ಕಳಿಯ: ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಆದೇಶದಂತೆ “ಓದುವ ಬೆಳಕು” ಕಾರ್ಯಕ್ರಮದಡಿ 2025 – 26 ನೇ ಸಾಲಿನ ಮಕ್ಕಳ ಬೇಸಿಗೆ ಶಿಬಿರವು ಕಳಿಯ ಗ್ರಾಮ ಪಂಚಾಯತ್ ಮತ್ತು ಅರಿವು ಕೇಂದ್ರ ಗ್ರಾಮ ಪಂಚಾಯತ್ ಗ್ರಂಥಾಲಯ ಇವರ ಸಹಯೋಗದೊಂದಿಗೆ ಮೇ 14 ರಿಂದ ಮೇ 18 ರ ವರೆಗೆ ನಡೆಯಲಿದ್ದು ಇದರ ಉದ್ಘಾಟನಾ ಕಾರ್ಯಕ್ರಮವನ್ನು ಕಳಿಯ ಗ್ರಾ.ಪಂ. ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ದಿವಾಕರ ಎಂ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಪ್ರಾರಂಭ ಮಾಡಿದರು.
ಕಾರ್ಯಕ್ರಮದಲ್ಲಿ ಪಂ. ಸದಸ್ಯರು ಸುಧಾಕರ ನ್ಯಾಕ್, ವಿಜಯಕುಮಾರ್, ಶ್ರೀಮತಿ ಶ್ವೇತಾ ಹಾಗೂ ಪಂ.ಕಾರ್ಯದರ್ಶಿ ಕುಂಞ ಮತ್ತು ಶಿಕ್ಷಣ ಪೌಂಡೇಶನ್ ಜಿಲ್ಲಾ ಸಂಯೋಜಕ ಲವೀಶ ಕುಮಾರ್, ಯೋಗ ತರಬೇತುದಾರರಾದ ನಿತಿನ್ ಕುಮಾರ್, ಸತೀಶ್ ಭಂಡಾರಿ ಮತ್ತು ಸಿಬ್ಬಂದಿ ವರ್ಗ, ಎಮ್.ಬಿಕೆ. ಎಲ್.ಸಿ.ಆರ್ ಪಿ, ವಿ ಆರ್ ಡಬ್ಲ್ಯೂ ಮತ್ತು ಶಿಬಿರದ ಮಕ್ಕಳು ಭಾಗವಹಿಸಿದ್ದರು.