28.6 C
ಪುತ್ತೂರು, ಬೆಳ್ತಂಗಡಿ
September 19, 2026
ಅಭಿನಂದನೆಆಯ್ಕೆತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ ರೋಟರಿ ಕ್ಲಬ್ಬಿಗೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಪರಮೋಚ್ಛ “ಡೈಮಂಡ್ ಪ್ಲಸ್” ಪ್ರಶಸ್ತಿ

ಬೆಳ್ತಂಗಡಿ: 2025-26ನೇ ಸಾಲಿನಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ತಂಡ, ರೂ. 3.1 ಕೋಟಿ ವೆಚ್ಚದಲ್ಲಿ ನಡೆಸಿದ 492 ಸೇವಾ ಕಾರ್ಯಕ್ರಮಗಳನ್ನು ಗುರುತಿಸಿ, ಜೂ. 20ರಂದು ಮೈಸೂರಿನ ಮೈಸೂರು ಯುನಿಯನ್ ನಲ್ಲಿ ನಡೆದ “ಅನುಬಂಧ ಪ್ರಶಸ್ತಿ ಪ್ರಧಾನ” ಸಮಾರಂಭದಲ್ಲಿ, ರೋಟರಿ ಕ್ಲಬ್ ಅಧ್ಯಕ್ಷ ರೊ. ಡಾ ಪ್ರಕಾಶ ಪ್ರಭು ನೇತೃತ್ವದ ತಂಡವನ್ನು, ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಪರಮೋಚ್ಛ ಪ್ರಶಸ್ತಿಯಾದ “ಡೈಮಂಡ್ ಪ್ಲಸ್” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜತೆ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3181ರ ಅಡಿಯಲ್ಲಿ ಬರುವ ಎಲ್ಲಾ ರೋಟರಿ ಕ್ಲಬ್ ಗಳಿಗಿಂತಲೂ ಅತ್ಯಧಿಕ ಸೇವಾ ಕಾರ್ಯಕ್ರಮಗಳನ್ನು ನಡೆಸಿರುವುದಕ್ಕೆ ಪ್ರಥಮ ಬಹುಮಾನ, IMPACT EXCELLENCE ಪ್ರಶಸ್ತಿ ಮತ್ತು ENGAGEMENT EXCELLENCE ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಸದಸ್ಯ ಹಾಗೂ ಎಕ್ಸ್ ಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ರೊ. ಪಿ ಎಚ್ ಎಫ್ ಸುಮಂತ ಕುಮಾರ್ ಜೈನ್ ರವರಿಗೆ UNSUNG HERO ಪ್ಪಶಸ್ತಿ, ರೊ. ಮನೋರಮ ಭಟ್ ಅವರಿಗೆ CITATION FOR WOMEN EMPOWERMENT LEADERSHIP ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ರೊ. ಡಾ ಪ್ರಕಾಶ ಪ್ರಭು, ಕಾರ್ಯದರ್ಶಿ ಡಾ ಎಂ ಎಂ ದಯಾಕರ್, ರೊ. ಡಾ. ಎ. ಜಯಕುಮಾರ್ ಶೆಟ್ಟಿ, ರೊ ಡಾ. ಶಶಿಧರ್ ಡೋಂಗ್ರೆ, ರೊ ಶ್ರೀಧರ ಕೆ ವಿ, ರೊ. ಡಾ ರಾಘವೇಂದ್ರ ಪಿದಮಲೆ, ರೊ ಅರುಣ ಕುಮಾರ್, ರೊ ಬಿ. ಸೋಮಶೇಖರ ಶೆಟ್ಟಿ ಮತ್ತು ಆ್ಯನ್ ಗೀತಾ ಪ್ರಕಾಶ ಪ್ರಭು ಭಾಗವಹಿಸಿದರು.

Related posts

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವದಾಸ್ ಶೆಟ್ಟಿ ಹಿಬರೋಡಿ ರವರಿಂದ ಕೃತಕ ಕಾಲಿನ ವ್ಯವಸ್ಥೆಗೆ ಸಹಾಯಹಸ್ತ

Suddi Udaya

ಉಜಿರೆ: ಆಟೋ ಚಾಲಕ ಮಂಜುನಾಥ ನಿಧನ

Suddi Udaya

ಬಂಟರ ಯಾನೆನಾಡವರ ಸಂಘ ಬೆಳ್ತಂಗಡಿ ನೇತೃತ್ವದಲ್ಲಿ: ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ – ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ. ವಿಶ್ವ ಬಂಟರ ಮಾಹಿತಿ ಕೋಶ’ಕ್ಕಾಗಿ ಕುಟುಂಬದ ಸಮಗ್ರ ಮಾಹಿತಿ ಸಂಗ್ರಹ: ಅಜಿತ್ ಕುಮಾರ್ ರೈ ಮಾಲಾಡಿ

Suddi Udaya

ತುಮಕೂರು ಜಿಲ್ಲೆಯ ಕ್ಯಾತಸಂದ್ರಲ್ಲಿ ನಡೆದ ಗಣಪತಿ ಶೋಭಯಾತ್ರೆಯಲ್ಲಿ ಬಳಂಜದ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ತಂಡ

Suddi Udaya

ಮೂಡಿಗೆರೆ ಜಾವಳಿ ಸಮೀಪ ತೋಟದ ಮನೆ ದರೋಡೆ ಪ್ರಕರಣ ; ಬೆಳ್ತಂಗಡಿಯ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಸೇರಿದಂತೆ ಐವರು ದರೋಡೆಕೋರರ ಬಂಧನ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!