ಬೆಳ್ತಂಗಡಿ: ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯಮಟ್ಟದ ಉತ್ತಮ ಸಹಕಾರ ಸಂಘ ಪ್ರಶಸ್ತಿ ಪುರಸ್ಕೃತ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ೨೬ನೇ ಮೂಡಬಿದಿರೆ ಶಾಖೆ ಮೇ 21ರಂದು ಪದ್ಮಾಂಬ ಬಳಿ ಇರುವ ಮಹಾವೀರ ಭವನದ ಮುಂಭಾಗದ ರಿಷಿಕಾ ಟವರ್ಸ್ನಲ್ಲಿ ಶುಭಾರಂಭಗೊಳ್ಳಲಿದೆ.
ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಕಚೇರಿ ಉದ್ಘಾಟಿಸಲಿರುವರು. ಸಂಘದ ಉಪಾಧ್ಯಕ್ಷ ಭಗೀರಥ ಜಿ. ಅಧ್ಯಕ್ಷತೆ ವಹಿಸಲಿದ್ದಾರೆ. ಮೂಡಬಿದ್ರೆ ಶಾಸಕ ಉಮಾನಾಥ ಎ. ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಲಿರುವರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ, ಸಹಕಾರ ರತ್ನ ಮೂಡಬಿದಿರೆ ಕೋ-ಅಪರೇಟಿವ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಬಾಹುಬಲಿ ಪ್ರಸಾದ್ ಭದ್ರತಾ ಕೋಶ ಉದ್ಘಾಟಿಸಲಿರುವರು, ಮೂಡಬಿದ್ರೆ ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ ಗಣಕ ಯಂತ್ರ ಉದ್ಘಾಟನೆ, ಮೂಡಬಿದ್ರೆ ನಾರಾಯಣ ಸಾಮಿಲ್ ಮಾಲಕ ಭಾನುಮತಿ ಶೀನಪ್ಪ ನಿರಖು ಠೇವಣಿ ಸರ್ಟಿಫಿಕೇಟ್ ವಿತರಿಸಲಿದ್ದಾರೆ ಹಾಗೂ ಮೂಡಬಿದ್ರೆ ಧನಲಕ್ಷ್ಮೀ ಕ್ಯಾಶ್ಯೂ ಶ್ರೀಪತಿ ಭಟ್ ಉಳಿತಾಯ ಖಾತೆ ಪುಸ್ತಕ ವಿತರಿಸಲಿದ್ದಾರೆ.
ಶ್ರೀ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ, ಪದ್ಮರಾಜ್ ಆರ್, ಮೂಡಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಪುರಸಭೆ ಉಪಾಧ್ಯಕ್ಷ ನಾಗರಾಜ ಪೂಜಾರಿ, ನಿಶ್ಮಿತಾ ಟವರ್ಸ್ ಮಾಲಕ ನಾರಾಯಣ ಪಿ.ಎಮ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಸುದರ್ಶನ್ ಎಂ., ಮೂಡಬಿದಿರೆ ಯುವವಾಹಿನಿ ಘಟಕ ಅಧ್ಯಕ್ಷ ಮುರಳೀಧರ್ ಕೋಟ್ಯಾನ್, ಫಾರ್ಚೂನ್ ಪ್ರಮೊಟರ್ಸ್ ಮಾಲಕ ಅಬುಲಾಲ್ ಪುತ್ತಿಗೆ, ಪುರಸಭೆ ಸದಸ್ಯರಾದ ಸುರೇಶ್ ಪ್ರಭು ಹಾಗೂ ಪಿ.ಕೆ ತೋಮಸ್, ಪುರಸಭೆ ಮಾಜಿ ಅಧ್ಯಕ್ಷ ಸುರೇಶ್ ಕೋಟ್ಯಾನ್ ಹಾಗೂ ರಿಷಿಕಾ ಟವರ್ಸ್ ಮಾಲಕ ಸನ್ಮತ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರೂ.1250 ಕೋಟಿಗೂ ಮಿಕ್ಕಿ ವ್ಯವಹಾರ: ಭಗೀರಥ ಜಿ
ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಇ- ಸ್ಟಾö್ಯಂಪಿAಗ್, ೪೭ ಸಾವಿರಕ್ಕೂ ಮಿಕ್ಕಿ ಸದಸ್ಯರ ಬಲ, ರೂ.೨೪೫ ಕೋಟಿ ಠೇವಣಿ, ರೂ.೨೦೫ ಕೋಟಿ ಸಾಲ ಹಂಚಿಕೆ, ರೂ.೧೨೫೦ ಕೋಟಿಗೂ ಮಿಕ್ಕಿ ವ್ಯವಹಾರ ನಡೆಸಿದೆ.ಅತೀ ಶೀಘ್ರದಲ್ಲೇ ಚಿನ್ನಾಭರಣ ಸಾಲ, ಆಕರ್ಷಕ ಬಡ್ಡಿದರದಲ್ಲಿ ಠೇವಣಿ ಸ್ವೀಕರಿಸಲಾಗುತ್ತಿದ್ದು, ಗ್ರಾಹಕರಿಗೆ ಆಯ್ದ ಶಾಖೆಗಳಲ್ಲಿ ಸೇಪ್ ಲಾಕರ್ ಸೌಲಭ್ಯವಿದೆ. ವಿಶೇಷವಾಗಿ ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಶ್ರೀ ಗುರುದೇವ ಅಭ್ಯುದಯ ಠೇವಣಿ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರೀ ಗುರುದೇವ ಅರಿವು ಠೇವಣಿ, ಪಿಂಚಣಿ ಯೋಜನೆಗಾಗಿ ಶ್ರೀ ಗುರುದೇವ ಆಸರೆ ಠೇವಣಿ ನಮ್ಮಲ್ಲಿ ಲಭ್ಯ ಎಂದು ಉಪಾಧ್ಯಕ್ಷ ಭಗೀರಥ ಜಿ ಹೇಳಿದರು.
ನಿರ್ದೇಶಕರಾದ ಸುಜಿತಾ ವಿ. ಬಂಗೇರ, ಕೆ.ಪಿ. ದಿವಾಕರ, ಧರ್ಣಪ್ಪ ಪೂಜಾರಿ, ಡಾ| ರಾಜರಾಮ ಕೆ.ಬಿ, ರಕ್ಷಿತ್ ಶಿವರಾಂ, ಜಗದೀಶ್ಚಂದ್ರ ಡಿ.ಕೆ, ತನುಜಾ ಶೇಖರ್, ಧರಣೇಂದ್ರ ಕುಮಾರ್, ಆನಂದ ಪೂಜಾರಿ ಸರ್ವೆದೋಳ, ಚಿದಾನಂದ ಪೂಜಾರಿ ಎಲ್ದಕ್ಕ, ಅಭಿಜಿತ್, ಸಂಜೀವ ಪೂಜಾರಿ, ಚಂದ್ರಶೇಖರ್, ಗಂಗಾಧರ ಮಿತ್ತಮಾರು, ಜಯವಿಕ್ರಮ ಪಿ. ಕಲ್ಲಾಪು ಹಾಗೂ ಸೂರಜ್ ಕುಮಾರ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶ್ವತ್ ಕುಮಾರ್, ವಿಶೇಷಾಧಿಕಾರಿ ಯಂ. ಮೋನಪ್ಪ ಪೂಜಾರಿ, ಕಂಡೆತ್ಯಾರು, ಪ್ರಧಾನ ಶಾಖಾ ವ್ಯವಸ್ಥಾಪಕ ಅಭಿಜಿತ್ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿರುವವರು.