September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಪ್ರಾರ್ಥನಾರಿಗೆ ಸನ್ಮಾನ

ಓಡಿಲ್ನಾಳ : ಇಲ್ಲಿಯ ಪಣೆಜಾಲು, ವೃಕ್ಷ ಮನೆಯ ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕ ರಾಮಪ್ಪ ಪೂಜಾರಿ ಅವರ ಮನೆಯಲ್ಲಿ ನಡೆದ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ಪೂಜೆಯ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 622 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಪಡೆದ ಕು| ಪ್ರಾರ್ಥನಾ ಪೂಜಾರಿಗೆ ಅರ್ಚಕರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಹಿರಿಯರಾದ ಜನಾರ್ಧನ ಪೂಜಾರಿ ಗೇರುಕಟ್ಟೆ, ನಿವೃತ್ತ ಎಸ್ ಪಿ ಪೀತಾಂಬರ ಹೆರಾಜೆ, ಪ್ರೊ| ಎ ಕೃಷ್ಣಪ್ಪ ಪೂಜಾರಿ, ಕೆ ರಮೇಶ ಬಂಗೇರ, ಶ್ರೀಮತಿ ವಿನೋದಿನಿ ರಾಮಪ್ಪ, ತುಕರಾಮ ಪೂಜಾರಿ ಶ್ರೀಮತಿ ಶಾಂಭವಿ ಬಂಗೇರ, ಶ್ರೀಮತಿ ನಿರೂಪ ಬಾನು, ಜೈ ವಿಕ್ರಂ ಕಲ್ಲಾಪು, ಎಂ ಕೆ ಪ್ರಸಾದ್, ಸಂತೋಷ್ ಕಾಪಿನಾಡ್ಕ, ನಿತೀಶ್ ವೇಣೂರು, ಪ್ರಾರ್ಥನಾ ರವರ ತಾಯಿ ಶ್ರೀಮತಿ ಕುಶಲ ತಂದೆ ಹರಿಶ್ಚಂದ್ರ ಕೇರಿಯ ಹಾಗೂ ಇತರ ಗಣ್ಯರು ಹಾಜರಿದ್ದರು.

Related posts

ಉಜಿರೆ ಎಸ್.ಡಿ.ಎಂ. ಮಹಿಳಾ ಐಟಿಐ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಹೃದಯ-ಶ್ವಾಸ ಪುನಶ್ಚೇತನ ಕುರಿತು ಮಾಹಿತಿ, ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya

ಗಂಡಿಬಾಗಿಲು: ಸಿಯೋನ್ ಆಶ್ರಮದಲ್ಲಿ 26ನೇ ವಾರ್ಷಿಕೋತ್ಸವ ಆಚರಣೆ

Suddi Udaya

ಆರಂಬೋಡಿ 137ನೇ ಬೂತ್ ನಲ್ಲಿ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಬಲಿದಾನ್ ದಿವಸ್ ಆಚರಣೆ

Suddi Udaya

ಮೇ 1: ಎಸ್.ಡಿ.ಎಂ. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ

Suddi Udaya

ಕುಕ್ಕೇಡಿ ಸ್ಫೋಟ ಪ್ರಕರಣ: ಮೃತ ಕುಟುಂಬಕ್ಕೆ ಬೆಳ್ತಂಗಡಿ ಕೆಎಸ್ಎಂಸಿಎ ಯಿಂದ ಸಹಾಯ ಹಸ್ತ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ಬಿಗೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಪರಮೋಚ್ಛ “ಡೈಮಂಡ್ ಪ್ಲಸ್” ಪ್ರಶಸ್ತಿ

Suddi Udaya
error: Content is protected !!