಸತತವಾಗಿ ತೆರವುಗೊಳಿಸುವಂತೆ ಸೂಚನೆಯನ್ನು ನೀಡಲಾಗಿತ್ತು. ಆದರು ಕೂಡ ತೆರವುಗೊಳಿಸದೆ ಇರುವುದರಿಂದ. ಧರ್ಮಸ್ಥಳ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸಹಕಾರದೊಂದಿಗೆ, ಧರ್ಮಸ್ಥಳ ಗ್ರಾಮ್ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದಿನೇಶ್ ಎಂ ಹಾಗೂ ಸಿಬ್ಬಂದಿ ವರ್ಗದವರು ತೆರವುಗೊಳಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಪೊಲೀಸರು ಸಹಕರಿಸಿದರು.

Related posts

ಸೆ.23: ಬೆಳ್ತಂಗಡಿ ಸುನ್ನೀ ಕೋ-ಆರ್ಡಿನೇಶನ್ ಸಮಿತಿ ವತಿಯಿಂದ “ಗ್ರ್ಯಾಂಡ್ ಹುಬ್ಬುರ್ರಸೂಲ್ ಮಜ್ಲಿಸ್‌” ವಿಶೇಷ ಮೌಲಿದ್ ಪಾರಾಯಣ ಹಾಗೂ ಬುರ್ದಾ ಕಾರ್ಯಕ್ರಮ

Suddi Udaya

ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅನ್ನದಾನ ಸೇವೆಯ ಕರಪತ್ರ ಬಿಡುಗಡೆ

Suddi Udaya

ವಾಲಿಬಾಲ್ ಪಂದ್ಯಾಟ: ಅನುಗ್ರಹ ಪ್ರೌಢಶಾಲಾ ಬಾಲಕಿಯರ ತಂಡಕ್ಕೆ ಪ್ರಶಸ್ತಿ

Suddi Udaya

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಷಷ್ಠಿ ಮಹೋತ್ಸವ, ಮಹಾರಥೋತ್ಸವ

Suddi Udaya

ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ಪುಷ್ಪರಥೋತ್ಸವ: ಅಭಿನಂದನೆ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಬಿಜೆಪಿ ಯುವಮೋರ್ಚಾದ ವತಿಯಿಂದ 4ನೇ ವರ್ಷದ ದೀಪಾವಳಿ ‘ದೋಸೆ ಹಬ್ಬ’ ಉದ್ಘಾಟನೆ

Suddi Udaya
error: Content is protected !!