25.6 C
ಪುತ್ತೂರು, ಬೆಳ್ತಂಗಡಿ
September 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ಅಂಗಣೋತ್ಸವ “ದೇವರ ದರ್ಶನ ಬಲಿ”, ಬಟ್ಟಲು ಕಾಣಿಕೆ

ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನ ಶಿಶಿಲದಲ್ಲಿ ಮೇ 13ರಿಂದ ಪ್ರಾರಂಭಗೊಂಡು ಮೇ 21 ರವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಜರುಗಲಿದೆ.

ಇಂದು (ಮೇ 17) ಪೂರ್ವಾಹ್ನ ಅಂಗಣೋತ್ಸವ “ದೇವರ ದರ್ಶನ ಬಲಿ”, ಬಟ್ಟಲು ಕಾಣಿಕೆ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಶ್ರೀನಿವಾಸ ಮೂಡೆತ್ತಾಯ ಮತ್ತು ಉತ್ಸವ ಸಮಿತಿ ಸದಸ್ಯರು, ಆಡಳಿತಾಧಿಕಾರಿ ದಿನೇಶ್ ಎಂ.
, ಅರ್ಚಕರು, ಅಭಿವೃದ್ಧಿ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ, ಪಾರಂಪರಿಕ ಸೇವಾಕರ್ತರು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು ರಾತ್ರಿ ಅಂಗಣೋತ್ಸವ, ಬಂಗರಕಟ್ಟೆ ಪೂಜೆ, ಮೇ 18ರಂದು ಪೂರ್ವಾಹ್ನ ಅಂಗಣೋತ್ಸವ ರಾತ್ರಿ “ಮಹಾ ರಥೋತ್ಸವ”, ಕವಾಟ ಬಂಧನ. ಮೇ 19 ರಂದು ಪೂರ್ವಾಹ್ನ ಕವಾಟೋದ್ಘಾಟನೆ, ಮಹಾಪೂಜೆ ಸಂಜೆ ತೆಪ್ಪೋತ್ಸವ, ಕಟ್ಟೆಪೂಜೆ, ವಸಂತ ಕಟ್ಟೆಯಲ್ಲಿ ಓಕುಳಿ, ಮೀನಗುಂಡಿಯಲ್ಲಿ ಅವಭ್ರತೋತ್ಸವ, ಧ್ವಜ ಅವರೋಹಣ, ಪೂರ್ವಾಹ್ನ ಶ್ರೀ ಶಿಶಿಲೇಶ್ವರ ದೇವರ ಮೂಲಸ್ಥಾನ ಕುಮಾರಗುಡ್ಡೆಯಲ್ಲಿ ರುದ್ರಾಭಿಷೇಕ, ಮಹಾಪೂಜೆ, ಕುಮಾರಾದಿ ದೈವಗಳಿಗೆ ನೇಮ, ರಾತ್ರಿ ಗೋಪುರದ ಬಾಗಿಲಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳಿಗೆ ನೇಮ. ವರ್ಷಾವಧಿ ಕಟ್ಟೆಯ ಬಳಿ ದೈವಗಳ ನೇಮ, ಮೇ 21 ರಂದು ಪೂರ್ವಾಹ್ನ ಶುದ್ಧ ಕಲಶ ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

Related posts

ಮಹೇಶ್ ಶೆಟ್ಟಿ ತಿಮರೋಡಿ ಬೆಂಗಳೂರು ಹೈಕೋರ್ಟ್ ಗೆ ಹಾಜರು

Suddi Udaya

ಧರ್ಮಸ್ಥಳ : ನೇತ್ರಾವತಿ ಸ್ನಾನಘಟ್ಟ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತಾ ಕಾರ್ಯ

Suddi Udaya

ಬೆಳ್ತಂಗಡಿ ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆ

Suddi Udaya

ಮಚ್ಚಿನ ಗ್ರಾಮದ ಕಾಂಗ್ರೆಸ್ ನ ಸಕ್ರಿಯ ನಾಯಕ ಸಂದೀಪ್ ಮಡಿವಾಳ್ ಬಿಜೆಪಿಗೆ ಸೇರ್ಪಡೆ

Suddi Udaya

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ.ಯೋಜನೆಯಿಂದ ಮುಂಡತ್ತೊಡಿ ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಮುಂಡಾಜೆ: ಕೀರ್ತನಾ ಕಲಾತಂಡದ ಮಹಾಸಭೆ: ಅಧ್ಯಕ್ಷರಾಗಿ ಸದಾನಂದ ಬಿ., ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ ಆಯ್ಕೆ

Suddi Udaya
error: Content is protected !!