ಮುಂಡಾಜೆ: ಆಪರೇಷನ್ ಸಿಂಧೂರ ಇದರ ಯಶಸ್ವಿ ಕಾರ್ಯಾಚರಣೆ ಮೂಲಕ ಫಹಲ್ಗಾಮ್ ನಲ್ಲಿ ನಡೆದ ದುರಂತಕ್ಕೆ ಉತ್ತರ ನೀಡಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಾರ್ಯಕ್ಕೆ ಶ್ರೀ ಪರಶುರಾಮ ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಮುಂಡಾಜೆ ಶಕ್ತಿ ಕೇಂದ್ರದ ವತಿಯಿಂದ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಸೇವೆ ಸಿಂಧೂರ ನಡೆಸಿ ಪ್ರಾರ್ಥಿಸಲಾಯಿತು.
ದುಷ್ಟ ಕ್ಷತ್ರಿಯಂತಕ ನಾದ ಭಾರ್ಗವ ರಾಮ, ನಮ್ಮೆಲ್ಲರ ಪ್ರಾರ್ಥನೆಯನ್ನು ಮನ್ನಿಸಿ ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ಸಂರಕ್ಷಿಸುವಂತೆ ಪ್ರಾರ್ಥಿಸಲಾಯಿತು.
ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ ಬಂಗೇರ, ಸದಸ್ಯರಾದ ಅಗರಿ ರಾಮಣ್ಣ ಶೆಟ್ಟಿ, ರವಿಚಂದ್ರ ಶ್ರೀಮತಿಅಶ್ವಿನಿ ಮತ್ತು ಸುರೇಶ್ ಹೆಗ್ಡೆ ಶಶಾಂಕ್ ಮರಾಠೆ, ನಾರಾಯಣ ಫಡಕೆ ಮೊದಲಾದವರು ಭಾಗವಹಿಸಿದರು.