ಬಾರ್ಯ ಗ್ರಾಮದ ಮೂರುಗೋಳಿ ಶ್ರೀ ಪಾಂಡುರಂಗ ಭಜನಾ ಮಂದಿರದ ನೂತನ ಕಟ್ಟಡ ನಿರ್ಮಾಣದ ಕೆಲಸ ಕಾರ್ಯ ನಡೆಯುತ್ತಿದ್ದು ಆ ಪ್ರಯುಕ್ತ ಪೂರ್ವಭಾವಿ ಸಭೆ ಮೇ 15 ರಂದು ಭಜನಾ ಮಂಡಳಿಯ ಅಧ್ಯಕ್ಷ ಶೇಷಪ್ಪ ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಭಜನಾ ಮಂದಿರ ನಿರ್ಮಾಣ ಕಾಯ೯ ಶೀಘ್ರ ಪೂರ್ಣಗೊಳ್ಳಲು ನಿಧಿ ಸಂಗ್ರಹಣಾ ಕರಪತ್ರ ಬಿಡುಗಡೆಗೊಳಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಬಳಕ್ಕಿಳ, ಕಾರ್ಯದರ್ಶಿ ರಾಮಣ್ಣ ಗೌಡ ಕುರುಡಂಗೆ, ಕೋಶಾಧಿಕಾರಿ ಮೋನಪ್ಪ ಗೌಡ ಮನಿಲ, ಹಾಗೂ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೊದ್ಧಾರ ಸಮಿತಿಯ ಕಾರ್ಯದರ್ಶಿ ಪ್ರಶಾಂತ್ ಪೈ, ಬಾರ್ಯ ಪ್ರಾಥಮಿಕ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರವೀಣ್ ರೈ ಹಿರಿಯರಾದ ನಾರಾಯಣ ಗೌಡ ಮೆಸ್ಕಾಂ , ರೋಹಿನಾಥ್ ಸಾಲ್ಯಾನ್ ಬಾರ್ಯ ಗುತ್ತು , ಬಾಬು ಗೌಡ ಮೂರುಗೋಳಿ , ಅರುಣ್ ಕುಮಾರ್ ಬಜಕ್ಕಳ , ಸದಾನಂದ ಅಡಪ ಪ್ರಕಾಶ್ ಪಂಚಲಾಜೆ , ಶಿವರಾಮ ಕೆಳಗಿನಂಗಡಿ, ದಯಾನಂದ ಆಳ್ವ, ದಿನೇಶ್ ಗೌಡ , ಗುತ್ತಿಗೆದಾರರಾದ ಯಜ್ಞೇಶ್ ಮನಿಲ, ಶೀನಪ್ಪ ಪೂಜಾರಿ ಶುಂಠಿಹಿತ್ಲು, ಶ್ರೀಧರ್ ಕಜೆಮಾರ್ ಉಪಸ್ಥಿತರಿದ್ದರು.