24.4 C
ಪುತ್ತೂರು, ಬೆಳ್ತಂಗಡಿ
May 20, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ: ಮಹಾ ರಥೋತ್ಸವ

ಶಿಶಿಲ: ಶ್ರೀ ಶಿಶಿಲೇಶ್ವರ ದೇವಸ್ಥಾನ ಶಿಶಿಲದಲ್ಲಿ ಮೇ 13ರಿಂದ ಪ್ರಾರಂಭಗೊಂಡು ಮೇ 21 ರವರೆಗೆ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಜರುಗಲಿದೆ.

ಮೇ 18 ರಂದು ಅಂಗಣೋತ್ಸವ, ರಾತ್ರಿ “ಮಹಾ ರಥೋತ್ಸವ”, ಕವಾಟ ಬಂಧನ ವಿಜೃಂಭಣೆಯಿಂದ ಜರುಗಿತು.

ಈ ಸಂದರ್ಭದಲ್ಲಿ ಶ್ರೀ ಶ್ರೀನಿವಾಸ ಮೂಡೆತ್ತಾಯ ಮತ್ತು ಉತ್ಸವ ಸಮಿತಿ ಸದಸ್ಯರು, ಆಡಳಿತಾಧಿಕಾರಿ ದಿನೇಶ್ ಎಂ.
, ಅರ್ಚಕರು, ಅಭಿವೃದ್ಧಿ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ, ಪಾರಂಪರಿಕ ಸೇವಾಕರ್ತರು ಹಾಗೂ ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು (ಮೇ 19 ) ಪೂರ್ವಾಹ್ನ ಕವಾಟೋದ್ಘಾಟನೆ, ಮಹಾಪೂಜೆ ಸಂಜೆ ತೆಪ್ಪೋತ್ಸವ, ಕಟ್ಟೆಪೂಜೆ, ವಸಂತ ಕಟ್ಟೆಯಲ್ಲಿ ಓಕುಳಿ, ಮೀನಗುಂಡಿಯಲ್ಲಿ ಅವಭ್ರತೋತ್ಸವ, ಧ್ವಜ ಅವರೋಹಣ, ಪೂರ್ವಾಹ್ನ ಶ್ರೀ ಶಿಶಿಲೇಶ್ವರ ದೇವರ ಮೂಲಸ್ಥಾನ ಕುಮಾರಗುಡ್ಡೆಯಲ್ಲಿ ರುದ್ರಾಭಿಷೇಕ, ಮಹಾಪೂಜೆ, ಕುಮಾರಾದಿ ದೈವಗಳಿಗೆ ನೇಮ, ರಾತ್ರಿ ಗೋಪುರದ ಬಾಗಿಲಲ್ಲಿ ಚಕ್ರವರ್ತಿ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳಿಗೆ ನೇಮ. ವರ್ಷಾವಧಿ ಕಟ್ಟೆಯ ಬಳಿ ದೈವಗಳ ನೇಮೋತ್ಸವ ನಡೆಯಲಿದೆ.

Related posts

ಚೈನೈ: ಶಾಸ್ತ್ರೀಯ ಸಂಗೀತ ಆಕಾಶ್ ಕೃಷ್ಣ ದ್ವಿತೀಯ

Suddi Udaya

ನಾರಾವಿಯಲ್ಲಿ ಹೆಗ್ಗಡೆ ಸಂಗಮ 2023 ಹಾಗೂ ಸನ್ಮಾನ ಕಾರ್ಯಕ್ರಮ

Suddi Udaya

ರೋಟರಿ ಕ್ಲಬ್ ಮಡಂತ್ಯಾರ್ ಗೆ ಪ್ರತಿಷ್ಠಿತ ಪ್ಲಾಟಿನಂ ಕ್ಲಬ್ ಪ್ರಶಸ್ತಿ

Suddi Udaya

ಕಡಿರುದ್ಯಾವರ ಕುಕ್ಕಾವು ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಸ.ಪ್ರ.ದ. ಕಾಲೇಜಿನಲ್ಲಿ ರೋವರ್ ರೇಂಜರ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ಚಟುವಟಿಕೆಗಳ ಉದ್ಘಾಟನೆ

Suddi Udaya

ಮಾನಸಿಕ ಹಾಗೂ ಬುದ್ಧಿಮಾಂದ್ಯ ವಿಶೇಷ ವಿಕಲಚೇತನರ ಗುರುತಿನ ಚೀಟಿ ನವೀಕರಣ ಮತ್ತು ಹೊಸ ಗುರುತಿಸುವಿಕೆಯ ಶಿಬಿರ

Suddi Udaya
error: Content is protected !!