23.3 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳಿಯ : ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

ಕಳಿಯ: ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆದೇಶದಂತೆ “ಓದುವ ಬೆಳಕು” ಕಾರ್ಯಕ್ರಮದಡಿ 2025 – 26 ನೇ ಸಾಲಿನ ಮಕ್ಕಳ ಬೇಸಿಗೆ ಶಿಬಿರವು ಕಳಿಯ ಗ್ರಾಮ ಪಂಚಾಯತ್ ಮತ್ತು ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಇವರ ಸಹಯೋಗದೊಂದಿಗೆ ಮೇ 14 ರಿಂದ ಮೇ 18 ರ ವರೆಗೆ ನಡೆಯಲಿದ್ದು ಇದರ ಉದ್ಘಾಟನಾ ಕಾರ್ಯಕ್ರಮವನ್ನು ಕಳಿಯ ಗ್ರಾ.ಪಂ. ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ದಿವಾಕರ ಎಂ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಪ್ರಾರಂಭ ಮಾಡಿದರು.

ಕಾರ್ಯಕ್ರಮದಲ್ಲಿ ಪಂ. ಸದಸ್ಯರು ಸುಧಾಕರ ನ್ಯಾಕ್, ವಿಜಯಕುಮಾರ್, ಶ್ರೀಮತಿ ಶ್ವೇತಾ ಹಾಗೂ ಪಂ.ಕಾರ್ಯದರ್ಶಿ ಕುಂಞ ಮತ್ತು ಶಿಕ್ಷಣ ಪೌಂಡೇಶನ್ ಜಿಲ್ಲಾ ಸಂಯೋಜಕ ಲವೀಶ ಕುಮಾರ್, ಯೋಗ ತರಬೇತುದಾರರಾದ ನಿತಿನ್ ಕುಮಾರ್, ಸತೀಶ್ ಭಂಡಾರಿ ಮತ್ತು ಸಿಬ್ಬಂದಿ ವರ್ಗ, ಎಮ್.ಬಿಕೆ. ಎಲ್.ಸಿ.ಆರ್ ಪಿ, ವಿ ಆರ್ ಡಬ್ಲ್ಯೂ ಮತ್ತು ಶಿಬಿರದ ಮಕ್ಕಳು ಭಾಗವಹಿಸಿದ್ದರು.

Related posts

ಕಲ್ಮಂಜ ಪ್ರೌಢಶಾಲೆಯಲ್ಲಿ ಪೋಷಕರ ಸಭೆ

Suddi Udaya

ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ

Suddi Udaya

ಲಾಯಿಲ: ಕುಂಟಿನಿಯಲ್ಲಿ ಮರ್ಹೂಂ ಸಾಹುಲ್ ಹಮೀದ್ ಉಜಿರೆ ರವರಿಗೆ ಮನೆ ಹಸ್ತಾಂತರ

Suddi Udaya

ಸವಣಾಲು ನೇತಾಜಿ ಸುಭಾಷ್ ಚಂದ್ರ ಬೋಸ್ ಸ.ಪ್ರೌ. ಶಾಲೆಯ ವಿದ್ಯಾರ್ಥಿನಿ ಕು| ಅಪೇಕ್ಷಾ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದು ವಿದ್ಯಾರ್ಥಿವೇತನಕ್ಕೆ ಆಯ್ಕೆ

Suddi Udaya

ಸುಹಾಸ್ ಶೆಟ್ಟಿ ಮನೆಗೆ ಹೋಗಿ ಪೋಷಕರಿಗೆ ಸಾಂತ್ವನ ಹೇಳಿದ ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ

Suddi Udaya

ಮೇಲಂತಬೆಟ್ಟು: ದರ್ಶನ್ ಯು ಸಾಲ್ಯಾನ್ ಅಸೌಖ್ಯದಿಂದ ನಿಧನ

Suddi Udaya
error: Content is protected !!