ಓಡಿಲ್ನಾಳ : ಇಲ್ಲಿಯ ಪಣೆಜಾಲು, ವೃಕ್ಷ ಮನೆಯ ಕೆನರಾ ಬ್ಯಾಂಕಿನ ನಿವೃತ್ತ ಪ್ರಬಂಧಕ ರಾಮಪ್ಪ ಪೂಜಾರಿ ಅವರ ಮನೆಯಲ್ಲಿ ನಡೆದ ಶ್ರೀ ಸತ್ಯನಾರಾಯಣ ಸ್ವಾಮಿ ದೇವರ ಪೂಜೆಯ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ರಲ್ಲಿ 622 ಅಂಕ ಪಡೆದು ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ ಪಡೆದ ಕು| ಪ್ರಾರ್ಥನಾ ಪೂಜಾರಿಗೆ ಅರ್ಚಕರ ಸಮ್ಮುಖದಲ್ಲಿ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯರಾದ ಜನಾರ್ಧನ ಪೂಜಾರಿ ಗೇರುಕಟ್ಟೆ, ನಿವೃತ್ತ ಎಸ್ ಪಿ ಪೀತಾಂಬರ ಹೆರಾಜೆ, ಪ್ರೊ| ಎ ಕೃಷ್ಣಪ್ಪ ಪೂಜಾರಿ, ಕೆ ರಮೇಶ ಬಂಗೇರ, ಶ್ರೀಮತಿ ವಿನೋದಿನಿ ರಾಮಪ್ಪ, ತುಕರಾಮ ಪೂಜಾರಿ ಶ್ರೀಮತಿ ಶಾಂಭವಿ ಬಂಗೇರ, ಶ್ರೀಮತಿ ನಿರೂಪ ಬಾನು, ಜೈ ವಿಕ್ರಂ ಕಲ್ಲಾಪು, ಎಂ ಕೆ ಪ್ರಸಾದ್, ಸಂತೋಷ್ ಕಾಪಿನಾಡ್ಕ, ನಿತೀಶ್ ವೇಣೂರು, ಪ್ರಾರ್ಥನಾ ರವರ ತಾಯಿ ಶ್ರೀಮತಿ ಕುಶಲ ತಂದೆ ಹರಿಶ್ಚಂದ್ರ ಕೇರಿಯ ಹಾಗೂ ಇತರ ಗಣ್ಯರು ಹಾಜರಿದ್ದರು.