ಬೆಳ್ತಂಗಡಿ: ಯುವವಾಹಿನಿ ವೇಣೂರು ಘಟಕದ ಸೇವಾ ಯೋಜನೆ ವತಿಯಿಂದ ಅಂಡಿಂಜೆ ಗ್ರಾಮದ ಕೋಡಿ ದರ್ಖಾಸು ಮನೆಯ ಸುಜಿತ್ ಪೂಜಾರಿಯವರು ಕಾಶಿಪಟ್ಣದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ ತಲೆಗೆ ಗಂಭೀರ ಗಾಯಗೊಂಡು ಕೋಮಾ ಸ್ಥಿತಿಯಲ್ಲಿ ಮಂಗಳೂರಿನ ಕೆ ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಘಟಕದ ವತಿಯಿಂದ ಸೇವಾ ನಿಧಿ ರೂ. 10,000ಯನ್ನು ಅಧ್ಯಕ್ಷ ಶುಭಕರ್ ಪೂಜಾರಿ ನೀಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಂತರಿಕ ಲೆಕ್ಕ ಪರಿಶೋಧಕರಾದ ಅರುಣ್ ಕೋಟ್ಯಾನ್, ನಾಮನಿರ್ದೇಶನ ಸದಸ್ಯರಾದ ಸುರೇಶ್ ಅಂಡಿಂಜೆ, ಬೆಳ್ತಂಗಡಿ ಯುವವಾಹಿನಿ ಘಟಕದ ಸ್ಥಾಪಕಾಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ ಉಪಸ್ಥಿತರಿದ್ದರು.