ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದಿಗೆ ಮೇ 17ರಿಂದ 23 ವರೆಗೆ ಸಂಜೆ 6 ರಿಂದ 8 ರವರೆಗೆ ಬೆಳ್ತಂಗಡಿ ಸಮಾಜ ಮಂದಿರದಲ್ಲಿ ನಡೆಯಲಿದ್ದು ಮೇ. 17 ಇಂದು ಸಂಜೆ ಚಾಲನೆ ನೀಡಲಾಯಿತು.

ಉಜಿರೆ ನಿನಾದ ಸೋನಿಯಾ ಯಶೋವರ್ಮ ದೀಪ ಪ್ರಜ್ವಲಿಸಿ ಭಗವದ್ಗೀತೆ ದೇಶದ ದೊಡ್ಡ ಸಂಪತ್ತು ಎಂದರು.ಪ್ರಸಿದ್ದ ಪ್ರವಚನಕಾರರಾದ ವೀಣಾ ಬನ್ನಂಜೆ,ನಾವೂರು ಆರೋಗ್ಯ ಕ್ಲಿನಿಕ್‌ನ ವೈದ್ಯ ಪ್ರದೀಪ್ ಆಟಿಕುಕ್ಕೆ, ಕೃಷಿಕ ಹಿರಿಯ ಸಹಕಾರಿ ಎಂ.ಜನಾರ್ದನ ಪೂಜಾರಿ ಗೇರುಕಟ್ಟೆ,ಬೆಳ್ತಂಗಡಿ ತಾಲೂಕು ಸಾರ್ವಜನಿಕ ಶ್ರೀ ಗೌರಿ ಗಣೇಶೋತ್ಸವ ಸೇವಾ ಸಮಿತಿ ಉಪಾಧ್ಯಕ್ಷ ಗಂಗಾಧರ ಮಿತ್ತಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮ ಸಂಯೋಜಕ ಚರಣ್ ಕುಮಾರ್ ಕುರ್ತೋಡಿ ಸೇರಿದಂತೆ ವಿವಿಧ ಕ್ಷೇತ್ರದ ಪ್ರಮುಖರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಭಗವದ್ಗೀತ ಪ್ರವಚನ ಸಪ್ತಾಹದಲ್ಲಿ ಭಾಗವಹಿಸಿದರು.


ಸುರೇಶ್ ಇವರಿಂದ ಪ್ರಾರ್ಥನೆ ಹಾಡಿದರು.ನಿವೃತ ಸಂಸ್ಕೃತ ಉಪನ್ಯಾಸಕರಾದ ಶ್ರೀಶ ಕುಮಾರ್ ಪ್ರಸ್ತಾವಿಕ ಮಾತನಾಡಿದರು.ಮೋಹನ್ ಶೆಟ್ಟಿಗಾರ್ ಸ್ವಾಗತಿಸಿ,ಸುಧಾಮಣಿ ಕಾರ್ಯಕ್ರಮ ನಿರೂಪಿಸಿದರು.