25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತುವಿನಲ್ಲಿ ಜುಮ್ರಾ ಜುಮಾದಿ ದೈವಗಳ ಪುನರ್‌ಪ್ರತಿಷ್ಠಾಪನೆ

ಮುಂಡೂರು : ಮುಂಡೂರು ಗ್ರಾಮದ ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತುವಿನಲ್ಲಿ ಮೇ 16ರಂದು ಬೆಳಗ್ಗೆ ವೆಂಕಟೇಶ ಶಾಂತಿ ಶಂಭೂರು ಅವರ ನೇತೃತ್ವದಲ್ಲಿ ನಾಲ್ಕುಗುತ್ತು, ಬರ್ಕೆ ಗ್ರಾಮಗಳಿಗೆ ಸಂಬಂಧಪಟ್ಟ ಜೂಮ್ರ ಜುಮಾದಿ ದೈವಗಳ ಪುನರ್ ಪ್ರತಿಷ್ಠಾಪನೆ ನಡೆಯಿತು.


ಮೇ 15ರಂದು ಬೆಳಗ್ಗೆ ಪಾಪಿನಡೆಗುತ್ತಿನ ಕುಟುಂಬಸ್ಥರ ಧರ್ಮ ಚಾವಡಿಯಲ್ಲಿ ಗಣಹೋಮ, ಮೂಲ ನಾಗಬನದಲ್ಲಿ ನಾಗಬ್ರಹ್ಮ ದೇವರಿಗೆ ತನುತಂಬಿಲ ಸೇವೆ, ಧರ್ಮಚಾವಡಿಯಲ್ಲಿ ದೈವಗಳಿಗೆ ಪಂಚಪರ್ವ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಜೂಮ್ರ ಜುಮಾದಿ ದೈವಸ್ಥಾನದ ಎದುರಲ್ಲಿ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಸಪ್ತಶುದ್ದಿ ಶಿಲ್ಪವರ್ಣ, ಪಂಚಗವ್ಯ ಮೇಲನ ಸ್ವಸ್ತಿ ಪುಣ್ಯಾಹವಾಚನ, ರಾಕ್ಟೋಘ್ನ ಹೋಮ, ವಾಸ್ತುಪೂಜೆ, ವಾಸ್ತುಹೋಮ, ವಾಸ್ತು ಬಲಿ, ಪ್ರಕಾರ ಬಲಿ, ಪ್ರಕಾರ ಶುದ್ದಿ, ಬಿಂಬ ಶುದ್ದಿ, ಧಾನ್ಯಾಧಿವಾಸ, ಶಯನಾಧಿವಾಸ, ಅನ್ನಸಂತರ್ಪಣೆ ನಡೆಯಿತು.
ಮೇ 16ರಂದು ಬೆಳಗ್ಗೆ ಗಣಪತಿಹೋಮ, ತೋರಣ ಮುಹೂರ್ತ, ಶಿಖರ ಪ್ರತಿಷ್ಠೆ ನವಕ ಕಲಶ ಪೂಜೆ, ನವಕ ಪ್ರಧಾನ ಹೋಮ, ಬೆಳಗ್ಗೆ ದೈವ ಪ್ರತಿಷ್ಠೆ ಪ್ರತಿಷ್ಠಾ ಹೋಮ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ನಡೆಯಿತು.

ಕಾಯ೯ಕ್ರಮಗಳಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಮುಂಡೂರು ಶ್ರೀಕ್ಷೇತ್ರ ಮಂಗಳಗಿರಿಯ ಧರ್ಮದರ್ಶಿ ರಾಜೀವ, ಪ್ರತಿಷ್ಠಾನದ ಪದಾಧಿಕಾರಿಗಳು, ಕುಟುಂಬಸ್ಥರು, ನಾಲ್ಕು ಗ್ರಾಮಗಳ ಭಕ್ತರು ಭಾಗವಹಿಸಿದ್ದರು.


ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ, ರಾತ್ರಿ 8.30ಕ್ಕೆ ಜೂಮ್ರ, ಜುಮಾದಿ ದೈವಗಳ ನೇಮೋತ್ಸವ ನಡೆಯಲಿದೆ .


Related posts

ಓಡಿಲ್ನಾಳ: ಮೈರಲ್ಕೆ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ವಿಶೇಷ ಪೂಜೆ

Suddi Udaya

ಉಜಿರೆ ದೇವಸ್ಥಾನದ ವಿಜಯಗೋಪುರ ನಿರ್ಮಾಣ ಕಾರ್ಯಾಲಯ ಉದ್ಘಾಟನೆ

Suddi Udaya

ಶಿಶಿಲ: ಹೊಸಕಟ್ಟೆಯಲ್ಲಿ ಪ್ರತ್ಯಕ್ಷಗೊಂಡ ಕಾಡಾನೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: . ದ.ಕ. ಜಿಲ್ಲೆ ಪ್ರಥಮ ಸ್ಥಾನ

Suddi Udaya

ಉಜಿರೆ ಪ್ರಾಥಮಿಕ ಸಹಕಾರಿ ಸಂಘದ ಚುನಾವಣೆ: ಬಿಜೆಪಿ 7 – ಕಾಂಗ್ರೆಸ್ 5, ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ

Suddi Udaya

ಸುದ್ದಿ ಉದಯ ಪತ್ರಿಕೆಯ ಪ್ರತಿನಿಧಿ ಕರುಣಾಕರ ಶಿಶಿಲ ರವರ ನೂತನ ಗೃಹ “ಮತ್ಸ್ಯ ಕೃಪಾ” ಕ್ಕೆ ಶಾಸಕ ಹರೀಶ್ ಪೂಂಜ ಹಾಗೂ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಭೇಟಿ, ಶುಭಹಾರೈಕೆ

Suddi Udaya
error: Content is protected !!