ಬೆಳ್ತಂಗಡಿ: ಇಲ್ಲಿಯ ಸ.ಪ್ರ.ದ. ಕಾಲೇಜಿನ ವಾಣಿಜ್ಯ ಸಂಘ ಮತ್ತು ಆಂತರಿಕ ಗುಣಮಟ್ಟ ಭರವಸ ಕೋಶ ಇದರ ಸಂಯುಕ್ತ ಆಶ್ರಯದಲ್ಲಿ ಸ್ಪೂರ್ತಿ 2k25 ಎಂಬ ಕಾಮರ್ಸ್ ಫೆಸ್ಟ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆ ಇಲ್ಲಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಕೆ.ಎಸ್., ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕೌಶಲ್ಯ ಬಹು ಮುಖ್ಯವಾದದ್ದು ಹಾಗಾಗಿ ವಿದ್ಯಾಭ್ಯಾಸ ಮಾಡುವಾಗ ಪ್ರತಿದಿನ ಪ್ರಚಲಿತ ಮಾಹಿತಿಯೊಂದಿಗೆ ನಾವುಗಳು ಅಪ್ಡೇಟ್ ಆಗಬೇಕು ಹಾಗೂ ನಮ್ಮ ಕೌಶಲ್ಯಗಳು ಅತ್ಯಂತ ನೈಪುಣ್ಯತೆಯಿಂದ ಕೂಡಿರಬೇಕು ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ| ಸುರೇಶ್ ವಿ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರವೇಶ ಪದ್ಮನಾಭ ಕೆ ಇವರು ವಾಣಿಜ್ಯ ಸಂಘದ ಹಾಗೂ ಸ್ಪೂರ್ತಿ 2K25 ಇದರ ಉದ್ದೇಶವನ್ನು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ವಾಣಿಜ್ಯ ಸಂಘದ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಸುಮನ್ ಶೆಟ್ಟಿ ಎನ್ ಭಾಗವಹಿಸಿ ವಿದ್ಯಾರ್ಥಿಗಳಲ್ಲಿ ಪಠ್ಯದ ಜೊತೆಗೆ ಅವರ ಪ್ರತಿಭೆಗಳನ್ನು ಅನಾವರಣಗೊಳಿಸಲು ಮತ್ತು ಅವರಿಗೆ ಬೇಕಾಗುವ ಕೌಶಲ್ಯಗಳನ್ನು ಬೆಳಸಿಕೊಳ್ಳಲು ಇಂತಹ ಸಂಘ ವೇದಿಕೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಈ ರೀತಿಯ ಸಾಂಘಿಕ ಚಟುವಟಿಕೆಗಳಲ್ಲಿ ತೊಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳು ತಮ್ಮ ನೈಪುಣ್ಯತೆಯನ್ನು ಬೆಳಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ವೇದಿಕೆಯಲ್ಲಿ ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಡಾ. ರವಿ ಎಂ ಎನ್ ಹಾಗೂ ವಾಣಿಜ್ಯ ಸಂಘದ ಪದಾಧಿಕಾರಿಗಳಾದ ಕುಮಾರಿ ನಯನ, ಕುಮಾರಿ ಸಿಂಧು, ಕುಮಾರಿ ಉಷಾಲತಾ ಮತ್ತು ನಿತೇಶ್ ಉಪಸ್ಥಿತರಿದ್ದರು.
ವಾಣಿಜ್ಯ ಸಂಘದ ಸಂಚಾಲಕರಾದ ಪ್ರೊಫೆಸರ್ ನವೀನ್ ಸ್ವಾಗತಿಸಿ ಪ್ರಥಮ ಎಂಕಾಂ ನ ಕುಮಾರಿ ವಾಣಿ ಪ್ರಾರ್ಥಿಸಿದರು. ಕುಮಾರಿ ವೈಷ್ಣವಿ ವಂದಿಸಿದರು. ಕು. ಅನನ್ಯ ಕಾರ್ಯಕ್ರಮ ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಪ್ರೊಫೆಸರ್ ರಾಜೇಶ್ವರಿ ಹೆಚ್ ಎಸ್ ಸ್ವಾಗತಿಸಿ, ಕುಮಾರಿ ರಕ್ಷಿತ ವಂದಿಸಿದರು.