ಮಾಲಾಡಿ: ಬೌದ್ಧ ಮಹಾಸಭಾ ಮಾಲಾಡಿ ಇದರ ವತಿಯಿಂದ ಮೇ 12 ರಂದು ಮಾಲಾಡಿ ಅಂಬೇಡ್ಕರ್ ಭವನದಲ್ಲಿ ಪವಿತ್ರ ಬುದ್ಧ ಪೂರ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಬೌದ್ಧ ಮಹಾಸಭಾದ ಅಧ್ಯಕ್ಷ ಸುನೀಲ್ ಮಾಲಾಡಿ ಹಾಗೂ ಅದೇ ದಿನ 25 ನೇ ವರ್ಷದ ಮದುವೆ ದಿನದ ಸಂಭ್ರಮದಲ್ಲಿದ್ದ ಗುಲಾಬಿ ಆನಂದ ದಂಪತಿಗಳು ಭಗವಾನ್ ಬುದ್ಧನ ಮೂರ್ತಿಯ ಎದುರು ಕ್ಯಾಂಡಲ್ ಉರಿಸಿ ಚಾಲನೆ ನೀಡಿದರು. ಹಿರಿಯರಾದ ಬಿ.ಕೆ.ಚೆನ್ನಪ್ಪ ಹಾಗೂ ಕೇಶವ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಕಿರಿಯರಾದ ಪ್ರಣಮ್ ಶರಣ್ ಸುಜ್ನಾತ್ ಹಾಗೂ ಶ್ರವಣ್ ದೀಪ ಬೆಳಗಿಸಿದರು. ಬಳಿಕ ಹಿರಿಯ ಉಪಾಸಕರಾದ ಬಾಬಿ ಮಡಂತ್ಯಾರು ಇವರು ಬುದ್ಧವಂದನೆ, ಧಮ್ಮವಂದನೆ ಹಾಗೂ ಸಂಘವಂದನೆಯನ್ನು ನಡೆಸಿಕೊಟ್ಟರು. ಸುಕೇಶ್ ಕೆ ಸ್ವಾಗತಿಸಿದರು.